ETV Bharat / state

ಸಚಿವ ಗೋಪಾಲಯ್ಯ ಎದುರೇ ಸಭೆಯಲ್ಲಿಯೇ ಕೈ-ಕೈ ಮಿಲಾಯಿಸಿದ ಬಿಜೆಪಿ ಸದಸ್ಯರು - ಹಾರನಹಳ್ಳಿಯ ಶಕ್ತಿಕೇಂದ್ರದ ಮೋಹನ್

ಅರಸೀಕೆರೆ ತಾಲೂಕಿನಲ್ಲಿ ಇಂದು ವಿಧಾನಪರಿಷತ್ ಚುನಾವಣೆಯ ಪ್ರಯುಕ್ತ ಬಿಜೆಪಿಯ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌ ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ..

ಕಾರ್ಯಕರ್ತರ ಸಭೆಯಲ್ಲಿಯೇ ಬಡದಾಡಿಕೊಂಡ ಬಿಜೆಪಿ ಸದಸ್ಯರು

author img

By

Published : Nov 30, 2021, 5:41 PM IST

ಹಾಸನ : ಜಿಲ್ಲಾ ಉಸ್ತುವಾರಿ ಸಚಿವ ಕೆ ಗೋಪಾಲಯ್ಯ ನೇತೃತ್ವದಲ್ಲಿ ನಡೆಯುತ್ತಿದ್ದ ಬಿಜೆಪಿ ಸಭೆಯಲ್ಲಿ ಪಕ್ಷದ ಕಾರ್ಯಕರ್ತರು ಮಧ್ಯೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸಿರುವ ಘಟನೆ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

ಬಿಜೆಪಿ ಸ್ಥಳೀಯ ಮುಖಂಡ ಅಣ್ಣ ನಾಯಕನಹಳ್ಳಿ ವಿಜಯಕುಮಾರ್ ಬೆಂಬಲಿಗರು ಹಾರನಹಳ್ಳಿಯ ಶಕ್ತಿಕೇಂದ್ರದ ಮೋಹನ್ ಎಂಬಾತನ ಮೇಲೆ ಹಲ್ಲೆ ನಡೆಸಿದ್ದಾರೆ.

ನಗರಸಭೆ ಸದಸ್ಯರಾದ ಹರ್ಷವರ್ಧನ್ ರಾಜು, ಚಂದ್ರಶೇಖರ್, ಸುಬ್ರಮಣ್ಯ ಬಾಬು ಮತ್ತು ಕುಮಾರ್ ಎನ್ನುವ ನಾಲ್ಕು ಮಂದಿ ಮೋಹನ್ ಮೇಲೆ ಗಂಭೀರವಾಗಿ ಹಲ್ಲೆ ಮಾಡಿ ಗಾಯಗೊಳಿಸಿದ್ದಾರೆ.

ಏನಿದು ಪ್ರಕರಣ? : ಅರಸೀಕೆರೆ ತಾಲೂಕಿನಲ್ಲಿ ಇಂದು ವಿಧಾನಪರಿಷತ್ ಚುನಾವಣೆಯ ಪ್ರಯುಕ್ತ ಬಿಜೆಪಿಯ ಕಾರ್ಯಕರ್ತರ ಸಭೆ ಹಮ್ಮಿಕೊಳ್ಳಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌ ರವಿಕುಮಾರ್ ಕಾರ್ಯಕ್ರಮ ಉದ್ಘಾಟಿಸಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.