ಚನ್ನರಾಯಪಟ್ಟಣ : ಕಸಾಯಿಖಾನೆಗೆ ಸಾಗಿಸುತ್ತಿದ್ದ ಹಸು, ಎಮ್ಮೆಗಳನ್ನು ಯುವ ಬ್ರಿಗೇಡ್ ಸಂಘದ ನಾಯಕ ದರ್ಣೇಶ್ ಇವರ ಸಾರಥ್ಯದಲ್ಲಿ ತಡೆಹಿಡಿಯಲಾಗಿದೆ.
ತಾಲೂಕಿನಲ್ಲಿ ಕ್ಯಾಂಟರ್ ಗಾಡಿಯನ್ನು ತಡೆಹಿಡಿದ ದರ್ಣೇಶ್ ತಂಡದವರು ನಂತರ ವಾಹನವನ್ನು ಪರೀಕ್ಷಿಸಿದ ಸಂದರ್ಭದಲ್ಲಿ ಹಸುಗಳನ್ನು ಕಸಾಯಿಖಾನೆಗೆ ಕೊಂಡೊಯ್ಯುತ್ತಿರುವುದು ತಿಳಿದು ಬಂದಿದೆ.
ನಂತರ ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸಿ ಗಾಡಿಯನ್ನು ವಶಪಡಿಸಿಕೊಳ್ಳಲಾಗಿದೆ. ಬಿಜೆಪಿ ಮುಖಂಡರಾದ ಅಣತಿ ಆನಂದ್ ಹಾಗೂ ಸತೀಶ್ ಅವರ ಸಹಾಯದಿಂದ ರಾಸುಗಳನ್ನು ಗೋಶಾಲೆಗೆ ಬಿಡಲಾಯಿತು.