ಸಕಲೇಶಪುರ (ಹಾಸನ): ರಾಷ್ಟ್ರೀಯ ಹೆದ್ದಾರಿ 75 ಕೆಂಪು ಹೊಳೆ ರಕ್ಷಿತಾರಣ್ಯ ಸಮೀಪ ಅಪರಿಚಿತ ವ್ಯಕ್ತಿಯೋರ್ವ ಕಾಡಾನೆ ದಾಳಿಗೆ ಬಲಿಯಾಗಿರುವ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 75 ಕೆಂಪು ಹೊಳೆ ರಕ್ಷಿತಾರಣ್ಯ ಸಮೀಪ ಒಂಟಿ ಸಲಗವೊಂದು ರಸ್ತೆ ದಾಟುತ್ತಿದ್ದ ವೇಳೆ ವ್ಯಕ್ತಿಯೋರ್ವನ ಮೇಲೆ ದಾಳಿ ಮಾಡಿ ಸಾಯಿಸಿದೆ ಎನ್ನಲಾಗಿದೆ. ಮೃತಪಟ್ಟ ವ್ಯಕ್ತಿಯ ಗುರುತು ಈವರೆಗೂ ಪತ್ತೆಯಾಗಿಲ್ಲ.
ಬೆಂಗಳೂರು-ಮಂಗಳೂರು ನಡುವಿನ ಹೆದ್ದಾರಿಯಲ್ಲಿ ಆನೆ ಸಂಚರಿಸುವುದು ಕಂಡುಬರುತ್ತಿದ್ದು, ಕೂಡಲೇ ರಸ್ತೆ ಬದಿಯಲ್ಲಿ ರೈಲು ಹಳಿಯ ಬ್ಯಾರಿಕೇಡ್‌ಗಳನ್ನು ಅಳವಡಿಸಬೇಕೆಂದು ಹೆಗ್ಗದ್ದೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಅಲ್ಲದೆ ವ್ಯಕ್ತಿ ಆನೆಯೊಂದಿಗೆ ಫೋಟೋ ತೆಗೆದುಕೊಳ್ಳಲು ತೆರಳಿ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ: ಮಾನವ ಮತ್ತು ಪ್ರಾಣಿ ಸಂಘರ್ಷಕ್ಕೆ ಶೀಘ್ರವೇ ಶಾಶ್ವತ ಪರಿಹಾರ: ಸಚಿವ ಗೋಪಾಲಯ್ಯ