ETV Bharat / state

505 ಕೋವಿಡ್‌ ಪ್ರಕರಣ ಪತ್ತೆ: ಹಾಸನದಲ್ಲಿ ಸೋಂಕಿತರ ಸಂಖ್ಯೆ 21,316ಕ್ಕೆ ಏರಿಕೆ! - hassan latest news

ಜಿಲ್ಲೆಯಲ್ಲಿ ಈವರೆಗೆ 21,316 ಕೋವಿಡ್​ ಪ್ರಕರಣಗಳು ವರದಿಯಾಗಿದ್ದು, 375 ಸೋಂಕಿತರು ಸಾವನ್ನಪ್ಪಿದ್ದಾರೆ. 16,751 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದು, ಸದ್ಯ 4,190 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮುಂದುವರೆದಿದೆ.

505 covid cases found in hassan
505 ಕೋವಿಡ್‌ ಪ್ರಕರಣಗಳು ಪತ್ತೆ: ಹಾಸನದಲ್ಲಿ ಸೋಂಕಿತರ ಸಂಖ್ಯೆ 21,316ಕ್ಕೆ ಏರಿಕೆ!
author img

By

Published : Oct 11, 2020, 5:19 PM IST

ಹಾಸನ: ಜಿಲ್ಲೆಯಲ್ಲಿ ಇಂದು ಹೊಸದಾಗಿ 505 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿಗೆ ತುತ್ತಾದ 3 ಮಂದಿ ಕೊನೆಯುಸಿರೆಳೆದಿದ್ದಾರೆ. ಈ ಮೂಲಕ ಸೋಂಕಿತರ ಸಂಖ್ಯೆ 21,316ಕ್ಕೆ ಮತ್ತು ಮೃತರ ಸಂಖ್ಯೆ 375 ತಲುಪಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ಕೊರೊನಾ ಪ್ರಕರಣಗಳು:

ಮಾಧ್ಯಮಕ್ಕೆ ಮಾಹಿತಿ ನೀಡಿದ ಡಾ. ಸತೀಶ್, ಇಂದು ಆಸ್ಪತ್ರೆಯಿಂದ ಬಿಡುಗಡೆಯಾದ 422 ಜನರು ಸೇರಿ ಈವರೆಗೆ 16,751 ಮಂದಿ ಸೋಂಕಿನಿಂದ ಸಂಪೂರ್ಣ ಗುಣಮುಖರಾಗಿದ್ದಾರೆ. ಸದ್ಯ 4,190 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 46 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿಸಿದರು.

ಆರೋಗ್ಯಾಧಿಕಾರಿ ಡಾ. ಸತೀಶ್

ಇಂದು ವರದಿಯಾದ ಪ್ರಕರಣಗಳು:

ಆಲೂರು-11, ಅರಕಲಗೂಡು-48, ಅರಸೀಕೆರೆ-72, ಬೇಲೂರು-30, ಚನ್ನರಾಯಪಟ್ಟಣ-81, ಹಾಸನ-186, ಹೊಳೆನರಸೀಪುರ-45, ಸಕಲೇಶಪುರ-24, ಇತರೆ- 8 ಸೇರಿದಂತೆ 505 ಕೊರೊನಾ ಪಾಸಿಟಿವ್ ಪ್ರಕರಣಗಳು ಇಂದು ದಾಖಲಾಗಿದೆ.

ಆರೋಗ್ಯಾಧಿಕಾರಿ ಮನವಿ:

ಕೊರೊನಾ ಉಲ್ಬಣವಾಗುತ್ತಿರುವ ಹಿನ್ನಲೆಯಲ್ಲಿ ಯಾರಿಗಾದರೂ ಉಸಿರಾಟದ ತೊಂದರೆ, ಜ್ವರ, ಶೀತ, ಕೆಮ್ಮು ಏನಾದರೂ ಸಮಸ್ಯೆ ಕಂಡುಬಂದರೆ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡಿ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು.

ತಾಲೂಕುವಾರು ಕೋವಿಡ್ ಪ್ರಕರಣಗಳು:

1. ಆಲೂರು- 766.

2. ಅರಕಲಗೂಡು- 2066.

3. ಅರಸೀಕೆರೆ- 2600.

4. ಬೇಲೂರು - 1517.

5. ಚನ್ನರಾಯಪಟ್ಟಣ- 2950.

6. ಹಾಸನ- 8976.

7. ಹೊಳೆನರಸೀಪುರ- 1569.

8. ಸಕಲೇಶಪುರ- 764.

*. ಇತರೆ 108 ಪ್ರಕರಣಗಳು ಸೇರಿ ಈವರೆಗೆ ಒಟ್ಟು 21,316 ಕೋವಿಡ್​​ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ಮಾಹಿತಿ ನೀಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.