ETV Bharat / state

ಕಂಪನಿ ಕೆಲಸಕ್ಕೆಂದು ಹೋದ ನೌಕರ ಅಪಘಾತದಲ್ಲಿ ಸಾವು: ನ್ಯಾಯಕ್ಕಾಗಿ ಕುಟುಂಬಸ್ಥರ ಒತ್ತಾಯ - hassan jio company employee died by accident

ಕಂಪನಿಯ ಕೆಲಸದ ಮೇಲೆ ಅರಸೀಕೆರೆ ತಾಲೂಕಿನ ಬಾಣಾವಾರಕ್ಕೆ ತೆರಳಿ ಅಲ್ಲಿಂದ ವಾಪಸ್ ಜಾವಗಲ್​ಗೆ ಬಂದು ಹಾಸನಕ್ಕೆ ಹಿಂದಿರುಗುವಾಗ ಕಾರೊಂದು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಸ್ವಾಮಿ ಎಂಬಾತ ಮೃತಪಟ್ಟಿದ್ದರು.

swamy
ಸ್ವಾಮಿ(33)
author img

By

Published : Jul 13, 2021, 9:03 PM IST

ಹಾಸನ: ಖಾಸಗಿ ಕಂಪನಿಯ ಕೆಲಸಕ್ಕೆಂದು ಬೈಕ್​ನಲ್ಲಿ ತೆರಳಿದ್ದ ನೌಕರನೊಬ್ಬ ಅಪಘಾತದಲ್ಲಿ ಮೃತಪಟ್ಟಿದ್ದಾನೆ. ಆದ್ರೆ ನಮಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಕಂಪನಿಯವರು ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿ ಶವ ಇಟ್ಟು ಕುಟುಂಬಸ್ಥರು ಪ್ರತಿಭಟನೆ ನಡೆಸಿದ್ದಾರೆ.

ಮೃತ ವ್ಯಕ್ತಿಯ ಸಂಬಂಧಿಕರ ಆಕ್ರೋಶ

ತಾಲೂಕಿನ ಸಾಲಗಾಮೆ ಹೋಬಳಿ ಸುಂಡಳ್ಳಿ ಗ್ರಾಮದ ಸ್ವಾಮಿ (33) ಮೃತಪಟ್ಟ ಜಿಯೋ ಕಂಪನಿ ನೌಕರ. ನಿನ್ನೆ ಕಂಪನಿಯ ಕೆಲಸದ ಮೇಲೆ ಅರಸೀಕೆರೆ ತಾಲೂಕಿನ ಬಾಣಾವಾರಕ್ಕೆ ತೆರಳಿ ಅಲ್ಲಿಂದ ವಾಪಸ್ ಜಾವಗಲ್​ಗೆ ಬಂದು ಹಾಸನಕ್ಕೆ ಹಿಂದಿರುಗುವಾಗ ಕಾರೊಂದು ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದರು. ಈ ವಿಚಾರವನ್ನು ನಗರದ ಜಿಯೋ ಕಂಪನಿಗೆ ತಿಳಿಸಿದರೂ ಸಹ ಮೃತರ ಕುಟುಂಬಕ್ಕೆ ಯಾರು ಕೂಡ ಸಾಂತ್ವನ ಹೇಳಲು ಬಂದಿಲ್ಲ ಎನ್ನಲಾಗಿದೆ.

bike-car-accident
ಅಪಘಾತದಲ್ಲಿ ಕಾರು ಬೈಕ್ ನಜ್ಜುಗುಜ್ಜಾಗಿರುವುದು.

ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು: ಅಪಘಾತವಾಗಿರುವ ವಿಚಾರವನ್ನು ಈಗಾಗಲೇ ಕೇಂದ್ರ ಕಚೇರಿಗೆ ತಿಳಿಸಿದ್ದು, ಅವರು ನಮಗೆ ಯಾವುದೇ ಮಾಹಿತಿ ನೀಡಿಲ್ಲ. ಹಾಗಾಗಿ ನಾವು ಕೂಡ ಅಸಹಾಯಕರಾಗಿದ್ದೇವೆ ಎಂದು ಸಹ ಸಿಬ್ಬಂದಿ ತಮ್ಮ ಅಸಹಾಯಕತೆಯನ್ನು ಪೋಷಕರ ಎದುರು ತೋರ್ಪಡಿಸಿದರು. ಇದಾದ ನಂತರ ಕಂಪನಿಯ ಮೇಲಾಧಿಕಾರಿಗಳು ಬಂದು ಮೃತ ನೌಕರನಿಗೆ ಪರಿಹಾರ ಮತ್ತು ಕುಟುಂಬಕ್ಕೆ ಸಾಂತ್ವನ ಹೇಳಬೇಕೆಂದು ಪಟ್ಟು ಹಿಡಿದಾಗ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಪಟ್ಟರು.

ಕಂಪನಿಯಿಂದ ಪರಿಹಾರದ ಭರವಸೆ: ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜೊತೆಗೆ ಇಂದು ನಡೆದ ಪ್ರತಿಭಟನೆಯ ಸಂಬಂಧ ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ ಕೂಡ ದೂರು ದಾಖಲಾಗಿತ್ತು. ಮೇಲಾಧಿಕಾರಿಗಳ ಮಾತಿನಂತೆ ಕುಟುಂಬಕ್ಕೆ ಪರಿಹಾರ ನೀಡುವ ಭರವಸೆ ಕಂಪನಿ ನೀಡಿದ ನಂತರ ಕುಟುಂಬಸ್ಥರು ಪ್ರತಿಭಟನೆ ಹಿಂಪಡೆದುಕೊಂಡರು.

ಇದನ್ನೂ ಓದಿ: ರಾಜ್ಯದಲ್ಲಿ ಕೊರೊನಾ ಇಳಿಕೆಯ ಪರ್ವ.. ಜಿಲ್ಲಾವಾರು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.