ETV Bharat / state

ಮೋದಿ ನನ್ನ ಬಗ್ಗೆ ಮಾತನಾಡಬಹುದಾ? ಅವರಿಗೆ ನನ್ನ ಬಗ್ಗೆ ಭಯ ಇರಬಹುದೇನೋ : ಸಿಎಂ ಸಿದ್ದರಾಮಯ್ಯ - CM Siddaramaiah visited Hassanambe

ಹಾಸನಾಂಬೆಯ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ ಮಾಧ್ಯಮದವರೊಂದಿಗೆ ಹಲವಾರು ವಿಚಾರಗಳ ಕುರಿತು ಪ್ರತಿಕ್ರಿಯಿಸಿದ್ದಾರೆ.

CM Siddaramaiah
ಸಿಎಂ ಸಿದ್ದರಾಮಯ್ಯ
author img

By ETV Bharat Karnataka Team

Published : Nov 7, 2023, 5:29 PM IST

Updated : Nov 7, 2023, 6:07 PM IST

ಸಿಎಂ ಸಿದ್ದರಾಮಯ್ಯ ಮಾಧ್ಯಮ ಪ್ರತಿಕ್ರಿಯೆ

ಹಾಸನ: ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ವಿಚಾರ ಮಾತಾಡೋದು ಏನಿರುತ್ತೆ?. ಮೊದಿಯವರಿಗೆ ನಮ್ಮ ಬಗ್ಗೆ ಭಯ‌ ಇರಬಹುದೇನೋ ಅಂತ ಅಂದುಕೊಂಡಿದ್ದೀನಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಇಂದು ಹಾಸನಾಂಬೆ ದರ್ಶನ ಪಡೆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಪ್ರಧಾನಿ ಮೋದಿ ವಿರುದ್ಧ ದುರಹಂಕಾರದಿಂದ ಮಾತನಾಡುತ್ತಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಮೋದಿಯವರು ನನ್ನ ಬಗ್ಗೆ ಮಾತನಾಡಬಹುದಾ? ಮಧ್ಯಪ್ರದೇಶ ಚುನಾವಣಾ ಪ್ರಚಾರದಲ್ಲಿ ಕರ್ನಾಟಕದ ವಿಚಾರ ಮಾತಾಡೋದು ಏನಿರುತ್ತೆ?. ಚುನಾವಣಾ ಪ್ರಚಾರ ಮಾಡಬೇಕು ಅಷ್ಟೇ, ಮೋದಿಯವರಿಗೆ ನಮ್ಮ ಬಗ್ಗೆ ಭಯ‌ ಇರಬೋದೇನೋ ಎಂದರು.

ಮುಂದುವರೆದು, 'ಕೇವಲ ಶಾಸಕರನ್ನು ಸೆಳೆಯೋ‌ ಕೆಲಸ ಮಾಡುತ್ತಿದ್ದಾರೆ ಎಂಬ ಕುಮಾರಸ್ವಾಮಿ ‌ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ‌ಯಾವತ್ತು ಸತ್ಯ ಹೇಳಿದ್ದಾರೆ?, ಎಲ್ಲ ಬರಿ ಸುಳ್ಳೇ ಹೇಳೋದು. ಅದು ಬಿಟ್ಟರೆ ಅವರಿಗೆ ಬೇರೆ ಕೆಲಸ ಇಲ್ಲ ಎಂದರು. ಕಿಯೋನಿಕ್ಸ್ ಅಧಿಕಾರಿ ಸಂಗಪ್ಪ ಲಂಚ ಕೇಳಿದ ಆರೋಪ ವಿಚಾರದ ಬಗ್ಗೆ ಮಾತನಾಡುತ್ತ, ನಾನು ಈ ಬಗ್ಗೆ ವಿಚಾರಣೆ ಮಾಡುತ್ತೇನೆ. ಅದು ಸತ್ಯವಾಗಿದ್ದರೆ ತನಿಖೆ ಮಾಡಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಿಎಂ ಭರವಸೆ ನೀಡಿದರು.

ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದೆ. ಹಿಂಗಾರು ಮಳೆ ಉತ್ತಮವಾಗಲಿ‌ ಎಂದು ಹಾಸನಾಂಬೆಗೆ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು. ಹಾಗೇ ಮಾತನಾಡುತ್ತ, ಬರದ ವಿಚಾರದಲ್ಲಿ‌ ನಾವು ಕೇಂದ್ರದ ಮೇಲೆ ಬೊಟ್ಟು ಮಾಡುತ್ತಿಲ್ಲ. ದುಡ್ಡು ಕೇಳುತ್ತಿದ್ದೇವೆ, ಕೇಳಬೇಕೆ ಬೇಡ್ವಾ? ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯ, ಕೇಂದ್ರ ಸಮನ್ವಯದಿಂದ ಕೆಲಸ ಮಾಡಬೇಕು. ಕರ್ನಾಟಕದಲ್ಲಿ ಬರ ಬಂದರೆ ಕೇಂದ್ರದ ಜವಾಬ್ದಾರಿಯೂ ಇರುತ್ತೆ. ಕೇಂದ್ರಕ್ಕೆ ತೆರಿಗೆ ಮೂಲಕ ಹಣ ಕೊಡೋದು ರಾಜ್ಯಗಳು. ನಮಗೆ ಸಂಕಷ್ಟ ಎದುರಾದಾಗ ನೆರವಾಗಬೇಕಾಗಿದ್ದು ಕೇಂದ್ರದ ಜವಾಬ್ದಾರಿ. 33,700 ಕೋಟಿ ಬೆಳೆ ನಷ್ಟವಾಗಿದ್ದು, 17 ಸಾವಿರ‌ ಕೋಟಿ ರೂ. ಕೇಳಿದ್ದೇವೆ. ರೈತರು ಸಂಕಷ್ಟದಲ್ಲಿದ್ದಾರೆ, ಬೇಗ ಹಣ ಕೊಡಿ ಎಂದು ಕೇಳುತ್ತಿದ್ದೇವೆ ಅಷ್ಟೆ ಎಂದರು.

ಕಾಂಗ್ರೆಸ್ ಶೇಮ್ ಲೆಸ್ ಪಾರ್ಟಿ ಎಂಬ ವಿಚಾರ: ಯತ್ನಾಳ್ ಏನು ಬಹಳ ಸದ್ಗುಣ ಇರೋ ವ್ಯಕ್ತಿನಾ? ಬಿಜೆಪಿಯವರೇ ನಡವಳಿಕೆ ಸರಿ ಇಲ್ಲ ಎಂದು ನೋಟಿಸ್ ಕೊಟ್ಟಿಲ್ವಾ? ಇನ್ನು ಅವರಿಗೆ ನೋಟಿಸ್ ಕೊಟ್ಟವರ್ಯಾರು? 'ಯತ್ನಾಳ್ ಹಿಮ್​ಸೆಲ್ಫ್ ಈಸ್ ಎ ಶೇಮ್ ಲೆಸ್' ಎಂದು ಸಿಎಂ ಲೇವಡಿ ಮಾಡಿದರು.

ಮೌಢ್ಯ ವಿರೋಧಿ ಕಾನೂನು ಬಗ್ಗೆ ಸಿಎಂ ಪ್ರತಿಕ್ರಿಯೆ ನೀಡಿ, ಹಾಸನಾಂಬೆ ದರ್ಶನವನ್ನು ಹಿಂದಿನಿಂದಲೂ ಆಚರಣೆ ಮಾಡುತ್ತ ಬಂದಿದ್ದಾರೆ. ನಾನು ಮೌಢ್ಯಗಳನ್ನು ಆಚರಿಸುವ ರೂಢಿಯಿಲ್ಲ. ದೇವರ ಬಗ್ಗೆ ನನಗೆ ನಂಬಿಕೆ ಇದೆ. 99.99% ಜನ ದೇವರನ್ನು ನಂಬುತ್ತಾರೆ. ಅದು ಅವರವರ ಭಾವನೆಗೆ ಬಿಟ್ಟ ವಿಚಾರ ಎಂದು ಹೇಳಿದರು.

ಬೇರೆ ಪಕ್ಷದ ನಾಯಕರು ಕಾಂಗ್ರೆಸ್ ಸೇರುವ ಊಹಾಪೋಹಕ್ಕೆ ನಾವು ಯಾರನ್ನೂ ಕರೆದುಕೊಂಡು ಬರೋದಿಲ್ಲ. ಪಕ್ಷದ ಸಿದ್ಧಾಂತ, ನಾಯಕತ್ವ ಒಪ್ಪಿ ಬಂದರೆ ಬೇಡ ಅನ್ನುವುದಿಲ್ಲ. ರಾಜ್ಯದಲ್ಲಿ ವಿದ್ಯುತ್​ ಸ್ಥಿತಿ ಉತ್ತಮವಾಗುತ್ತಿದೆ. 7 ಗಂಟೆ ತ್ರೀ ಫೇಸ್ ಕರೆಂಟ್ ನೀಡಲು ನಿನ್ನೆ ತೀರ್ಮಾನಿಸಲಾಗಿದೆ. ಲೋಕಸಭಾ ಚುನಾವಣೆಗೆ ಎಲ್ಲರನ್ನೂ ಒಟ್ಟುಗೂಡಿಸಿ ಚರ್ಚಿಸಿ‌ ಅಭ್ಯರ್ಥಿ ಹಾಕುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಹಾಸನಾಂಬೆ ದೇವಿಯ ಪವಿತ್ರ ಕ್ಷೇತ್ರದಿಂದಲೇ ಒಗ್ಗಟ್ಟು ಪ್ರದರ್ಶನ : ಹೆಚ್ ಡಿ ಕುಮಾರಸ್ವಾಮಿ

Last Updated : Nov 7, 2023, 6:07 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.