ETV Bharat / state

ಕರ್ಣ ಶ್ರೇಷ್ಠ ದಾನಶೂರ, ರಕ್ತದಾನ ಮಾಡುವವರು ಕೂಡಾ ಶ್ರೇಷ್ಠರು - ಆರ್‌ ಶ್ರೀನಿವಾಸ್‌ ಗೌಡ - ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಶ್ರೀನಿವಾಸ್ ಗೌಡ

ಪ್ರಸ್ತುತ ದಿನಗಳಲ್ಲಿಯೂ ಸಹ ಅನೇಕ ಜನರಿಗೆ ರಕ್ತದಾನದ ಬಗ್ಗೆ ತಪ್ಪು ತಿಳುವಳಿಕೆ ಇದೆ. ಆದ್ದರಿಂದ ಯುವ ಪೀಳಿಗೆ ರಕ್ತದಾನ ಮಾಡುವ ಮೂಲಕ ಈ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಮುಂದೆ ಬರಬೇಕು.

Blood donation Camp
ರಕ್ತದಾನ
author img

By

Published : Jun 16, 2020, 7:27 PM IST

ಹಾಸನ : ಮಹಾಭಾರತದಲ್ಲಿ ಕರ್ಣ ಶ್ರೇಷ್ಠ ದಾನಿಯಾದ್ರೆ, ಪ್ರಸ್ತುತ ಜೀವನಿಧಿಯಾದ ರಕ್ತದಾನ ಮಾಡುವವರೇ ಶ್ರೇಷ್ಠ ದಾನಿಗಳು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್ ಶ್ರೀನಿವಾಸ್ ಗೌಡ ತಿಳಿಸಿದರು.

ಹಾಸನದಲ್ಲಿ ನಡೆದ ರಕ್ತದಾನ ಶಿಬಿರ

ನಗರದ ರೆಡ್‍ಕ್ರಾಸ್ ಭವನದಲ್ಲಿ ವಿಶ್ವ ಸ್ವಯಂಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಕ್ತದಾನ ಮಾಡುವುದು ಶ್ರೇಷ್ಠ ಕಾರ್ಯ. ಈ ನಿಟ್ಟಿನಲ್ಲಿ ಹಲವಾರು ರಕ್ತದಾನ ಶಿಬಿರಗಳನ್ನು ಆಯೋಜಿಸುವ ಮೂಲಕ ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಸಮಾಜಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಿದೆ. ಅಂತೆಯೇ ಈಗಿನ ಯುವ ಪೀಳಿಗೆ ಸ್ವಯಂ ಪ್ರೇರಿತರಾಗಿ ಹೆಚ್ಚು ಹೆಚ್ಚು ರಕ್ತದಾನ ಮಾಡಬೇಕು ಎಂದರು.

ಬಳಿಕ ಜಿಲ್ಲಾ ಏಡ್ಸ್ ಮತ್ತು ಕ್ಷಯ ನಿಯಂತ್ರಣಾಧಿಕಾರಿ ನಾಗೇಶ್ ಆರಾಧ್ಯ ಮಾತನಾಡಿ, ಪ್ರಸ್ತುತ ದಿನಗಳಲ್ಲಿಯೂ ಸಹ ಅನೇಕ ಜನರಿಗೆ ರಕ್ತದಾನದ ಬಗ್ಗೆ ತಪ್ಪು ತಿಳುವಳಿಕೆ ಇದೆ. ಆದ್ದರಿಂದ ಯುವ ಪೀಳಿಗೆ ರಕ್ತದಾನ ಮಾಡುವ ಮೂಲಕ ಈ ತಪ್ಪು ತಿಳುವಳಿಕೆಯನ್ನು ಹೋಗಲಾಡಿಸಲು ಮುಂದೆ ಬರಬೇಕು ಎಂದರು.

ರಕ್ತಕ್ಕೆ ಪರ್ಯಾಯವಾದದ್ದು ಯಾವುದೂ ಇಲ್ಲ. ಹಾಗಾಗಿ ಎಲ್ಲರೂ ರಕ್ತದಾನ ಮಾಡಲು ಮುಂದಾಗಬೇಕು. ಈ ನಿಟ್ಟಿನಲ್ಲಿ ಹಾಸನ ಜಿಲ್ಲೆಯಲ್ಲಿ ಸಾಕಷ್ಟು ರಕ್ತ ಶೇಖರಣೆಯಾಗಿರುವುದು ಸಂತೋಷದ ವಿಷಯ. ಕೆಲವರಿಗೆ ನಾವು ಉಚಿತವಾಗಿ ರಕ್ತದಾನ ಮಾಡಿದರೂ ಸಹ ನಮಗೆ ರಕ್ತದ ಅಗತ್ಯತೆ ಇದ್ದಾಗ ನಿರ್ದಿಷ್ಟ ಹಣ ಪಡೆದು ನೀಡಲಾಗುತ್ತದೆ ಎಂಬ ಸಂದೇಹವಿರುತ್ತದೆ. ಇದಕ್ಕೆ ಕಾರಣ ದಾನಿಗಳಿಂದ ಪಡೆದ ರಕ್ತವನ್ನು ನೇರವಾಗಿ ರೋಗಿಗಳಿಗೆ ನೀಡಲಾಗುವುದಿಲ್ಲ. ಅನೇಕ ರೀತಿಯ ಪರೀಕ್ಷೆಗೆ ಒಳಪಡಿಸಿದ ನಂತರವೇ ನೀಡಬೇಕು. ಹಾಗಾಗಿ ಆ ಪರೀಕ್ಷೆಗೆ ತಗಲುವ ವೆಚ್ಚವನ್ನು ಮಾತ್ರ ಪಡೆಯಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.