ETV Bharat / state

ಕೇಂದ್ರದ ವಿದ್ಯುತ್​​ ​ಕಾಯ್ದೆ ತಿದ್ದುಪಡಿ ನೀತಿ ವಿರುದ್ಧ ಸೆಸ್ಕ್​ ನೌಕರರ ಪ್ರತಿಭಟನೆ - Employees protest

ಕೇಂದ್ರದ ವಿದ್ಯುತ್​​ ​ಕಾಯ್ದೆ ತಿದ್ದುಪಡಿ ನೀತಿ ವಿರುದ್ಧ ರಾಜ್ಯದ ಹಲವೆಡೆ ಪ್ರತಿಭಟನೆ ನಡೆದಿದೆ. ಇನ್ನು ಅರಕಲಗೂಡು ತಾಲೂಕಿನ ಸೆಸ್ಕ್​ ಬಳಿ ನೌಕರರು ಪ್ರತಿಭಟಿಸಿದರು. ಈ ವೇಳೆ ಯಾವುದೇ ಕಾರಣಕ್ಕೂ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಖಾಸಗೀಕರಣ ಮಾಡಬಾರದು ಎಂದು ಆಗ್ರಹಿಸಿದರು.

Cesc Employees protest against Center's electricity law amendment policy
ಕೇಂದ್ರದ ವಿದ್ಯುತ್​​ ​ಕಾಯ್ದೆ ತಿದ್ದುಪಡಿ ನೀತಿ ವಿರುದ್ಧ ಸೆಸ್ಕ್​ ನೌಕರರ ಪ್ರತಿಭಟನೆ
author img

By

Published : Jun 1, 2020, 11:13 PM IST

Updated : Jun 2, 2020, 9:55 AM IST

ಅರಕಲಗೂಡು (ಹಾಸನ): ಭಾರತ ಸರ್ಕಾರದ ವಿದ್ಯುತ್ ಸಚಿವಾಲಯವು 2003ರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ಮಾಡುತ್ತಿದ್ದು. ಪ್ರಾಸ್ತಾವಿಕ ವಿದ್ಯುತ್ ಸುಧಾರಣಾ ಕಾಯ್ದೆಯ ತಿದ್ದುಪಡಿ 2020ರಲ್ಲಿ ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳನ್ನು ಖಾಸಗಿಕರಣಗೊಳಿಸಲು ಮುಂದಾಗಿದೆ.

ಆದ್ದರಿಂದ ಪ್ರಾಸ್ತಾವಿಕ 2020 ಮಸೂದೆಯನ್ನು ವಿರೋಧಿಸುವ ಸಲುವಾಗಿ ರಾಮನಾಥಪುರ ಉಪ ವಿಭಾಗ ವ್ಯಾಪ್ತಿಯ ಎಲ್ಲಾ ಕೆಪಿಟಿಸಿಎಲ್​ ಹಾಗೂ ಸೆಸ್ಕ್​​​​ ಅಧಿಕಾರಿಗಳು ಹಾಗೂ ನೌಕರರು ರಾಮನಾಥಪುರ ಸೆಸ್ಕ್ ಉಪವಿಭಾಗದ ಮುಂದೆ ಶಕ್ತಿ ಪ್ರದರ್ಶನ ಮಾಡಿದರು.

ತಮ್ಮ ಕಚೇರಿ ಮುಂಭಾಗ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ಮಾಡಿ ಕೇಂದ್ರ ಸರ್ಕಾರದ ನೀತಿಗೆ ಖಂಡನೆ ವ್ಯಕ್ತಪಡಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಶ್ರೀ ಚಿನ್ನಸ್ವಾಮಿ ಮಾತನಾಡಿ, ಕೇಂದ್ರ ಸರ್ಕಾರದ ನೀತಿ ಖಂಡನೀಯ ಮತ್ತು ಇದರಿಂದ ಜನರಿಗೆ ಮತ್ತು ರೈತರಿಗೆ ಯಾವುದೇ ರೀತಿಯ ಅನುಕೂಲ ಇಲ್ಲ ಮತ್ತು ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಂತ ಹಂತವಾಗಿ ಕಡಿತಗೊಂಡು ಸಾರ್ವಜನಿಕರಿಗೆ ಮತ್ತು ನೌಕರರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದರು.

ನಂತರ ಬಸವಾಪಟ್ಟಣ ಕಿರಿಯ ಇಂಜಿನಿಯರ್ ಶ್ರೀಧರ್ ಮಾತಾಡನಾಡಿ, ಸಾರ್ವಜನಿಕರಿಗೆ ಆಗುವ ಅನಾನೂಕುಲವನ್ನು ವಿವರವಾಗಿ ತಿಳಿಸಿ. ಸರ್ಕಾರದ ನೀತಿಗೆ ಖಂಡನೆ ವ್ಯಕ್ತಪಡಿಸಿ, ವಿದ್ಯುತ್ ವಿತರಣಾ ಕಂಪನಿಗಳ ಖಾಸಗಿಕರಣಕ್ಕೆ ವಿರೋಧ ವ್ಯಕ್ತಪಡಿಸಿದರು.

ಧರಣಿ ಸಮಯದಲ್ಲಿ ರಾಮನಾಥಪುರ ಕಿರಿಯ ಇಂಜಿನಿಯರ್ ಪ್ರದೀಪ್ ಕುಮಾರ್, ಕೊಣನೂರು ಶಾಖೆ ಸಹಾಯಕ ಇಂಜಿನಿಯರ್ ಯೋಗೇಶ್ ಮತ್ತು ದೊಡ್ಡಮಗ್ಗೆ ಶಾಖೆಯ ಕಿರಿಯ ಇಂಜಿನಿಯರ್ ಮಂಜುನಾಥ್, ರಾಮನಾಥಪುರ ಉಪವಿಭಾಗದ 659 ಪ್ರಾಥಮಿಕ ಸಮಿತಿಯ ಸಂಘಟನಾ ಅಧ್ಯಕ್ಷರಾದ ಶ್ರೀ ಪರಮೇಶ್ ಎಸ್.ಜೆ, ಕಾರ್ಯದರ್ಶಿ ಜಿ.ವಿ ಪ್ರಸನ್ನ ಹಾಗೂ ಎಲ್ಲಾ ನೌಕರರು ಹಾಜರಿದ್ದರು.

Last Updated : Jun 2, 2020, 9:55 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.