ETV Bharat / state

ಅಯೋಧ್ಯೆ ತೀರ್ಪು ಹಿನ್ನೆಲೆ ಹಾಸನದಲ್ಲಿ ಎಸ್​ಪಿ ನೇತೃತ್ವದಲ್ಲಿ ಪೊಲೀಸ್​ ಭದ್ರತೆ - Police security for Ayodhya verdict in Hassan

ಅಯೋಧ್ಯೆ ಹಾಗೂ ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಇಂದು ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ಹಾಸನ ನಗರದಾದ್ಯಂತ ಭದ್ರತೆ ಹೆಚ್ಚಿಸಲಾಗಿತ್ತು. ಎಸ್ಪಿ ಡಾ. ರಾಮ್ ನಿವಾಸ್ ಸಪೆಟ್ ನೇತೃತ್ವದಲ್ಲಿ ಪೊಲೀಸರು​​ ಪಥಸಂಚಲನ ನಡೆಸಿದರು.

ಅಯೋಧ್ಯೆ ತೀರ್ಪು ಹಿನ್ನೆಲೆ ಹಾಸನದಲ್ಲಿ ಪೊಲೀಸ್ ಭದ್ರತೆ
author img

By

Published : Nov 9, 2019, 8:56 PM IST

ಹಾಸನ : ಅಯೋಧ್ಯೆ ಹಾಗೂ ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿ ಇಂದು ಸುಪ್ರೀಂ ಕೋರ್ಟ್ ತೀರ್ಪು ಹಿನ್ನೆಲೆಯಲ್ಲಿ ನಗರದಾದ್ಯಂತ ಭದ್ರತೆ ಹೆಚ್ಚಿಸಲಾಗಿತ್ತು. ಎಸ್ಪಿ ಡಾ. ರಾಮ್ ನಿವಾಸ್ ಸಪೆಟ್ ನೇತೃತ್ವದಲ್ಲಿ ಪೊಲೀಸ್​​ ಪಥಸಂಚಲನ ನಡೆಯಿತು.

ಅಯೋಧ್ಯೆ ತೀರ್ಪು ಹಿನ್ನೆಲೆ ಹಾಸನದಲ್ಲಿ ಪೊಲೀಸ್ ಭದ್ರತೆ

ಜಿಲ್ಲೆಯಾದ್ಯಂತ 3 ಕೆ‌ಎಸ್‌ಆರ್‌ಪಿ, 17 ಡಿ‌ಎಆರ್ ತುಕಡಿ ಸೇರಿ 700 ಪೊಲೀಸರು ಭದ್ರತೆಗೆ ನಿಯೋಜಿಸಲಾಗಿತ್ತು. 144 ಸೆಕ್ಷನ್ ಜಾರಿಗೊಳಿಸಲಾಗಿದ್ದು, ಶಾಲಾ-ಕಾಲೇಜಿಗೆ ರಜೆ ನೀಡಲಾಗಿತ್ತು. ಇಂದು ಬೆಳಗ್ಗೆ 6ರಿಂದ ನಾಳೆ ಬೆಳಗ್ಗೆ 6ರವರಗೆ ಮದ್ಯ ನಿಷೇಧಿಸಲಾಗಿದೆ. ನಾಳೆ ಈದ್ ಮಿಲಾದ್ ಇರುವುದರಿಂದ ಮದ್ಯ ನಿಷೇಧಿಸಲು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯಲಾಗುವುದು. ಮುನ್ನೆಚ್ಚರಿಕಾ ದೃಷ್ಟಿಯಿಂದ ನಗರದ ವಿವಿಧ ಕಡೆಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ನಾಳೆಯೂ‌ ಸಹ‌ ಭದ್ರತೆ ಮುಂದುವರೆಸುವುದಾಗಿ ತಿಳಿಸಿದರು.

ಇನ್ನು ಜಿಲ್ಲೆಯಲ್ಲಿ ಎಂದಿನಂತೆ ಜನಜೀವನ ಹಾಗೂ ವಾಹನ ಓಡಾಟ ಸಾಮಾನ್ಯವಾಗಿತ್ತು. ನಿನ್ನೆ ರಾತ್ರಿಯಿಂದಲೇ ಪೊಲೀಸ್ ಸಿಬ್ಬಂದಿ ಆಯಕಟ್ಟಿನ ಹಾಗೂ ಸೂಕ್ಷ್ಮ ಸ್ಥಳಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಕಟ್ಟೆಚ್ಚರ ವಹಿಸಿದ್ದರು. ತೀರ್ಪು ಬಂದ ನಂತರ ಸಂಭ್ರಮಾಚರಣೆ, ಪ್ರತಿಭಟನೆ ನಡೆಸದಂತೆ ಕಟ್ಟೆಚ್ಚರ ವಹಿಸಿದ್ದರು.

