ETV Bharat / state

ಅರಸೀಕರೆ ನಗರಸಭೆ ಮೊದಲ ಸಾಮಾನ್ಯ ಸಭೆಯಲ್ಲೇ ಜೆಡಿಎಸ್​-ಬಿಜೆಪಿ ಗುದ್ದಾಟ

author img

By

Published : Jul 20, 2021, 3:28 PM IST

ನಗರಸಭೆಯಲ್ಲಿ ಸಾರ್ವಜನಿಕರ ಹಾಗೂ ನಗರದ ಅಭಿವೃದ್ಧಿ ಕೆಲಸಗಳು ನಡೆಯಬೇಕು ಎಂಬ ಸದುದ್ದೇಶದಿಂದ ಭೋಗಸ್ ಬಿಲ್‌ಗೆ ಸಂಬಂಧಿಸಿದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಿ ತನಿಖೆ ನಡೆಸಿ, ಅದು ಈ ಸಭೆಯಲ್ಲೇ ನಿರ್ಣಯ ಆಗಬೇಕು. ಇಲ್ಲದಿದ್ದರೆ ಬಹುಮತ ಸಾಬೀತುಪಡಿಸುವಂತೆ ಒತ್ತಡ ಹೇರಿದರು. ಇದಕ್ಕೆ ಅಧ್ಯಕ್ಷರು ಮತ್ತು ಪೌರಾಯುಕ್ತರು ಒಪ್ಪದಿದ್ದರೆ ನಾವು ಜಿಲ್ಲಾಧಿಕಾರಿ ಬಳಿ ನ್ಯಾಯ ಕೇಳುತ್ತೇವೆ..

arasikare-municipal-council-first-general-meeting
ಅರಸೀಕರೆ ನಗರಸಭೆ

ಅರಸೀಕೆರೆ : ನಗರಸಭೆಯಲ್ಲಿ ನಡೆದ ಮೊದಲ ಸಾಮಾನ್ಯ ಸಭೆಯಲ್ಲಿ ಜೆಡಿಎಸ್​​ ಮತ್ತು ಬಿಜೆಪಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. 72 ಲಕ್ಷ ರೂ. ಅವ್ಯಹಾರ, ಭೋಗಸ್​​​ ಬಿಲ್​​​​ ತನಿಖೆಗೆ ಒತ್ತಾಯಿಸಿ ಜೆಡಿಎಸ್​​ ಸದಸ್ಯರು ಪಟ್ಟು ಹಿಡಿದಿದ್ದರಿಂದ ಸಭೆ ಗದ್ದಲಮಯವಾಗಿತ್ತು.

ನಗರಸಭೆ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜೆಡಿಎಸ್ ಸದಸ್ಯರು ಬಿಲ್ ಬಗ್ಗೆ ಪ್ರಶ್ನಿಸುತ್ತಿದ್ದಂತೆ ಅಧ್ಯಕ್ಷ ಗಿರೀಶ್, ಬಿಜೆಪಿ ಸದಸ್ಯರು ಹಾಗೂ ಇತ್ತೀಚೆಗೆ ಜೆಡಿಎಸ್‌ನಿಂದ ಹೊರ ಹೋಗಿ ಬಿಜೆಪಿ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಸದಸ್ಯರ ನಡುವೆ ಮಾತಿಗೆ ಮಾತು ಬೆಳೆದು ತಾರಕಕ್ಕೇರಿತು.

ಮೊದಲ ಸಾಮಾನ್ಯ ಸಭೆಯಲ್ಲೇ ಜೆಡಿಎಸ್​ ಬಿಜೆಪಿ ಗುದ್ದಾಟ

ಇದಕ್ಕೂ ಮೊದಲು ಸಭೆಗೆ ಆಗಮಿಸಿದ ಜೆಡಿಎಸ್ ಸದಸ್ಯರು, ಪಕ್ಷದಿಂದ ಹೊರ ಹೋಗಿರುವ ಸದಸ್ಯರೊಂದಿಗೆ ಸೇರಿ ಆಸನದ ವ್ಯವಸ್ಥೆ ಮಾಡಿರುವುದನ್ನು ಖಂಡಿಸಿ ಆಯಾ ಪಕ್ಷದ ಸದಸ್ಯರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡುವಂತೆ ಪಟ್ಟು ಹಿಡಿದರು.

ಮಾಜಿ ನಗರಸಭೆ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಸಮೀವುಲ್ಲಾ ಮಾತನಾಡಿ, ಸಭೆ ಆರಂಭಕ್ಕೂ ಮುನ್ನವೇ ಗೊಂದಲವನ್ನು ಸೃಷ್ಟಿಸಲಾಗುತ್ತಿದೆ. ನಗರದ ಅಭಿವೃದ್ದಿ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳ ಬಗ್ಗೆ ಚರ್ಚೆಯಾಗಬೇಕು ಎನ್ನುತ್ತಿದ್ದಂತೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಅಧ್ಯಕ್ಷ ಗಿರೀಶ್ ಅವರು, ನಾವು ವಾರ್ಡ್ ಪ್ರಕಾರ ಆಸನದ ವ್ಯವಸ್ಥೆ ಮಾಡಲಾಗಿದೆ.

