ETV Bharat / state

ವೃದ್ಧೆ ಮೇಲೆ ಚಿರತೆ ದಾಳಿ.. ಗಾಯಾಳುವಿನ ತಲೆಗೆ 28 ಹೊಲಿಗೆ - ಅರಣ್ಯ ಇಲಾಖೆ ಅಧಿಕಾರಿಗಳು

ಹಾಸನದ ಚಿಗಳ್ಳಿ ಗ್ರಾಮದಲ್ಲಿ ಶನಿವಾರ ವೃದ್ಧೆ ರಂಗಮ್ಮನ ಮೇಲೆ ಚಿರತೆ ದಾಳಿ ಮಾಡಿದೆ. ದಾಳಿ ವೇಳೆ ತಲೆಗೆ ಗಂಭೀರ ಗಾಯವಾಗಿದ್ದು, 28 ಹೊಲಿಗೆಗಳನ್ನು ಹಾಕಲಾಗಿದೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿರತೆ ದಾಳಿಗೊಳಗಾದ ವೃದ್ಧೆ ರಂಗಮ್ಮ
author img

By

Published : Aug 17, 2019, 8:46 PM IST

Updated : Aug 22, 2019, 8:10 AM IST

ಹಾಸನ: ವೃದ್ಧೆ ಮೇಲೆ ಚಿರತೆ ಏಕಾಏಕಿ ದಾಳಿ ನಡೆಸಿದ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಶನಿವಾರ ಮುಂಜಾನೆ 4 ಗಂಟೆಗೆ ನಡೆದಿದೆ.

ರಂಗಮ್ಮ (70) ಎಂಬುವರು ಚಿರತೆ ದಾಳಿಯಿಂದ ಗಾಯಗೊಂಡಿದ್ದಾರೆ. ರಂಗಮ್ಮನ ತಲೆ ಸೇರಿದಂತೆ ದೇಹದ ಭಾಗಗಳ ಮೇಲೆ ತೀವ್ರ ಗಾಯಗಳಾಗಿವೆ. ತಲೆಗೆ 28 ಹೊಲಿಗೆ ಹಾಕಲಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರ ಬಂದ ರಂಗಮ್ಮನ ಮೇಲೆ ದಾಳಿ ನಡೆಸಿದಾಗ ತಲೆ ಭಾಗಕ್ಕೆ ಕಾಲಿನಿಂದ ಪರಚಿದೆ. ರಂಗಮ್ಮ ಕಿರುಚಾಡಿದಾಗ, ಮೊಮ್ಮಗಳು ಹೊರಗೆ ಬಂದಿದ್ದಾಳೆ. ನಂತರ ಮಗ ಚಿರತೆ ಕಣ್ಣಿನ ಮೇಲೆ ಬಟ್ಟೆಹಾಕಿ ಅದನ್ನು ಬೇರೆಡೆ ಎಸೆದು, ತಾಯಿಯನ್ನು ರಕ್ಷಿಸಿದ್ದಾನೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ.

ವೃದ್ಧೆ ಮೇಲೆ ಚಿರತೆ ದಾಳಿ.. ಗಾಯಾಳುವಿನ ತಲೆಗೆ 28 ಹೊಲಿಗೆ

ಇದೇ ಚಿರತೆ ನಾಲ್ಕೈದು ಜನರ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಗ್ರಾಮದ ಜನರು ಜಮೀನುಗಳಿಗೆ ತೆರಳಲು ಭಯಭೀತರಾಗಿದ್ದಾರೆ. ನಾಗನಹಳ್ಳಿ ಪಕ್ಕದಲ್ಲಿರುವ ಕಲ್ಲು ಗುಡುಗನಹಳ್ಳಿಯಲ್ಲಿ ಗ್ರಾನೈಟ್ ಕಲ್ಲುಗಳನ್ನು ತೆಗೆದು ಗುಂಡಿಯನ್ನು ಮಾಡಿದ್ದಾರೆ. ಅದರಿಂದ ಪ್ರಾಣಿಗಳಿಗೆ ವಾಸಲು ಯೋಗ್ಯವಾಗಿದೆ. ಹೀಗಾಗಿ ಗ್ರಾನೆಟ್ ಕ್ವಾರಿಯನ್ನು ನಿಲ್ಲಿಸಬೇಕು. ಅರಣ್ಯ ಅಧಿಕಾರಿಗಳು ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಸಿದರು.

Intro:ಹಾಸನ : ಮಹಿಳೆಯ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿರುವ ಘಟನೆ ತಾಲೂಕಿನ ಚಿಗಳ್ಳಿ ಗ್ರಾಮದಲ್ಲಿ ಶನಿವಾರ ಮುಂಜಾನೆ 4 ಗಂಟೆಯಲ್ಲಿ ನಡೆದಿದೆ.