Intro:ಹಾಸನ : ಅಯೋಧ್ಯೆ ಹಾಗೂ ಬಾಬರಿ ಮಸೀದಿ ವಿವಾದ, ಸುಪ್ರೀಂ ಕೋರ್ಟ್ ತೀರ್ಪು ಹೊರ ಬದ್ದ ಬಳಿಕ ಎಲ್ಲೆಡೆ ಖಾಕಿ ಕಣ್ಗಾವಲನ್ನು ನಿಯೋಜಿಸಿದ್ದ ಎಸ್ಪಿ ಡಾ. ರಾಮ್ ನಿವಾಸ್ ಸಪೆಟ್ ಶನಿವಾರ ಮಧ್ಯಾಹ್ನ ಪಥಸಂಚಲನ ನಡೆಸಿದರು.

ಇನ್ನೂ ಜಿಲ್ಲೆಯಾದ್ಯಂತ 3 ಕೆ‌ಎಸ್‌ಆರ್‌ಪಿ, 17 ಡಿ‌ಎಆರ್ ತುಕಡಿ ಸೇರಿ 700 ಪೊಲೀಸರು ಭದ್ರತೆಗೆ ನಿಯೋಜಿಸಲಾಗಿದೆ. 144 ಸೆಕ್ಷನ್, ಶಾಲಾ-ಕಾಲೇಜಿಗೆ ರಜೆ ನೀಡಿದ್ದು, ಶನಿವಾರ ಬೆಳಗ್ಗೆ 6 ರಿಂದ ಭಾನುವಾರ ಬೆಳಗ್ಗೆ 6 ರವರಗೆ ಮದ್ಯ ನಿಷೇಧಿಸಲಾಗಿದೆ. ನಾಳೆ ಈದ್ ಮಿಲಾದ್ ಇರುವುದರಿಂದ ಮದ್ಯ ನಿಷೇಧಿಸಲು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆಯುವುದಾಗಿ ತಿಳಿಸಿದರು.

ಇನ್ನೂ ಜಿಲ್ಲೆಯಲ್ಲಿ ಎಂದಿನಂತೆ ಜನಜೀವನ ಹಾಗೂ ವಾಹನ ಓಡಾಟ ಸಾಮಾನ್ಯವಾಗಿದ್ದು, ರಾತ್ರಿಯಿಂದಲೇ ಪೊಲೀಸ್ ಸಿಬ್ಬಂದಿ ಆಯಕಟ್ಟಿನ, ಸೂಕ್ಷ್ಮ ಸ್ಥಳಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಕಟ್ಟೆಚ್ಚರ ವಹಿಸಿದ್ದರು. ತೀರ್ಪು ಬಂದ ನಂತರ ಸಂಭ್ರಮಾಚರಣೆ, ಪ್ರತಿಭಟನೆ ನಡೆಸದಂತರ ಕಟ್ಟೆಚ್ಚರವಹಿಸಿದ್ದರು.

ಹಾಸನ ಸೂಕ್ಷ್ಮ ಪ್ರದೇಶವಾದ್ದರಿಂದ ಮುನ್ನೆಚ್ಚರಿಕಾ ದೃಷ್ಟಿಯಿಂದ ಮುಸ್ಲಿಂ ಬೀದಿಗಳಲ್ಲಿ ಹಾಗೂ ಮುಖ್ಯ ವೃತ್ತಗಳಾದ ಎನ್. ಆರ್. ವೃತ್ತ, ಹೇಮಾವತಿ ವೃತ್ತ, ಈದ್ಗಾ ಮೈದಾನ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಹೈ ಅಲರ್ಟ್ ಮಾದರಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮುಂಜಾಗ್ರತಾ ದೃಷ್ಟಿಯಿಂದ ನಾಳೆಯೂ‌ ಸಹಾ‌ ಪೊಲೀಸ್ ‌ಬಂದೋಬಸ್ತ್ ಮುಂದುವರೆಸುವುದಾಗಿ ತಿಳಿಸಿದ್ರು.

ಬೈಟ್ 1 : ಡಾ. ರಾಮ್ ನಿವಾಸ್ ಸಪೆಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹಾಸನ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2025 Ushodaya Enterprises Pvt. Ltd., All Rights Reserved.