ETV Bharat / state

ಹಾಸನದಲ್ಲಿ ಅಕ್ರಮ‌ ಕಟ್ಟಡಗಳ ತೆರವು: ರಾಜಕೀಯ ಸೇಡಿನ ಆರೋಪ - Hassan News

ಅಕ್ರಮ‌ ಕಟ್ಟಡಗಳ ತೆರವು ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ವಿರೋಧ ವ್ಯಕ್ತಪಡಿಸಿದ್ದರಿಂದ ಇಂದು ಪೊಲೀಸ್ ಬಿಗಿ ಬಂದೋಬಸ್ಥ್‌ನಲ್ಲಿ ಕಟ್ಟಡ ತೆರವುಗೊಳಿಸಲಾಯಿತು‌‌.

Clearance of illegal buildings in Hassan
ಹಾಸನದಲ್ಲಿ ಅಕ್ರಮ‌ ಕಟ್ಟಡಗಳ ತೆರವು
author img

By

Published : Oct 13, 2020, 3:34 PM IST

ಹಾಸನ: ನಗರದಲ್ಲಿ ಇಂದು ಅಕ್ರಮ‌ ಕಟ್ಟಡಗಳ ತೆರವು ಕಾರ್ಯಾಚರಣೆ ನಡೆದಿದ್ದು, ದ್ವೇಷ ರಾಜಕಾರಣದಿಂದ ಕಟ್ಟಡ ತೆರವು ಮಾಡಲಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪ ಮಾಡಿದ್ದಾರೆ.

ನಗರದ ಹೊರವಲಯದಲ್ಲಿರುವ ದೇವೇಗೌಡ ನಗರದಲ್ಲಿರುವ ಮೇರಿ ಎಂಬುವವರು ಅಕ್ರಮವಾಗಿ ಕಟ್ಟಡ ಕಟ್ಟಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಪಿಡಿಒ ಮೋಹನ್ ನೇತೃತ್ವದಲ್ಲಿ ನಾಲ್ಕು ಬಾರಿ ಕಟ್ಟಡ ತೆರವುಗೊಳಿಸಲು ಯತ್ನಿಸಲಾಗಿತ್ತು.

ಈ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರು ಮತ್ತು ಮುಖಂಡರು ವಿರೋಧ ವ್ಯಕ್ತಪಡಿಸಿದ್ದರಿಂದ ಇಂದು ಪೊಲೀಸ್ ಬಿಗಿ ಬಂದೋಬಸ್ಥ್‌ನಲ್ಲಿ ಕಟ್ಟಡ ತೆರವುಗೊಳಿಸಲಾಯಿತು‌‌. ಆದರೆ, ನಾವು ಜೆಡಿಎಸ್‌ನವರು ಎಂಬ ಕಾರಣದಿಂದ ನಮ್ಮ ಮನೆಯನ್ನು ತೆರವುಗೊಳಿಸಿದ್ದಾರೆ.‌ ಇದೇ ಗ್ರಾಮದಲ್ಲಿ ಹಲವರು ಅಕ್ರಮವಾಗಿ ಮನೆ ಕಟ್ಟಿದ್ದರೂ ನಮ್ಮನ್ನು ಮಾತ್ರ ಗುರಿಯಾಗಿಸಿ ಕಾರ್ಯಾಚರಣೆ ಮಾಡಲಾಗಿದೆ ಎಣದು ಆರೋಪಿಸಿದ್ದಾರೆ.

ಈ ಆರೋಪ ನಿರಾಕರಿಸಿರುವ ಪಿಡಿಒ ಮೋಹನ್, ನನಗೆ ಯಾವ ರಾಜಕೀಯ ಒತ್ತಡವೂ ಇಲ್ಲ. ನಾವು ಕಾನೂನು ಪ್ರಕಾರವೇ ಅಕ್ರಮ ಕಟ್ಟಡ ತೆರವುಗೊಳಿಸಿದ್ದೇವೆ ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.