ಹಾಸನ: ವಿವಾಹೇತರ ಸಂಬಂಧದ ಶಂಕೆಯಿಂದ ತನ್ನ ಗಂಡನನ್ನು ಹೆಂಡ್ತಿಯೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.
ಚಂದ್ರ (52) ತನ್ನ ಪತ್ನಿ ಇಂದ್ರಳಿಂದಲೇ ಕೊಲೆಗೀಡಾಗಿರುವ ವ್ಯಕ್ತಿ. ಬೇಲೂರು ತಾಲೂಕಿನ ವಾಗಿನಕೆರೆ ಕಲ್ಲಹಳ್ಳಿಯಲ್ಲಿ ಈ ಪ್ರಕರಣ ನಡೆದಿದೆ.
ಗಂಡ ಚಂದ್ರನಿಗೆ (52) ವಿವಾಹೇತರ ಸಂಬಂಧ ಇದೆ ಎಂಬ ಅನುಮಾನವನ್ನು ವ್ಯಕ್ತಪಡಿಸಿ ಪತ್ನಿ ಇಂದ್ರ ನಡುವೆ ಕಳೆದ 10 ದಿನಗಳಿಂದ ಗಲಾಟೆ ನಡೆಯುತ್ತಲೇ ಇತ್ತು. ನಿನ್ನೆ ಕೂಡ ಬೇಲೂರಿಗೆ ಕೆಲಸಕ್ಕೆಂದು ಹೋಗಿ ಬಂದ ಬಳಿಕ ರಾತ್ರಿ ಇದೇ ವಿಚಾರಕ್ಕೆ ಗಲಾಟೆ ಆಗಿದೆ. ಇಬ್ಬರಿಗೂ ಜಗಳವಾದ ಹಿನ್ನೆಲೆ ಮನೆಯಲ್ಲಿದ್ದ ಮಚ್ಚಿನಿಂದ ಪತಿಯನ್ನು ಕೊಚ್ಚಿ ಕೊಲೆ ಮಾಡಿದ್ದಾಳೆ ಪತ್ನಿ ಇಂದ್ರ.
ಗಂಡ-ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ ಆದ್ರೆ ಇಲ್ಲಿ ದಂಪತಿ ನಡುವಿನ ಜಗಳ ಕೊಲೆಯಲ್ಲಿ ಅಂತ್ಯ ಕಂಡಿದೆ.
ಈ ಸಂಬಂಧ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಹಿಳೆ ಇಂದ್ರಳನ್ನು ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.