ETV Bharat / state

ಹಾಸನ ವಿಮಾನ ನಿಲ್ದಾಣಕ್ಕೆ ಬಿಜೆಪಿಯವರು 20 ಕೋಟಿ ರೂ ಕಮಿಷನ್ ಪಡೆದಿದ್ದಾರೆ: ಹೆಚ್.​ಡಿ.ರೇವಣ್ಣ - hassan latest news

ಹಾಸನದಲ್ಲಿ ಏರ್ಪೋರ್ಟ್​ ನಿರ್ಮಾಣಕ್ಕೆ ಬಿಜೆಪಿಯವರು ಗುತ್ತಿಗೆದಾರನಿಂದ 20 ಕೋಟಿ ಹಣವನ್ನು ಕಮಿಷನ್ ರೂಪದಲ್ಲಿ​ ಪಡೆದಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆರೋಪಿಸಿದ್ದಾರೆ.

20 crore commission to Hassan Airport alleged revanna
ಹೆಚ್​ ಡಿ ರೇವಣ್ಣ ಸುದ್ದಿಗೋಷ್ಟಿ
author img

By

Published : Sep 2, 2021, 8:03 PM IST

ಹಾಸನ: ಬಿಜೆಪಿ ರಾಷ್ಟ್ರೀಯ ಉಸ್ತುವಾರಿ ಅರುಣ್ ಸಿಂಗ್ ಜೆಡಿಎಸ್ ಮುಳುಗಿರುವ ಪಕ್ಷ ಅಂತ ಹೇಳಿದ್ದಾರಲ್ಲ, 2023ಕ್ಕೆ ಬಿಜೆಪಿ ಉಸ್ತುವಾರಿ ಇದ್ರೆ ಗೊತ್ತಾಗುತ್ತೆ ಎಂದು ಮಾಜಿ ಸಚಿವ ರೇವಣ್ಣ ಅರುಣ್ ಸಿಂಗ್​ಗೆ ಟಾಂಗ್ ನೀಡಿದ್ದಾರೆ.

ಹೆಚ್.ಡಿ.ರೇವಣ್ಣ ಸುದ್ದಿಗೋಷ್ಟಿ

ಹಾಸನದ ಖಾಸಗಿ ಕಲ್ಯಾಣ ಮಂಟಪದಲ್ಲಿ ಆಯೋಜನೆ ಮಾಡಿದ್ದ ಜಿಲ್ಲಾ ಸಮಾವೇಶದಲ್ಲಿ ಮಾತನಾಡಿದ ಅವರು, 2023ಕ್ಕೆ ಜೆಡಿಎಸ್ ಪಕ್ಷ ಏನೆಂಬುದನ್ನು ತೋರಿಸುತ್ತೇವೆ. ಡಬಲ್ ಇಂಜಿನ್ ಸರ್ಕಾರದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಹಾಸನದ ಏರ್ಪೋರ್ಟ್ ಕಾಮಗಾರಿ ಗುತ್ತಿಗೆಯನ್ನು ಮುಂಬೈನವರಿಗೆ ನೀಡಲು ಮುಂದಾಗಿದ್ದು, ಆ ಗುತ್ತಿಗೆದಾರನಿಂದ 20 ಕೋಟಿ ಹಣವನ್ನು ನೀಡುವಂತೆ ಡಿಮ್ಯಾಂಡ್ ಮಾಡಿದ್ದಾರೆ. ಹೀಗೆ ಡಿಮ್ಯಾಂಡ್ ಮಾಡಿದವರ ಹೆಸರನ್ನು ಕಾಲ ಬಂದಾಗ ಹೇಳುತ್ತೇನೆ. ಈ ಬಗ್ಗೆ ಸಿಎಂ ತನಿಖೆ ಮಾಡಿದ್ರೆ ನಾನು ದಾಖಲೆ ನೀಡುತ್ತೇನೆ ಎಂದು ಹೇಳಿದರು.

ಜೆಡಿಎಸ್ ಮುಳುಗುವ ಪಕ್ಷ ಹಿಂದಿರುವ ಅರುಣ್ ಸಿಂಗ್ ಅವರ ಮಾತು ಕೂಡ ಲೂಸ್ ಟಾಕ್ ಅಲ್ವಾ ಎಂದಿರುವ ಅವರು, ದೇವೇಗೌಡರು ಅಧಿಕಾರ ಹಚ್ಚಿಕೊಂಡವರಲ್ಲ, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಜನರ ಋಣ ತೀರಿಸಿದ್ದಾರೆ. ಬಿಜೆಪಿ ಮುಖಂಡರ ಬಳಿ ನಾವು ಎಂದೂ ಹೋಗಿಲ್ಲ, ಮುಂದೆ ಬರುವ ಸ್ಥಳೀಯ ಚುನಾವಣೆಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳನ್ನು ನಾವು ಎದುರಿಸುತ್ತೇವೆ. ಕುಮಾರಸ್ವಾಮಿ ಅಧಿಕಾರದಲ್ಲಿದ್ದಾಗ ರೈತರಿಗೆ ಯಾವ ರೀತಿಯ ಕೊಡುಗೆ ಕೊಟ್ಟಿದ್ದಾರೆ ಎಂಬುದು ರಾಜ್ಯದ ಜನತೆಗೆ ಗೊತ್ತಿದೆ. ಜಿ.ಟಿ.ದೇವೇಗೌಡರಿಗೆ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ವ್ಯಂಗ್ಯವಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯವರು ಕುಮಾರಸ್ವಾಮಿ ಅವರ ಫೋಟೋ ಇಟ್ಕೋಬೇಕು. ಕುಮಾರಸ್ವಾಮಿಯಿಂದ ಈಗ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂಬುದನ್ನು ಮರೆಯಬಾರದು ಎಂದು ಬಿಜೆಪಿಯವರಿಗೆ ಕಿವಿಮಾತು ಹೇಳಿದರು.

ಇದನ್ನೂ ಓದಿ:ಯಡಿಯೂರಪ್ಪ ಸ್ವಯಂಪ್ರೇರಿತರಾಗಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟರು: ಅಮಿತ್ ಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.