ಹಾಸನ/ ಚನ್ನರಾಯಪಟ್ಟಣ: ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕ ಧ್ವಂಸಗೊಳಿಸಿದ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ತಾಲೂಕಿನ ಬಾಗೂರು ಹೋಬಳಿ ದಡ್ಡಿಹಳ್ಳಿಯ ಗ್ರಾಮಸ್ಥರು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ದಡ್ಡಿಹಳ್ಳಿ ಗ್ರಾಮದ ಕಾಲೋನಿಯಲ್ಲಿ ಏ.21ರಂದು ಅಂಬೇಡ್ಕರ್ ಅವರ ಜನ್ಮ ದಿನಾಚರಣೆ ವೇಳೆ ಹೊರಗಿನ ವ್ಯಕ್ತಿಗಳಾದ ಸುರೇಶ್‍ಗೌಡ, ಮಂಜುನಾಥ್, ಗಿರೀಶ್ ಸೇರಿದಂತೆ ನಾಲ್ಕೈದು ಮಂದಿ ಏಕಾಏಕಿ ಬಂದು ಅಂಬೇಡ್ಕರ್ ಅವರ ಭಾವ ಚಿತ್ರವಿರುವ ನಾಮಫಲಕ ಕಿತ್ತು ಹಾಕುವಂತೆ ಬೆದರಿಕೆ ಹಾಕಿದರು. ಇದಕ್ಕೆ ಗ್ರಾಮಸ್ಥರು ಪ್ರತಿರೋಧ ವ್ಯಕ್ತಪಡಿಸಿದರೂ ನಾಮಫಲಕ ಕಿತ್ತು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ದೂರಿದ್ದಾರೆ.
ಘಟನೆ ಸಂಬಂಧ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ನಾಮಫಲಕವನ್ನು ಅದೇ ಜಾಗದಲ್ಲಿ ಇಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.