ಪಕ್ಷದ ಪ್ರಕಾರ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲು ಸಾಧ್ಯವಿಲ್ಲ ಎಂದರು. ಇದಕ್ಕೆ ಶಾಸಕ ಕೆ ಎಂ ಶಿವಲಿಂಗೇಗೌಡ ಸೇರಿದಂತೆ ಜೆಡಿಎಸ್ ಸದಸ್ಯರೆಲ್ಲರೂ ವಿರೋಧ ವ್ಯಕ್ತಪಡಿಸಿ ತಾವೇ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಿಕೊಂಡು ಸಭೆಯಲ್ಲಿ ಭಾಗವಹಿಸಿದ್ದು, ಎಲ್ಲರ ಕುತೂಹಲಕ್ಕೆ ಕಾರಣವಾಗಿ ಸ್ವಲ್ಪ ಹೊತ್ತು ಸಭೆಯಲ್ಲಿ ಗದ್ದಲ ಏರ್ಪಟ್ಟಿತ್ತು.

ಸಭೆಯಲ್ಲಿ ಪೌರಾಯುಕ್ತ ಚಲಪತಿ, ರಾಸ್ಕಲ್ ಎಂಬ ಪದ ಬಳಸಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಶಾಸಕ ಕೆ.ಎಂ. ಶಿವಲಿಂಗೇಗೌಡರು, ನೀವೊಬ್ಬ ಸರ್ಕಾರಿ ಅಧಿಕಾರಿಯಾಗಿ ಸಾಮಾನ್ಯ ಸಭೆಯಲ್ಲಿ ಈ ರೀತಿ ಅವಾಚ್ಯ ಶಬ್ಧಗಳನ್ನು ಬಳಸುವುದು ಸೂಕ್ತ ಅಲ್ಲ.

ನಗರಸಭೆಯಲ್ಲಿ ಸಾರ್ವಜನಿಕರ ಹಾಗೂ ನಗರದ ಅಭಿವೃದ್ಧಿ ಕೆಲಸಗಳು ನಡೆಯಬೇಕು ಎಂಬ ಸದುದ್ದೇಶದಿಂದ ಭೋಗಸ್ ಬಿಲ್‌ಗೆ ಸಂಬಂಧಿಸಿದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಮತ್ತು ಸದಸ್ಯರನ್ನೊಳಗೊಂಡ ಸಲಹಾ ಸಮಿತಿ ರಚಿಸಿ ತನಿಖೆ ನಡೆಸಿ, ಅದು ಈ ಸಭೆಯಲ್ಲೇ ನಿರ್ಣಯ ಆಗಬೇಕು. ಇಲ್ಲದಿದ್ದರೆ ಬಹುಮತ ಸಾಬೀತುಪಡಿಸುವಂತೆ ಒತ್ತಡ ಹೇರಿದರು. ಇದಕ್ಕೆ ಅಧ್ಯಕ್ಷರು ಮತ್ತು ಪೌರಾಯುಕ್ತರು ಒಪ್ಪದಿದ್ದರೆ ನಾವು ಜಿಲ್ಲಾಧಿಕಾರಿ ಬಳಿ ನ್ಯಾಯ ಕೇಳುತ್ತೇವೆ ಎಂದರು.

ಅಧ್ಯಕ್ಷ ಗಿರೀಶ್ ಮಾತನಾಡಿ, ಸಲಹಾ ಸಮಿತಿ ರಚನೆಗೆ ನಮ್ಮ ವಿರೋಧ ಇದೆ, ಕಾನೂನಿನಲ್ಲಿ ಅವಕಾಶವಿದ್ದರೆ ರಚಿಸೋಣ ಎಂದರು. ಆಗ ಶಾಸಕ ಶಿವಲಿಂಗೇಗೌಡರು, ಹಾಗಾದರೆ ಸದಸ್ಯರು ಕಾನೂನು ರೀತಿ ಮುಂದುವರಿಯುತ್ತಾರೆ. ಈ ಬಾರಿಯ ನಗರಸಭೆಯ ರಾಜಕಾರಣದ ಚಿತ್ರಣವೇ ಬೇರೆಯಾಗಲಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚೆಗೆ ಜೆಡಿಎಸ್ ತೊರೆದು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವ 6 ಸದಸ್ಯರು ಬಿಜೆಪಿ ಪರ ಮಾತನಾಡಿದ್ದು, ವಿಶೇಷವಾಗಿತ್ತು. ನಗರಸಭೆ ಉಪಾಧ್ಯಕ್ಷ ಕಾಂತೇಶ್, ನಗರಸಭೆ ಸದಸ್ಯರು, ಆಡಳಿತ ಸಿಬ್ಬಂದಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.