ETV Bharat / state

ಹಾಸನದಲ್ಲಿ ಜೆಡಿಎಸ್​​ ವಿರುದ್ಧ ಗುಡುಗಿದ ಎ. ಮಂಜು

author img

By

Published : Dec 16, 2019, 11:38 PM IST

ಜೆಡಿಎಸ್​​​ನವರು ಹಾಸನ ಜಿಲ್ಲೆ ಅಭಿವೃದ್ದಿ ಮಾಡಿಲ್ಲ. ಅವರ ಆಸ್ತಿಪಾಸ್ತಿ ಇರುವ ಕಡೆಗಳಲ್ಲಿ ಅಭಿವೃದ್ದಿಗೆ ಒತ್ತು ನೀಡಿದ್ದಾರೆ ಎಂದು ಮಾಜಿ ಸಚಿವ ಎ. ಮಂಜು ಆರೋಪಿಸಿದ್ದಾರೆ.

jds
ಜೆಡಿಎಸ್​​ ವಿರುದ್ಧ ಎ. ಮಂಜು ವಾಗ್ದಾಳಿ

ಹಾಸನ: ಪ್ರೀತಿ ವಿಶ್ವಾಸ ಇರುವ ಕಡೆ ಜನರು ವಿಶ್ವಾಸವಿಟ್ಟು ಮತ ಹಾಕುತ್ತಾರೆ. ಆಯಾ ಪಕ್ಷದ ನಾಯಕರು ಉಳಿದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಎ. ಮಂಜು ಅವರು ತಿಳಿಸಿದ್ರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವ ಪಕ್ಷದಲ್ಲಿ ಪ್ರೀತಿ, ವಿಶ್ವಾಸ ಇರುವುದಿಲ್ಲ ಅಲ್ಲಿ ನಾಯಕರು ಉಳಿಯುವುದಿಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ ಸ್ಥಿತಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದರು.

ಜೆಡಿಎಸ್​​ ವಿರುದ್ಧ ಎ. ಮಂಜು ವಾಗ್ದಾಳಿ

ಇನ್ನು ಜೆಡಿಎಸ್ ನವರು ಹಾಸನ ಜಿಲ್ಲೆ ಅಭಿವೃದ್ಧಿ ಮಾಡಿಲ್ಲ, ಬದಲಾಗಿ ಅವರ ಆಸ್ತಿಪಾಸ್ತಿ ಇರುವ ಕಡೆಗಳಲ್ಲಿ ಮಾತ್ರ ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ಹೊಳೆನರಸೀಪುರ ಕ್ಷೇತ್ರ ಅಭಿವೃದ್ದಿಗೆ ಮುತುವರ್ಜಿ ವಹಿಸಿದ್ದಾರೆ. ಇವರೇನು ಹಾಸನದ ಸಮಗ್ರ ಅಭಿವೃದ್ದಿಗೆ ಕೆಲಸ ಮಾಡಿಲ್ಲ. ನನ್ನ ಅಧಿಕಾರವಧಿಯಲ್ಲಿ ಅವಧಿಯಲ್ಲಿ ಸಾಕಷ್ಟು ಕೆಲಸಗಳಾಗಿವೆ ಎಂದರು.

ಪ್ರಚೋದನಕಾರ ರಾಜಕಾರಣ ಪ್ರಸ್ತುತ ಸಮಾಜಕ್ಕೆ ಮಾರಕವಾಗಿದೆ. ಪ್ರಸ್ತುತ ದಿನಗಳಲ್ಲಿ ಜೆಡಿಎಸ್ ನವರು ಯುವಕರನ್ನು ಪ್ರಚೋದಿಸುವ ಮೂಲಕ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದ ಸಮಾಜದಲ್ಲಿ ಅಶಾಂತಿ ನೆಲೆಸಲು ಕಾರಣವಾಗಿದ್ದು, ಯುವಕರ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ನಂಬಿಹಳ್ಳಿ ಘಟನೆ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

ನಂಬಿಹಳ್ಳಿಯಲ್ಲಿ ನಡೆದ ಘಟನೆ ಸಂಬಂಧ ಸುಮಾರು 6 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಆದ್ರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ಇನ್ನು ಉಪಚುನಾವಣೆ ಹಣ ಹೆಂಡದ ಮೂಲಕ ನಡೆದಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಮಂಜು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟ ಮಾತು ತಪ್ಪುವರಲ್ಲ ಎಂಬುದು ಜನರಿಗೆ ಅರ್ಥವಾಗಿದೆ. ಆ ಹಿನ್ನೆಲೆಯಲ್ಲಿ ಜನರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ 12 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ ಎಂದರು. ಜೆಡಿಎಸ್ ನಾಯಕರ ಆಕ್ರೋಶಭರಿತ ಮಾತುಗಳೇ ಅವರು ಚುನಾವಣೆಯಲ್ಲಿ ಸೋಲಲು ಕಾರಣವಾಗಿದೆ ಎಂದು ಮಂಜು ವ್ಯಂಗ್ಯವಾಡಿದರು.

