ETV Bharat / state

ಹುಲ್ಲಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ಭ್ರಷ್ಟಾಚಾರದ ಆರೋಪ..!

ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಹಿಂಬಾಲಕರಿಗೆ ಸಾಲವನ್ನು ಕೊಡುತ್ತಿದ್ದು, ಮತ್ತು ಕೆಲವು ಅಮಾಯಕರಿಗೆ ಅರ್ಜಿಗಳನ್ನು ಪಡೆದು ಅವರ ಹೆಸರಿಗೆ ಕಡಿಮೆ ರೂಪಾಯಿಗಳನ್ನು ಮಂಜೂರು ಮಾಡಿ ಹೆಚ್ಚಿಗೆ ಸಾಲ ಮಂಜೂರು ಮಾಡಿ ಕಾರ್ಯದರ್ಶಿ ಅಧ್ಯಕ್ಷರು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇವರುಗಳಿಗೆ ಬೆಂಗಾವಲಾಗಿ ಜಿಲ್ಲಾ ಉಸ್ತುವಾರಿ ಮಾಜಿ ಸಚಿವರಾದ ಎಚ್​​ಡಿ ರೇವಣ್ಣ ನಿಂತಿದ್ದಾರೆ ಎಂದರು.

allegations-of-corruption-primary-agricultural-association
ಹುಲ್ಲಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ಭ್ರಷ್ಟಾಚಾರದ ಆರೋಪ..!
author img

By

Published : Sep 23, 2020, 8:26 PM IST

ಅರಕಲಗೂಡು: ತಾಲೂಕಿನ ಹುಲ್ಲಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತ ಬೈಚನಹಳ್ಳಿಯಲ್ಲಿ ವ್ಯಾಪಕ ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ ಮಾಡಿದ್ದಾರೆ. ಆದರೆ ಅನೇಕ ಬಾರಿ ತನಿಖೆಗೆ ಮನವಿ ಮಾಡಿದರೂ, ಕಾಣದ ಕೈಗಳಿಂದ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ತಾಲೂಕು ಸಂಘಟನಾ ಕಾರ್ಯದರ್ಶಿ ಭುವನೇಶ್ ರೈತಸಂಘ ರವರು ಆರೋಪಿಸಿದ್ದಾರೆ‌.

ಹುಲ್ಲಂಗಾಲ ಪ್ರಾಥಮಿಕ ಕೃಷಿ ಪತ್ತಿನ ಸಂಘದಲ್ಲಿ ಭ್ರಷ್ಟಾಚಾರದ ಆರೋಪ..!

ಈ ಬಗ್ಗೆ ಪರಿಶೀಲಿಸಿ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ತಾಲೂಕು ಶಾಸಕರನ್ನು ಮತ್ತು ಸರ್ಕಾರವನ್ನು ಆಗ್ರಹಿಸಿದ್ದಾರೆ‌. ಸಂಘದ ಕಾರ್ಯದರ್ಶಿ ನಾಗೇಶ್ ಮತ್ತು ಅಧ್ಯಕ್ಷ ಸತೀಶ್ ತಮಗೆ ಬೇಕಾದವರನ್ನು ಸಂಘಕ್ಕೆ ನಿರ್ದೇಶಕರನ್ನಾಗಿ ಆಯ್ಕೆ ಮಾಡಿಕೊಂಡು, ರೈತರಿಗೆ ಮೋಸ ಮಾಡುತ್ತಿದ್ದಾರೆ.

ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿ ತಮ್ಮ ಹಿಂಬಾಲಕರಿಗೆ ಸಾಲವನ್ನು ಕೊಡುತ್ತಿದ್ದು, ಮತ್ತು ಕೆಲವು ಅಮಾಯಕರಿಗೆ ಅರ್ಜಿಗಳನ್ನು ಪಡೆದು ಅವರ ಹೆಸರಿಗೆ ಕಡಿಮೆ ರೂಪಾಯಿಗಳನ್ನು ಮಂಜೂರು ಮಾಡಿ ಹೆಚ್ಚಿಗೆ ಸಾಲ ಮಂಜೂರು ಮಾಡಿ ಕಾರ್ಯದರ್ಶಿ ಅಧ್ಯಕ್ಷರು ಜನರಿಗೆ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಇವರುಗಳಿಗೆ ಬೆಂಗಾವಲಾಗಿ ಜಿಲ್ಲಾ ಉಸ್ತುವಾರಿ ಮಾಜಿ ಸಚಿವರಾದ ಎಚ್​​ಡಿ ರೇವಣ್ಣ ನಿಂತಿದ್ದಾರೆ ಎಂದರು.

ಕಾರ್ಯದರ್ಶಿ ನಾಗೇಶ್ ಎಂಬುವವರು ಕಳೆದ 15 ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವನು ಒಂದೊಂದು ಕುಟುಂಬದಲ್ಲಿ ನಾಲ್ಕು ಅಥವಾ ಐದು ಮಂದಿಗೆ ಬಿಪಿಎಲ್ ಕಾರ್ಡ್ ಮಾಡಿಸಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಲಕ್ಷ ರೂ. ಗಳಿಗಿಂತಲೂ ಹೆಚ್ಚು ಸಾಲ ಮಂಜೂರು ಮಾಡಿಕೊಂಡು ದುರ್ಬಳಕೆ ಮಾಡಿರುತ್ತಾನೆ ಎಂದು ರಾಮೇಗೌಡ ಆರೋಪಿಸಿದರು.

ಭುವನೇಶ ರೈತ ಸಂಘದ ಕಾರ್ಯದರ್ಶಿ ಮಾತನಾಡಿ, ಸಾಲ ಮನ್ನಾ ಯೋಜನೆಯ ಫಲಾನುಭವಿಗಳ ಆಗಿದ್ದು, ಉಳ್ಳವರೇ ಸಾಲ ಪಡೆದು ಸಾಲ ಮನ್ನಾ ಯೋಜನೆಯ ಅನುಕೂಲವನ್ನು ಪಡೆದಿದ್ದಾರೆ.ನಮ್ಮ ತಾಲೂಕಿನಲ್ಲಿ ಎಲ್ಲಾ ಸಂಘಗಳಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು ಸರ್ಕಾರ ಗಮನಹರಿಸಬೇಕು ಎಂದು ಮನವಿ ಮಾಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.