ಹಾಸನ: ಅರಕಲಗೂಡು ಜೆಡಿಎಸ್ ಶಾಸಕ ಎ.ಟಿ. ರಾಮಸ್ವಾಮಿ ಕುಡಿದು ತಮ್ಮನ್ನು ಪ್ರಶ್ನಿಸಿದ ವ್ಯಕ್ತಿಯನ್ನು ಬೈದು ಚಳಿ ಬಿಡಿಸಿದ್ದಾರೆ.
ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿದ ಕಬ್ಬಳಿಗೆರೆ ಶಾಲೆಯೊಂದರ ಕಾರ್ಯಕ್ರಮದಲ್ಲಿ ಈ ಘಟನೆ ಜರುಗಿದೆ. ಗ್ರಾಮಸ್ಥನೋರ್ವನಿಗೆ ಅಚಾಚ್ಯ ಶಬ್ದಗಳಿಂದ ಬೈದು ಬೆದರಿಸಿದ್ದಾರೆ. ಅರಕಲಗೂಡು ತಾಲೂಕಿನ ಬೆಳವಾಡಿಯಲ್ಲಿ ಎಂ.ಎಸ್.ಐ.ಎಲ್ ತೆರೆಯಬೇಕೆಂದು ಈ ಹಿಂದೆಯೂ ಗ್ರಾಮಸ್ಥರು ಮನವಿ ಮಾಡಿದ್ರು. ಆದ್ರೆ, ಗ್ರಾಮದ ಸುತ್ತಮುತ್ತಲಿನ ಸ್ತ್ರೀ ಶಕ್ತಿ ಸಂಘಗಳು ಮತ್ತು ಬೆಳವಾಡಿ ಮಹಿಳೆಯರು ಮದ್ಯದಂಗಡಿ ತೆರೆಯದಂತೆ ಪ್ರತಿಭಟನೆ ಮಾಡಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ರು. ಇದರ ನಡುವೆ ಇವತ್ತು ಕೆಲವು ಗ್ರಾಮಸ್ಥರು ಶಾಸಕರೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಎಂ.ಎಸ್.ಐ.ಎಲ್ ವಿಚಾರವಾಗಿ ಶಾಸಕರೊಂದಿಗೆ ಮನವಿ ಸಲ್ಲಿಸಿ ಚರ್ಚಿಸಲು ಮುಂದಾದ ವೇಳೆ, ಮದ್ಯಪಾನ ಮಾಡಿದ್ದ ವ್ಯಕ್ತಿಯೋರ್ವ ಎಂ.ಎಸ್.ಐ.ಎಲ್ ಮಾಡಿಸಿಯೇ ಕೊಡಬೇಕು ಎಂದು ಶಾಸಕರಿಗೆ ಆಗ್ರಹ ಮಾಡಿದ್ದೆ ತಡ ಶಾಸಕ ಎ.ಟಿ.ರಾಮಸ್ವಾಮಿ ಅವರಿಗೆ ಅದೆಲ್ಲಿತ್ತೋ ಕೋಪ, ಹಿಗ್ಗಾ ಮುಗ್ಗಾ ಬೈದಿದ್ದಾರೆ.