ರಂಗಮ್ಮ (70) ಗಾಯಗೊಂಡ ಮಹಿಳೆ. ಚಿರತೆ ಏಕಾಏಕಿ ದಾಳಿ ನಡೆಸಿ ಪರಿಣಾಮ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳ ಮೇಲೆ ತೀವ್ರ ಗಾಯಗಳಾಗಿವೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Body:ಮುಂಜಾನೆ ಮೂತ್ರ ವಿಸರ್ಜನೆಗೆಂದು ಮನೆಯಿಂದ ಹೊರ ಬಂದಿದ್ದು, ಅಲ್ಲೇ ಇದ್ದ ಚಿರತೆ ಮಹಿಳೆ ಮೇಲೆ ಏಕಾಏಕಿ ದಾಳಿ ನಡೆಸಿ ತಲೆ ಮಧ್ಯಭಾಗಕ್ಕೆ ಕಾಲಿನಿಂದ ಗೆಬರಿ ಬಾಯಿ ಹಾಕಿದೆ. ಈ ವೇಳೆ ರಂಗಮ್ಮ ಗಾಬರಿಗೊಂಡು ಕಿರುಚಾಡಿದಾಗ ಮನೆಯಿಂದ ಮೊಮ್ಮಗಳು ಮೊದಲು ಹೊರಗೆ ಬಂದು ಗಾಬರಿಗೊಂಡಿದ್ದಾರೆ, ನಂತರ ಮಗ ಬಂದು ಚಿರತೆ ಮೇಲೆ ಬಟ್ಟೆಹಾಕಿ ಕಣ್ಣು ಕಾಣದ ಹಾಗೆ ಮಾಡಿ ಓಡಿಸಿ ಆಕೆಯನ್ನು ರಕ್ಷಿಸಿದ್ದಾರೆ.

ತಲೆಯು ಸೀಳಿ ಹೋಗಿದ್ದು ತಕ್ಷಣ ನಗರದ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದ್ದು 28 ಹೊಲಿಗೆ ಹಾಕಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಆಗಮಿಸಿ ಪರಿಶೀಲಿಸಿದ್ದಾರೆ.

ಸಿಗಲಿ ಗ್ರಾಮದಲ್ಲಿ ಹಿಂದೆ ಒಂದು ಮಗುವನ್ನು ಅರ್ಧ ದೇಹ ತಿಂದು ಹೋಗಿದ್ದ ವ್ಯಾಗ್ರ. ಇದಲ್ಲದೆ ನಾಲ್ಕೈದು ಜನರಿಗೆ ಕಚ್ಚಿ ಗಾಯಗೊಳಿಸಿದೆ. ಗ್ರಾಮದ ಜನರು ಜಮೀನುಗಳಿಗೆ ತೆರಳಲು ಭಯಭೀತರಾಗಿದ್ದಾರೆ. ನಾಗನಹಳ್ಳಿ ಪಕ್ಕದಲ್ಲಿರುವ ಕಲ್ಲು ಗುಡುಗನಹಳ್ಳಿ ಯಲ್ಲಿ ಗ್ರಾನೈಟ್ ಕಲ್ಲುಗಳನ್ನು ತೆಗೆದು ಗುಂಡಿಯನ್ನು ಮಾಡಿದ್ದಾರೆ ಆದಕಾರಣ ಬೀಡುಬಿಟ್ಟಿವೆ. ಇಲ್ಲಿ 4 ಚಿರತೆಗಳನ್ನು ಹಿಡಿದಿದ್ದರೂ ಸಹ ಮತ್ತೆ ಮತ್ತೆ ಅದೇ ಕೋರೆ ಒಳಗಡೆ ಚರಿತೆಗಳು ಬಂದು ಸೇರುತ್ತಿವೆ ಹೀಗಾಗಿ ಗ್ರಾನೆಟ್ ಕ್ವಾರಿಯನ್ನು ನಿಲ್ಲಿಸಬೇಕೆಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Conclusion:ಒಟ್ಟಾರೆ ಇಲ್ಲಿ ನಾಲ್ಕೈದು ಚಿರಿತೆಗಳು ಇದ್ದು, ಕೂಡಲೇ ಅರಣ್ಯ ಅಧಿಕಾರಿಗಳು ಗಮನ ನೀಡಿ ಚಿರತೆ ಹಿಡಿದು ಗ್ರಾಮಸ್ಥರಲ್ಲಿ ನ ಭಯವನ್ನು ಹೋಗಲಾಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

- ಅರಕೆರೆ ಮೋಹನಕುಮಾರ ಈಟಿವಿ ಭಾರತ ಹಾಸನ.
Last Updated : Aug 22, 2019, 8:10 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.