ETV Bharat / state

ಆಕಸ್ಮಿಕ ಬೆಂಕಿ ಅವಘಡ: 4 ಹಸು ಸೇರಿ 3 ಗುಡಿಸಲು ಭಸ್ಮ - ನಾಲ್ಕು ಹಸು ಸೇರಿ ಮೂರು ಗುಡಿಸಲು ಭಸ್ಮ

ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ನಾಲ್ಕು ಹಸುಗಳು ಸೇರಿದಂತೆ ಮೂರು ಗುಡಿಸಲುಗಳು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ದುಮ್ಮನೇಹಳ್ಳಿ ಹರಿಜನ ಕಾಲೋನಿಯಲ್ಲಿ ಸಂಭವಿಸಿದೆ.

ಆಕಸ್ಮಿಕ ಬೆಂಕಿ ಅವಘಡ
author img

By

Published : Sep 21, 2019, 11:41 PM IST

ಅರಸೀಕೆರೆ: ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ನಾಲ್ಕು ಹಸುಗಳು ಸೇರಿದಂತೆ ಮೂರು ಗುಡಿಸಲು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ತಾಲೂಕಿನ ದುಮ್ಮನೇಹಳ್ಳಿ ಹರಿಜನ ಕಾಲೋನಿಯಲ್ಲಿ ಸಂಭವಿಸಿದೆ.

ಆಕಸ್ಮಿಕ ಬೆಂಕಿ ಅವಘಡ

ಗ್ರಾಮದ ವಾಸಿ ಮಲ್ಲಪ್ಪ ತನ್ನ ಮನೆಗೆ ಹೊಂದಿಕೊಂಡಂತೆ ಕೊಟ್ಟಿಗೆ ನಿರ್ಮಿಸಿಕೊಂಡಿದ್ದರು. ರಾತ್ರಿ ಗ್ರಾಮದಲ್ಲಿ ವಿದ್ಯುತ್ ಕಡಿತಗೊಂಡಿದ್ದರಿಂದ ಲಾಟಿನ್ ಹಚ್ಚಿಟ್ಟು ಮನೆಯಿಂದ ಹೊರ ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಮಲ್ಲಪ್ಪನ ಕೊಟ್ಟಿಗೆಗೆ ತಾಗಿದ ಬೆಂಕಿ ಧಗಧಗಿಸಿ ಹೊತ್ತಿ ಉರಿದಿದ್ದು, ಬೆಂಕಿಯ ಕೆನ್ನಾಲಿಗೆ ಮಲ್ಲಪ್ಪನ ಗುಡಿಸಿಲಿನ ಪಕ್ಕದಲ್ಲೇ ಇದ್ದ ಅವರ ಸೋದರನ ಗುಡಿಸಿಲಿಗೂ ತಾಗಿ ನೋಡು ನೋಡುತ್ತಿದ್ದಂತೆ ಮೂರು ಗುಡಿಸಲು ಹಾಗೂ ನಾಲ್ಕು ಜಾನುವಾರುಗಳು ಬೆಂಕಿಗೆ ಆಹುತಿಯಾಗಿದೆ.

ಸುದ್ದಿ ತಿಳಿದು ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಬರುವಷ್ಟರಲ್ಲಿಯೇ ಹಸುಗಳು ಸೇರಿದಂತೆ ಗುಡಿಸಲುಗಳು ಬೆಂಕಿಯ ರೌದ್ರಾವತಾರಕ್ಕೆ ಸುಟ್ಟು ಭಸ್ಮವಾಗಿದೆ.

ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಗ್ರಾಮಾಂತರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Intro:ಅರಸೀಕೆರೆ - ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ ನಾಲ್ಕು ಹಸುಗಳು ಸೇರಿದಂತೆ ಮೂರು ಗುಡಿಸಲು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಸಂಭವಿಸಿರುವ ಘಟನೆ ತಾಲ್ಲೂಕಿನ ದುಮ್ಮನೇಹಳ್ಳಿ ಹರಿಜನ ಕಾಲೋನಿಯಲ್ಲಿ ಸಂಭವಿಸಿದೆ.

ಗ್ರಾಮದ ವಾಸಿ ಮಲ್ಲಪ್ಪ ತನ್ನ ಮನೆಗೆ ಹೊಂದಿಕೊಂಡಂತೆ ಕೊಟ್ಟಿಗೆಯನ್ನು ನಿರ್ಮಿಸಿಕೊಂಡಿದ್ದು ರಾತ್ರಿ ಗ್ರಾಮದಲ್ಲಿ ವಿದ್ಯುತ್ ಕಡಿತಗೊಂಡಿದ್ದರಿಂದ ಲಾಟಿನ್ ಹಚ್ಚಿಟ್ಟು ಮನೆಯಿಂದ ಹೊರ ಹೋಗಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಮಲ್ಲಪ್ಪನ ಕೊಟ್ಟಿಗೆಗೆ ತಾಗಿದ ಬೆಂಕಿ ದಗದಗಿಸಿ ಹೊತ್ತಿ ಉರಿದಿದ್ದು, ಬೆಂಕಿಯ ಕೆನ್ನಾಲಿಗೆ ಮಲ್ಲಪ್ಪನ ಗುಡಿಸಿಲಿನ ಪಕ್ಕದಲ್ಲೇ ಇದ್ದ ಅವರ ಸೋದರರ ಗುಡಿಸಿಲಿಗೂ ತಾಗಿ ನೋಡು ನೋಡುತ್ತಿದ್ದಂತೆ ಮೂರು ಗುಡಿಸಲು ಹಾಗೂ ನಾಲ್ಕು ಜಾನುವಾರುಗಳು ಬೆಂಕಿಗೆ ಆಹುತಿಯಾಗಿದ್ದು ,

ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿ ಬರುವಷ್ಟರಲ್ಲಿ ಹಸುಗಳು ಸೇರಿದಂತೆ ಗುಡಿಸಿಲುಗಳು ಬೆಂಕಿಯ ರೌದ್ರಾವತಾರಕ್ಕೆ ಸುಟ್ಟು ಭಸ್ಮವಾಗಿದೆ.
ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಗ್ರಾಮಾಂತರ ಠಾಣೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.Body:ಬೈಟ್ 1 :ಮಲ್ಲಪ್ಪ, ಮಾಲೀಕ.Conclusion:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.