ಅರಸೀಕೆರೆ/ ಹಾಸನ: ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡ ಹಿನ್ನೆಲೆಯಲ್ಲಿ ಕಾರೊಂದು ರಸ್ತೆಯಲ್ಲಿಯೇ ಸುಟ್ಟು ಹೋದ ಘಟನೆ ಅರಸೀಕೆರೆ ಪಟ್ಟಣದಲ್ಲಿ ನಡೆದಿದೆ.
ಬೆಂಗಳೂರಿಂದ ಸ್ವಗ್ರಾಮ ಕಡೂರಿಗೆ ಹೋಗುವ ಮಾರ್ಗ ಮತ್ತೆ ಉಪಹಾರಕ್ಕೆಂದು ಕಾರು ಮಾಲೀಕ ಮಲ್ಲಿಕಾರ್ಜುನ್ ಎಂಬುವರು ಪಾರ್ಕಿಂಗ್ ಮಾಡಿ ಹೋಗಿದ್ದರು. ಆದರೆ ಬ್ಯಾಟರಿಯಲ್ಲಿ ಶಾರ್ಟ್ ಸರ್ಕ್ಯೂಟ್ ಆದ ಹಿನ್ನೆಲೆಯಲ್ಲಿ ಕಾರು ಹೊತ್ತಿ ಉರಿದಿದೆ ಎನ್ನಲಾಗ್ತಿದೆ.
ಅರಸೀಕೆರೆ ನಗರದ ಬಿಹೆಚ್ ರಸ್ತೆಯಲ್ಲಿರುವ ಮಂಜು ಫಾಸ್ಟ್ ಫುಡ್ ಸಮೀಪ ಈ ಘಟನೆ ನಡೆದಿದೆ. ಮಾಲೀಕ ಮಲ್ಲಿಕಾರ್ಜುನ್ ಬೆಂಕಿ ನಂದಿಸಲು ಪ್ರಯತ್ನ ಪಟ್ಟರೂ ಜ್ವಾಲೆಯನ್ನು ತಡೆಯಲು ಸಾಧ್ಯವಾಗಿಲ್ಲ.
ಸ್ಥಳಕ್ಕೆ ಅರಸೀಕೆರೆ ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಅರಸೀಕೆರೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.