ಹಾಸನ: ಚನ್ನರಾಯಪಟ್ಟಣ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಪೇದೆ ಕೈ-ಕಾಲು ತೊಳೆಯಲು ಹೇಮಾವತಿ ಕಾಲುವೆಗೆ ಇಳಿದಿದ್ದಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ.
ತಾಲೂಕಿನ ಕರಿಮಾರನಹಳ್ಳಿ ಗ್ರಾಮದ ವೆಂಕಟೇಗೌಡ (46) ನೀರಿನಲ್ಲಿ ಕೊಚ್ಚಿ ಹೋಗಿರುವ ಪೇದೆ ಎಂದು ತಿಳಿದು ಬಂದಿದೆ. ಇವರು ಚನ್ನರಾಯಪಟ್ಟಣದಲ್ಲಿನ ಸರ್ಕಲ್ ಇನ್ಸ್‌ಪೆಕ್ಟರ್ ಕಚೇರಿಯಲ್ಲಿ ಮುಖ್ಯ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ವೆಂಕಟೇಗೌಡ ಈಜು ಬಲ್ಲವರಾಗಿದ್ದರೂ ನೀರಿನ ಸೆಳೆತಕ್ಕೆ ಈಜಲಾಗದೇ ಕೊಚ್ಚಿ ಹೋಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.