ETV Bharat / state

ಭಾರತ್ ಜೋಡೋ ಮಾಡ್ತಿದ್ದಾರಲ್ಲ.. ದೇಶ ಏನು ಇಬ್ಭಾಗವಾಗಿದೆಯೇ : ಸಚಿವ ಬಿ ಸಿ ನಾಗೇಶ್ ಪ್ರಶ್ನೆ

ಭಾರತದ ಬಗ್ಗೆ ತಿಳಿಯದವರು, ಈ ದೇಶದ ಸಂಸ್ಕೃತಿ ಬಗ್ಗೆ ತಿಳಿಯದವರು ಭಾರತವನ್ನು ಜೋಡೋ ಮಾಡಲು ಹೊರಟಿದ್ದಾರೆ. ಇದು ಕಾಂಗ್ರೆಸ್​ಗೆ ಬಂದಿರುವ ದುರ್ದೈವದ ಸ್ಥಿತಿ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್​ ಲೇವಡಿ ಮಾಡಿದರು.

bc-nagesh-spoke-against-bharat-jodo-yathra
ಭಾರತ್ ಜೋಡೋ ಮಾಡ್ತಿದ್ದಾರಲ್ಲ.. ಭಾರತ ಏನು ಇಬ್ಬಾಗವಾಗಿದೆಯೇ : ಬಿ.ಸಿ.ನಾಗೇಶ್
author img

By

Published : Oct 18, 2022, 7:37 PM IST

ಹಾಸನ : ರಾಹುಲ್ ಗಾಂಧಿಯವರು ಮತ್ತೆ ಮುಸಲ್ಮಾನರ ಮತವನ್ನು ಸೆಳೆಯುವ ಉದ್ದೇಶದಿಂದ ಆರ್​ಎಸ್​ಎಸ್​​ ಬಗ್ಗೆ ಇಲ್ಲ ಸಲ್ಲದ ಅಪಪ್ರಚಾರದ ಮಾಡುತ್ತಿದ್ದಾರೆ. ಅವರಿಗೆ ದೇಶದ ಬಗ್ಗೆ ಕಾಳಜಿ ಇಲ್ಲ ಎಂದು ಶಿಕ್ಷಣ ಸಚಿವ ನಾಗೇಶ್ ಹೇಳಿದ್ದಾರೆ.

ಹಾಸನಾಂಬೆಯ ದರ್ಶನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ ಯಾತ್ರೆಯು ಯಾವ ಸಂದರ್ಭದಲ್ಲಿ ನಡೆಯುತ್ತಿದೆ ಎಂಬುದು ಜನರಿಗೆಲ್ಲಾ ತಿಳಿದ ವಿಚಾರ. ಕಾಂಗ್ರೆಸ್ ನ ಹಿರಿಯ ನಾಯಕರು 40 ವರ್ಷಗಳಿಂದ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಕಾಂಗ್ರೆಸ್​ನಲ್ಲಿ ಭವಿಷ್ಯ ಇಲ್ಲ ಎಂದು ಗೊತ್ತಾದಾಗ ಪಕ್ಷವನ್ನು ಬಿಡಲು ಪ್ರಾರಂಭಿಸಿದ್ದಾರೆ. ಇದುವರೆಗೂ ಒಂದು ಕುಟುಂಬದ ಅಧ್ಯಕ್ಷತೆಯಲ್ಲಿ ಇರುವ ಪಕ್ಷಕ್ಕೆ ಅವರ ವಿರುದ್ಧ ಮಾತನಾಡಲು ಅನೇಕ ಕಾಂಗ್ರೆಸ್ ನ ನಾಯಕರು ತಯಾರಾದರು. ಈ ವೇಳೆ ಭಾರತ್ ಜೋಡೋ ಯಾತ್ರೆ ಶುರು ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಯಾತ್ರೆ ಮಾಡುವ ಯಾವ ಸ್ಥಿತಿಯೂ ಭಾರತದಲ್ಲಿಲ್ಲ : ಇಂತಹ ಯಾತ್ರೆ ಶುರು ಮಾಡುವ ಯಾವ ಸಂದರ್ಭವೂ ದೇಶದಲ್ಲಿ ಇಲ್ಲ. ದೇಶ ಇಬ್ಬಾಗವಾಗುತ್ತಿದೆ ಎಂದಾಗ ಸಮಾಜದ ಹಿರಿಯ ನಾಯಕರು ದೇಶವನ್ನು ಕೂಡಿಸುತ್ತೇವೆ. ಯಾವುದೇ ಜಾತಿಗಳ ಮಧ್ಯೆ ಸಂಘರ್ಷ ಇದೆ ಎಂದಾಗ ಅವರನ್ನು ಕೂಡಿಸುತ್ತೇವೆ. ಭಾಷೆ ಮಧ್ಯೆ ಏನಾದ್ರೂ ಸಂಘರ್ಷ ಇದ್ದರೇ ಅದನ್ನು ಸರಿಮಾಡಲು ಮುಂದಾಗಿದ್ದೇವೆ ಎಂದರೆ ಅರ್ಥವಿದೆ. ಆದರೆ ದುರಾದೃಷ್ಟ ಏನೆಂದರೆ ಭಾರತದ ಬಗ್ಗೆ ತಿಳಿಯದವರು, ಈ ದೇಶದ ಸಂಸ್ಕೃತಿ ಬಗ್ಗೆ ತಿಳಿಯದವರು ಭಾರತವನ್ನು ಜೋಡೋ ಮಾಡಲು ಹೊರಟಿದ್ದಾರೆ. ಇದು ಕಾಂಗ್ರೆಸ್ ಗೆ ಬಂದಿರುವ ದುರ್ದೈವದ ಸ್ಥಿತಿ ಎಂದು ಕುಹಕವಾಡಿದರು.

