ಹಾಸನ/ಹೊಳೆನರಸೀಪುರ: ತಾನು ಮತ ಹಾಕಿದ ಬ್ಯಾಲೆಟ್ ಪೇಪರ್ನ ಫೋಟೋ ತೆಗೆದು ಮತದಾರನೊಬ್ಬ ಸಾಮಾಜಿಕ ಜಾಲತಾಣಗಳಿಗೆ ಹಾಕಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಚುನಾವಣಾ ಆಯೋಗ ಮತ್ತು ತಹಶೀಲ್ದಾರ್ಗೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ.
ಮತದಾರ ತಾನು ಮತ ನೀಡಿರುವ ವಿಷಯವನ್ನು ಗೌಪ್ಯವಾಗಿಡುವ ವಿಷಯ ಉಲ್ಲಂಘನೆ ಮಾಡುವುದು ಕಾನೂನಿಗೆ ವಿರುದ್ಧ. ಮತದಾನದ ಬಳಿಕ ಯಾರಿಗೆ ಮತ ಹಾಕಿದ್ದೇನೆ ಎಂಬುದನ್ನ ಯಾರಿಗೂ ಹೇಳಬಾರದು ಮತ್ತು ಅದನ್ನು ಬಹಿರಂಗಪಡಿಸಬಾರದು ಎಂಬ ನಿಯಮವಿದ್ದರೂ ಇಂತಹ ಕೃತ್ಯ ಎಸಗಿದ್ದಾನೆ. ಹೀಗಾಗಿ ಇದು ಇತರರಿಗೂ ಮುಜುಗರ ತಂದೊಡ್ಡುತ್ತದೆ ಮತ್ತು ಗ್ರಾಮದಲ್ಲಿ ಮತದಾರ ಮತ್ತು ಪ್ರತಿಸ್ಪರ್ಧಿ ಅಭ್ಯರ್ಥಿಯ ನಡುವೆ ವೈಮನಸ್ಸು, ದ್ವೇಷ ಹೆಚ್ಚಾಗಲು ಕಾರಣವಾಗುತ್ತದೆ.
ಈತನ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರಗಿಸಬೇಕೆಂದು ಅದೇ ಗ್ರಾಮದ ಶಿವರುದ್ರಪ್ಪ ಎಂಬುವರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಈತನ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ:ದೇಶದಲ್ಲಿ 'ಕೋವಿಶೀಲ್ಡ್' ಲಸಿಕೆಯ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್!