ಹಾಸನ: ಕಾಲೇಜು ವಿದ್ಯಾರ್ಥಿಗಳಿಗೆ ಗಾಂಜಾ ಮಾರುತ್ತಿದ್ದ ಆರೋಪಿಯನ್ನು ಮಂಗಳವಾರ ಪೆನ್ಷನ್ ಮೊಹಲ್ಲಾ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರದ ಮೋತಿ ಕಾಲನಿ ನಿವಾಸಿ ಸುತೀಶ್ (24) ಬಂಧಿತ ಆರೋಪಿ. ಆರೋಪಿಯಿಂದ 180 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನಿಂದ 150 ರೂ.ಗೆ ಒಂದು ಪಾಕೆಟ್‌ನಂತೆ ಗಾಂಜಾ ತರಿಸಿಕೊಳ್ಳುತ್ತಿದ್ದ ಈತ, 200 ರೂ.ಗೆ ಹಾಸನದಲ್ಲಿ ಮಾರುತ್ತಿದ್ದ ಎನ್ನಲಾಗಿದೆ.
ನಗರದ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತಿದ್ದೆ ಎಂದು ಪೊಲೀಸರ ತನಿಖೆಯಲ್ಲಿ ಹೇಳಿದ್ದಾನೆ. ಪೆನ್ಷನ್ ಮೊಹಲ್ಲಾ ಠಾಣೆಯಲ್ಲಿ ದೂರು ದಾಖಲಾಗಿದೆ.