ಕಾಂಗ್ರೆಸ್​​ ಪೂರ್ತಿಯಾಗಿ ಮುಳುಗಿಹೋಗಿದೆ : ಗುಜರಾತಿನಲ್ಲಿ ಉಪ ಚುನಾವಣೆ ನಡೆದಿದ್ದು, ಹಿಮಾಚಲದಲ್ಲಿ ಚುನಾವಣೆ ಘೋಷಣೆಯಾಗಿದೆ. ಒಂದು ಪಕ್ಷದ ನಾಯಕರಾಗಿ ಚುನಾವಣೆ ನಡೆಯುವ ಸ್ಥಳದಲ್ಲಿ ಪ್ರವಾಸ ಮಾಡಿದ್ದರೆ ರಾಷ್ಟ್ರೀಯ ಪಕ್ಷದ ನಾಯಕ ಎಂದು ಒಪ್ಪಬಹುದಿತ್ತು. ಯುಪಿಯಂತಹ ದೊಡ್ಡ ರಾಜ್ಯದಲ್ಲಿ ಪೂರ್ಣವಾಗಿ ಕಾಂಗ್ರೆಸ್ ಮುಳುಗಿ ಹೋಗಿದೆ ಎಂದು ಹೇಳಿದರು.

ಭಾರತ್ ಜೋಡೋ ಮಾಡ್ತಿದ್ದಾರಲ್ಲ.. ಭಾರತ ಏನು ಇಬ್ಬಾಗವಾಗಿದೆಯೇ : ಬಿ.ಸಿ.ನಾಗೇಶ್

ದೇಶದ ಬಗ್ಗೆ ಕಾಳಜಿಯ ಮಾತುಗಳಿಲ್ಲ : ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಅನವಶ್ಯಕ ಶಬ್ಧದಲ್ಲಿ ಹೀಗೆ ಮಾತನಾಡುತ್ತಿರುವುದನ್ನು ಜನರು ಗಮನಿಸುತ್ತಿದ್ದಾರೆ. ರಾಹುಲ್ ಗಾಂಧಿಯವರು ಮತ್ತೆ ಮುಸಲ್ಮಾನರ ಮತವನ್ನು ಸೆಳೆಯುವ ಉದ್ದೇಶದಲ್ಲಿ ಮಾತನಾಡಿದ್ದಾರೆಯೇ ಹೊರತು, ಈ ದೇಶದ ಬಗ್ಗೆ ಕಾಳಜಿಯ ಯಾವ ಮಾತುಗಳನ್ನು ಹೇಳಿಲ್ಲ. ಜೋಡೋ ಯಾತ್ರೆಗೂ ಆರ್​ಎಸ್​ಎಸ್​ಗೂ ಏನು ಸಂಬಂಧವಿದೆ. ಏತಕ್ಕಾಗಿ ಮಾತನಾಡುತ್ತಿದ್ದಾರೆ? ಮುಸಲ್ಮಾನರ ಮತವನ್ನು ಸೆಳೆಯಲು ಆರ್​ಎಸ್​ಎಸ್​ ಬಗ್ಗೆ ಇಲ್ಲಸಲ್ಲದ ಆರೋಪ ಮಾಡುವುದು ಸರಿಯಲ್ಲ ಎಂದು ಸಚಿವರು ತಿಳಿಸಿದರು.