Intro:ಹಾಸನ:ಪ್ರೀತಿಯಿಂದ ಎಲ್ಲವನ್ನು ಗೆಲ್ಲಲು ಸಾಧ್ಯ. ಪ್ರೀತಿ ವಿಶ್ವಾಸ ಇರುವ ಕಡೆ ಜನರು ವಿಶ್ವಾಸವಿಟ್ಟು ಮತ ಹಾಕುತ್ತಾರೆ. ಆಯಾ ಪಕ್ಷದ ನಾಯಕರು ಉಳಿದುಕೊಳ್ಳುತ್ತಾರೆ ಎಂದು ಮಾಜಿ ಸಚಿವ ಎ.ಮಂಜು ಅವರು ತಿಳಿಸಿದರು.

ನಗರದಲ್ಲಿ ಸುದ್ದಿಗಾಋಒಂದಿಗೆ ಮಾತನಾಡಿ, ಯಾವ ಪಕ್ಷದಲ್ಲಿ ಇದು ಇರುವುದಿಲ್ಲ ಅಲ್ಲಿ ನಾಯಕರು ಉಳಿಯುವುದಿಲ್ಲ. ಮುಂದಿನ ದಿನಗಳಲ್ಲಿ ಜೆಡಿಎಸ್ ಸ್ಥಿತಿ ಏನಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ ಎಂದರು.

ನಾನು ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ ಪಕ್ಷ ಸಂಘಟನೆಗೆ ಕೆಲಸ ಮಾಡುತ್ತೇನೆ ಎಂದ ಅವರು ಜೆಡಿಎಸ್ ನವರು ಹಾಸನ ಜಿಲ್ಲೆ ಅಭಿವೃದ್ದಿ ಮಾಡಿಲ್ಲ ಅವರ ಆಸ್ತಿಪಾಸ್ತಿ ಇರುವ ಕಡೆಗಳಲ್ಲಿ ಅಭಿವೃದ್ದಿಗೆ ಒತ್ತು ನೀಡಿದ್ದಾರೆ. ಹೊಳೆನರಸೀಪುರ ಕ್ಷೇತ್ರ ಅಭಿವೃದ್ದಿಗೆ ಮುತುವರ್ಜಿ ವಹಿಸಿದ್ದಾರೆ. ಇವರೇನು ಹಾಸನದ ಸಮಗ್ರ ಅಭಿವೃದ್ದಿಗೆ ಕೆಲಸ ಮಾಡಿಲ್ಲ. ನನ್ನ ಅಧಿಕಾರವಧಿಯಲ್ಲಿ ಅವಧಿಯಲ್ಲಿ ಸಾಕಷ್ಟು ಕೆಲಸಗಳಾಗಿವೆ ಎಂದರು.

ಪ್ರಚೋಧನಕಾರ ರಾಜಕಾರಣ ಪ್ರಸ್ತುತ ಸಮಾಜಕ್ಕೆ ಮಾರಕವಾಗಿದೆ. ಪ್ರಸ್ತುತ ದಿನಗಳಲ್ಲಿ ಜೆಡಿಎಸ್ ನವರು ಯುವಕರನ್ನು ಪ್ರಚೋಧಿಸುವ ಮೂಲಕ ರಾಜಕಾರಣ ಮಾಡುತ್ತಿ ದ್ದಾರೆ. ಇದರಿಂದ ಸಮಾಜದಲ್ಲಿ ಅಶಾಂತಿ ನೆಲೆಸಲು ಕಾರಣವಾಗಿದ್ದು, ಯುವಕರ ಭವಿಷ್ಯದ ಮೇಲೂ ಪರಿಣಾಮ ಬೀರಲಿದೆ ಎಂದು ನಂಬಿಹಳ್ಳಿ ಘಟನೆ ಕುರಿತು ಅಸಮಾ ಧಾನ ವ್ಯಕ್ತಪಡಿಸಿದರು.

ನಂಬಿಹಳ್ಳಿಯಲ್ಲಿ ನಡೆದ ಘಟನೆ ಹಿನ್ನಲೆಯಲ್ಲಿ ಸುಮಾರು 6 ಜನರ ಮೇಲೆ ಕೇಸು ದಾಖಲಿಸಲಾಗಿತ್ತು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು.
ಇನ್ನು ಉಪಚುನಾವಣೆ ಹಣ ಹೆಂಡದ ಮೂಲಕ ನಡೆದಿದೆ ಎಂಬ ಆರೋಪಕ್ಕೆ ಪ್ರತಿಕ್ರಿಯಸಿದರ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕೊಟ್ಟ ಮಾತು ತಪ್ಪುವರಲ್ಲ ಎಂಬುದು ಜನರಿಗೆ ಅರ್ಥವಾಗಿದೆ ಆ ಹಿನ್ನಲೆಯಲ್ಲಿ ಜನರು ಬಿಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಿ 12 ಕ್ಷೇತ್ರಗಳಲ್ಲಿ ಗೆಲ್ಲಿಸಿದ್ದಾರೆ ಎಂದ ಅವರು ಜೆಡಿಎಸ್ ನಾಯಕರ ಆಕ್ರೋಶ ಭರಿತ ಮಾತುಗಳು ಚುನಾವಣೆಯಲ್ಲಿ ಸೋಲು ಕಾಣಲು ಕಾರಣವಾಗಿದೆ ಎಂದು ವ್ಯಂಗ್ಯವಾಡಿದರು.

ಬೈಟ್ : ಎ. ಮಂಜು, ಮಾಜಿ ಸಚಿವ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ‌.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.