ETV Bharat / state

'ನಾನು RSS ಕಾರ್ಯಕರ್ತ'.. ಭಿತ್ತಿ ಪತ್ರ ತೋರಿಸಿ ಕುಮಾರಸ್ವಾಮಿಗೆ ಟಾಂಗ್ ನೀಡಿದ ಬಜರಂಗದಳ.. - ಭಿತ್ತಿ ಪತ್ರ ತೋರಿಸಿ ಕುಮಾರಸ್ವಾಮಿಗೆ ಟಾಂಗ್ ನೀಡಿದ ಭಜರಂಗದಳ

ಆರ್​ಎಸ್​ಎಸ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದ ಕುಮಾರಸ್ವಾಮಿ ಅವರಿಗೆ ಟಾಂಗ್​ ನೀಡಲು ಬಜರಂಗದಳದ ಕಾರ್ಯಕರ್ತರು 'ನಾನು ಆರ್​ಎಸ್​​ಎಸ್​ ಕಾರ್ಯಕರ್ತ' ಎಂದು ಬರೆದಿರುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ್ದಾರೆ.

ಭಜರಂಗದಳ
ಭಜರಂಗದಳ
author img

By

Published : Oct 9, 2021, 2:48 PM IST

ಸಕಲೇಶಪುರ (ಹಾಸನ): 'ನಾನು ಆರ್​ಎಸ್​​ಎಸ್​ ಕಾರ್ಯಕರ್ತ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಬಜರಂಗದಳದ ಕಾರ್ಯಕರ್ತರು ಭಿತ್ತಿ ಪತ್ರಗಳನ್ನು ತೋರಿಸಿ ಟಾಂಗ್​ ನೀಡಿರುವ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ.

ಭಿತ್ತಿ ಪತ್ರ ತೋರಿಸಿ ಕುಮಾರಸ್ವಾಮಿಗೆ ಟಾಂಗ್ ನೀಡಿದ ಬಜರಂಗದಳ

ಹೆಚ್​ಡಿಕೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​)ದ ವಿರುದ್ಧ ಹೇಳಿಕೆಗಳನ್ನು ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ. ಇಂದು ಸಕಲೇಶಪುರ ತಾಲೂಕಿನ ಎತ್ತಿನಹೊಳೆ ಕಾಮಗಾರಿಯನ್ನು ವೀಕ್ಷಿಸಲು ಕುಮಾರಸ್ವಾಮಿ ಬಂದಿದ್ದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಬಳಿಕ ಹೊರ ಬಂದು ಕಾರಿನಲ್ಲಿ ಎತ್ತಿನಹೊಳೆ ಕಾಮಗಾರಿ ವೀಕ್ಷಿಸಲು ಹೊರಟ ಸಂದರ್ಭದಲ್ಲಿ ಎಸ್.ಬಿ.ಎಮ್ ವೃತ್ತದ ಸಮೀಪ ಬಜರಂಗದಳ ಕಾರ್ಯಕರ್ತರು 'ನಾನು ಆರ್​ಎಸ್​​ಎಸ್​ ಕಾರ್ಯಕರ್ತ' ಎಂದು ಬರೆದಿರುವ ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ: ನನ್ನ ಹೇಳಿಕೆಗೆ ನಾ ಬದ್ಧ, ಬೇಕಿದ್ದರೆ ಚರ್ಚೆಗೆ ಬನ್ನಿ.. RSS​​,BJPಗೆ ಮಾಜಿ ಸಿಎಂ ಹೆಚ್​ಡಿಕೆ ಸವಾಲ್​​​​

ರಮೇಶ್ ಎಂಬ ಬಜರಂಗದಳದ ಕಾರ್ಯಕರ್ತನೊಬ್ಬ ಪೋಸ್ಟರ್ ಹಿಡಿದು ಕಾರು ಅಡ್ಡಗಟ್ಟಲು ಮುಂದಾಗಿದ್ದು, ಸ್ಥಳದಲ್ಲಿದ್ದ ಡಿವೈಎಸ್​​ಪಿ ಅನಿಲ್ ಕುಮಾರ್ ಆತನನ್ನು ತಡೆದು, ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.