ಜನರು ಅಭಿವೃದ್ಧಿ ಪರವಾಗಿ ಇದ್ದಾರೆ : ಯುಪಿಯಲ್ಲಿ ಹಲವು ಮುಸ್ಲಿಂ ಬಾಹುಳ್ಯದ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಪಡೆದಿದೆ. ಇದು ಈ ದೇಶದ ಜನ ಅಭಿವೃದ್ಧಿ ಪರವಾಗಿ ಇದ್ದಾರೆ. ಈ ದೇಶದ ಏಳಿಗೆಯ ಪರವಾಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ. ಭಾರತ್ ಜೋಡೋ ಎನ್ನುವ ಕಾರ್ಯಕ್ರಮದಲ್ಲಿ ಮಾಡುವ ಪಾದಯಾತ್ರೆಯ ಮೂಲಕ ಈ ದೇಶ ಏನಿದೆ ಎನ್ನುವುದು ರಾಹುಲ್ ಗಾಂಧಿಗೆ ಅರ್ಥವಾಗುತ್ತದೆ ಎಂಬುದನ್ನು ನಾನು ಭಾವಿಸಿದ್ದೇನೆ ಎಂದು ಹೇಳಿದರು.

ಭಾರತ್ ಜೋಡೋ ಎಂಬ ಹೆಸರು ತೆಗೆದುಹಾಕಿ : ಭಾರತ್ ಜೋಡೋ ಎಂಬ ಹೆಸರು ತೆಗೆದುಹಾಕಿ ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತಕ್ಕೋಸ್ಕರ ಮಾಡುತ್ತಿರುವ ಯಾತ್ರೆ ಎಂದು ಹೆಸರು ಇಡಲು ಹೇಳಿ ಎಂದು ಸವಾಲು ಹಾಕಿದರು. ಭಾರತ್​ ಜೋಡೋ ಯಾತ್ರೆಗೆ ಎಲ್ಲಿಂದಲೋ ಬಸ್ಸಿನಲ್ಲಿ ಜನರನ್ನು ತುಂಬಿಕೊಂಡು ರಾತ್ರಿ ಯಾವುದೋ ಛತ್ರದಲ್ಲಿ ಮಲಗಿಸಿ ಬೆಳಗ್ಗೆ ಎದ್ದು ಹೊರಡಿಸುವಂತದನ್ನು ನಾವು ನೋಡುತ್ತಿದ್ದೇವೆ. ಜನರಲ್ಲಿ ಉತ್ಸಾಹ ಇದ್ದಿದ್ದರೇ ಅಲ್ಲಿನ ಸ್ಥಳೀಯ ಜನರು ಕಾರ್ಯಕ್ರಮದಲ್ಲಿರುತ್ತಿದ್ದರು ಎಂದು ಸಚಿವ ಬಿ ನಾಗೇಶ್​ ವ್ಯಂಗ್ಯವಾಡಿದರು.

ಇಬ್ಬರು ನಾಯಕರನ್ನು ಜೋಡಿಸುವ ಕೆಲಸ ಮಾಡುತ್ತಿದ್ದಾರೆ : ಕಾಂಗ್ರೆಸ್​ ಆಂತರಿಕ ಕಲಹಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹಕ್ಕಾಗಿ ಜೋಡೋ ಯಾತ್ರೆ ಮಾಡಲಾಗುತ್ತಿದೆ. ಡಿ ಕೆ ಶಿವಕುಮಾರ್ ಅವರ ಆಸೆ ಸ್ವಲ್ಪ ನೆರವೇರಿರಬಹುದು. ನಾವು ನೋಡುತ್ತಿರುವಂತೆ ಸಿದ್ದರಾಮಯ್ಯ ಮತ್ತು ಡಿಕೆಶಿಯವರ ಕೈಗಳನ್ನು ಎಳೆದುಕೊಂಡು ಬಂದು ಜೋಡಿಸುವ ಪ್ರಯತ್ನವನ್ನು ರಾಹುಲ್ ಗಾಂಧಿ ಮಾಡುತ್ತಿದ್ದಾರೆ ಎಂದು ಟಾಂಗ್ ನೀಡಿದರು.

ಇದನ್ನೂ ಓದಿ : ಬೇರೆ ಸಮುದಾಯಕ್ಕೆ ಅನ್ಯಾಯವಾಗದಂತೆ ಒಕ್ಕಲಿಗರಿಗೆ ಮೀಸಲಾತಿ ಹೆಚ್ಚಿಸಬೇಕು: ಸಿ ಟಿ ರವಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.