ಹಾಸನ: ನಗರದ ಸಾಲಗಾಮೆ ರಸ್ತೆ ಬಳಿ ಎಂಸಿಎಫ್ ಕ್ವಾಟ್ರಸ್ ಬಳಿ ₹ 4.77 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಶಾಸಕ ಪ್ರೀತಂ ಜೆ. ಗೌಡ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾಲಗಾಮೆ ರಸ್ತೆಯಿಂದ ಎಂಸಿಎಫ್ ಕ್ವಾಟ್ರಸ್ಗೆ ಹಾಗೂ ಬಿ.ಟಿ.ಕೊಪ್ಪಲಿನಿಂದ ಸಾಲಗಾಮೆ ರಸ್ತೆ ಸಂಪರ್ಕಿಸುವ ಗ್ರಾಮೀಣ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದೆ. ಎರಡು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಸಾಲಗಾಮೆ ರಸ್ತೆಯಿಂದ ಅರಸೀಕೆರೆ ರಸ್ತೆಗೆ ಹೋಗುವುದಕ್ಕೆ ಸುಸಜ್ಜಿತವಾದ ರಸ್ತೆ ಅವಶ್ಯಕತೆ ಇತ್ತು. ಹೀಗಾಗಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದರು.