ETV Bharat / state

ರೌಡಿ ಶೀಟರ್ ಭರತ್ ಕೊಲೆ ಪ್ರಕರಣ : 5 ಮಂದಿ ಆರೋಪಿಗಳ ಬಂಧನ - ರೌಡಿ ಶೀಟರ್​ ಕೊಲೆ ಕೇಸ್​ ಆರೋಪಿಗಳ ಬಂಧನ

ಕೊಲೆ ಪ್ರಕರಣ ಜರುಗಿ ಕೇವಲ 4 ದಿನದ ಅಂತರದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಹಾಸನ ಪೊಲೀಸ್ರು ಯಶಸ್ವಿಯಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ..

bharat
bharat
author img

By

Published : May 29, 2021, 9:41 PM IST

ಹಾಸನ : ಮೇ 23 ರಂದು ನಡೆದ ಭರತ್ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಹಾಸನದ ಪೆನ್ಷನ್ ಮೊಹಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ಹಾಸನ ನಗರದ ವಲ್ಲಬಾಯಿ ರಸ್ತೆಯಲ್ಲಿ ಗ್ಲಾಸ್ ಕಟಿಂಗ್ ಮಾಡಿಕೊಂಡಿದ್ದ ಕೋಕಿ @ ರೋಹಿತ್, ಆರ್‌ಎಂಸಿ ಯಾರ್ಡ್‌ನಲ್ಲಿ ವೆಲ್ಡಿಂಗ್ ಕೆಲಸ ಮಾಡ್ತಿದ್ದ ವಾಸು @ ವಸಂತ, ಹೂವಿನ ವ್ಯಾಪಾರಿ ಮಣಿ @ ಮಣಿಕಂಠ ಹೆಚ್.ಪಿ, ಹಾಸನಾಂಬ ದೇವಾಲಯದ ಸಮೀಪ ಟೈಲರ್ ಕೆಲಸ ಮಾಡುತ್ತಿದ್ದ ಜಯಂತ @ ಕ್ಯಾಟ್, ಹಾಸನ ಜಿಲ್ಲೆಯ ಶಾಂತಿಗ್ರಾಮದ ಸಮೀಪ ಬನವಾಸೆ ಗ್ರಾಮದ ಪಾನಿಪುರಿ ವ್ಯಾಪಾರಿ ಶರತ್ @ ಶರು ಹಾಗೂ ಬಂಧಿತ ಆರೋಪಿಗಳು. ಭರತ್ ಗ್ಯಾಸ್ ಏಜೆನ್ಸಿಯ ನೌಕರ ಸುದೀಪ @ ಸುಧಿ ತಲೆಮರೆಸಿಕೊಂಡಿರುವ ಆರೋಪಿ.

ಏನಿದು ಪ್ರಕರಣ ?: ಮೇ 23ರ ಮಧ್ಯಾಹ್ನ ಚಲಿಸುತ್ತಿದ್ದ ದ್ವಿಚಕ್ರ ವಾಹನ ತಡೆದು ಹಾಡಹಗಲೇ ಹೂವಿನ ವ್ಯಾಪಾರಿಯಾಗಿದ್ದ ರೌಡಿಶೀಟರ್ ಭರತ್ ಎಂಬುವನ್ನು ನಗರದ 80 ಅಡಿ ರಸ್ತೆಯಲ್ಲಿ ಕೆಲ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಬಹಳ ಬರ್ಬರವಾಗಿ ಕೊಲೆಗೈದಿದ್ದರು.

ಕೊಲೆಯಾದ ಭರತ್ ಎಂಬುವನು ಹಿಂದೆ ಕೆಂಚ ಮತ್ತು ಲೋಕಿ ಎಂಬ ಇಬ್ಬರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪುಡಿರೌಡಿ. ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಭರತ್ ಎರಡು ವಾರಗಳ ಹಿಂದಷ್ಟೇ ಜೈಲಿನಿಂದ ಬೇಲ್ ಮೇಲೆ ಬಂದಿದ್ದ.

ಗೆಳೆಯನನ್ನು ಕೊಂದಿದ್ದ ಎಂಬ ಕಾರಣಕ್ಕೆ ಈ ಆರು ಮಂದಿ ಆರೋಪಿಗಳು ಹಳೇ ದ್ವೇಷದಿಂದ ಕೊಲೆಗೈಯಲು ಪ್ಲಾನ್ ಮಾಡಿದ್ದು, ಬಳಿಕ ಆತ ಬಿಡಿ ಹೂಗಳನ್ನು ಕಟ್ಟಲು ತೆಗೆದುಕೊಂಡು ಹೋಗುತ್ತಿದ್ದ ವೇಳೆ ಸಂತೇಪೇಟೆಯ 80 ಅಡಿ ರಸ್ತೆಯಲ್ಲಿ ಆತನನ್ನು ತಡೆದು ಮನಸೋ ಇಚ್ಛೆ ಹಲ್ಲೆ ಮಾಡಿ ಬಹಳ ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು.

ಕೊಲೆ ಪ್ರಕರಣ ಜರುಗಿ ಕೇವಲ 4 ದಿನದ ಅಂತರದಲ್ಲಿ ಆರೋಪಿಗಳನ್ನು ಹೆಡೆಮುರಿ ಕಟ್ಟುವಲ್ಲಿ ಹಾಸನ ಪೊಲೀಸ್ರು ಯಶಸ್ವಿಯಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.