ಹಾಸನ : ಅಂಬರೀಶ್ ಎಂಬುವರು ಆನ್ಲೈನ್ನಲ್ಲಿ ಸಾಲ ಪಡೆದಿದ್ದರು. ಆ ಸಾಲವನ್ನು ಮರುಪಾವತಿಸದಿರೋದಕ್ಕೆ ಕಂಪನಿಯವರು ಅವರ ಫೇಸ್ಬುಕ್ ಅಕೌಂಟ್ನನ್ನು ಹ್ಯಾಕ್ ಮಾಡಿ, ಅಶ್ಲೀಲ ಸಂದೇಶವನ್ನು ಎಲ್ಲರಿಗೂ ಕಳುಹಿಸಿದ್ದಾರೆ. ಇದರಿಂದ ಅಪಮಾನಗೊಂಡ ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ನಗರದ ಉದಯಗಿರಿ ಬಡಾವಣೆಯಲ್ಲಿ ನಡೆದಿದೆ.
ಹಾಸನ ನಗರದ ಉದಯಗಿರಿ ಬಡಾವಣೆಯ ಅಂಬರೀಶ್ ಕೆ. ಸಿ. (39) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಿದ್ದ ಮೃತ ಅಂಬರೀಶ್, ವ್ಯಾಪಾರಕ್ಕಾಗಿ ಆನ್ಲೈನ್ನಲ್ಲಿ ಸಾಲ ಪಡೆದಿದ್ದರು.

ಈ ಸಾಲವನ್ನು ಪ್ರತಿ ತಿಂಗಳು ಮರುಪಾವತಿ ಮಾಡುತ್ತಿದ್ದರು. ಕೋವಿಡ್-19 ಹಿನ್ನೆಲೆ ಕೆಲ ತಿಂಗಳಿನಿಂದ ಸಾಲ ಕಟ್ಟಲು ಆಗಿರಲಿಲ್ಲ. ಹಾಗಾಗಿ, ಸಾಲಕ್ಕೆ ದುಬಾರಿ ಬಡ್ಡಿ ವಿಧಿಸಲಾಗಿತ್ತು.
ಇದನ್ನೂ ಓದಿ: ಪತ್ನಿಯ ಮೇಲಿನ ಪತಿಯ ಹಲ್ಲೆಗೆ ಬಿಗ್ ಟ್ವಿಸ್ಟ್: ಗಂಡನ ಕ್ರೌರ್ಯ ಬಿಚ್ಚಿಟ್ಟ ಅಪೂರ್ವ
ಇದನ್ನ ಪ್ರಶ್ನೆ ಮಾಡಿದ ಮೃತ ಅಂಬರೀಶ್ಗೆ ಬೆದರಿಕೆ ಸಹ ಹಾಕಿದ್ದರು ಎನ್ನಲಾಗಿದೆ. ಬಳಿಕ ಅವರನ್ನ ಅವ್ಯಾಚ ಶಬ್ಧಗಳಿಂದ ನಿಂದಿಸಿ, ಫೇಸ್ಬುಕ್ ಅಕೌಂಟ್ ಹ್ಯಾಕ್ ಮಾಡಿ ಅಶ್ಲೀಲ ವಿಡಿಯೋಗಳನ್ನು ಎಲ್ಲರಿಗೂ ಕಳಿಸಿದ್ದರು ಎನ್ನಲಾಗ್ತಿದೆ.
ಇದರಿಂದ ಮನನೊಂದ ಅಂಬರೀಶ್, 3 ದಿನಗಳ ಹಿಂದೆ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಸಾವಿಗೀಡಾಗಿದ್ದಾರೆ. ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.