ETV Bharat / state

ಹಾಸನ: ಕೋವಿಡ್​​ ಪಾಸಿಟಿವ್​ ಎಂದು ವರದಿ ನೀಡಿದ ಲ್ಯಾಬ್​ ಟೆಕ್ಷಿಷಿಯನ್​ ಕಣ್ಣಿಗೆ ಗುದ್ದಿದ ಸೋಂಕಿತ! - covid positive report

ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಬಂದಿದಕ್ಕೆ ಸಿಟ್ಟಾದ ಇಬ್ಬರು ಸುಳ್ಳು ವರದಿ ನೀಡುತ್ತಿದ್ದೀರ ಎಂದು ಆರೋಪಿಸಿ ಲ್ಯಾಬ್ ಟೆಕ್ನಿಷಿಯನ್ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಲ್ಯಾಬ್​ ಟೆಕ್ನಿಷಿಯನ್ ಆಸ್ಪತ್ರೆಗೆ ದಾಖಲಾಗಿದ್ದು, ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

beaten lab technician
ಲ್ಯಾಬ್ ಟೆಕ್ನಿಷಿಯನ್ ಮೇಲೆ ಹಲ್ಲೆ
author img

By

Published : Sep 29, 2020, 7:40 PM IST

ಹಾಸನ: ಕೊರೊನಾ ಪಾಸಿಟಿವ್ ಎಂದು ರಿಪೋರ್ಟ್ ನೀಡಿದ ಹಿನ್ನೆಲೆಯಲ್ಲಿ ಲ್ಯಾಬ್​​​ ಟೆಕ್ನಿಷಿಯನ್ ಮೇಲೆ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ದೊಡ್ಡಮೇಟಿಕುರ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲ್ಯಾಬ್​​ ಟೆಕ್ನಿಷಿಯನ್ ಆಗಿರುವ ಧರಣಿ ಎಂಬಾತನಿಗೆ ಹಲ್ಲೆ ಮಾಡಲಾಗಿದೆ. ದೊಡ್ಡಮೇಟಿಕುರ್ಕೆ ಗ್ರಾಮದ ಪ್ರದೀಪ್ ಮತ್ತು ಗೊಲ್ಲರಹಟ್ಟಿ ಗ್ರಾಮದ ಮಂಜುನಾಥ್ ಹಲ್ಲೆ ಮಾಡಿರುವ ಆರೋಪಿಗಳು ಎಂದು ತಿಳಿದುಬಂದಿದೆ.

ಸೆಪ್ಟೆಂಬರ್ 17ರಂದು ದೊಡ್ಡಮೇಟಿಕುರ್ಕೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೋವಿಡ್-19 ಪರೀಕ್ಷೆ ಮಾಡಿಸಿದ್ದು, ವರದಿಯಲ್ಲಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ, ಸಿಟ್ಟಾದ ಮಂಜುನಾಥ್ ಮತ್ತು ಪ್ರದೀಪ್, ಗಂಟಲು ಪರೀಕ್ಷೆಗೆ ಪಾಸಿಟಿವ್ ಎಂಬ ವರದಿಯನ್ನು ನೀಡುತ್ತೀರಾ..? ಆಸ್ಪತ್ರೆಯಲ್ಲಿ ಹಣಕ್ಕಾಗಿ ದಂಧೆ ಮಾಡುತ್ತಿದ್ದೀರಿ. ಚೆನ್ನಾಗಿರುವವರಿಗೂ ಸುಖಾಸುಮ್ಮನೆ ಕ್ವಾರಂಟೈನ್​​​ ಮಾಡಿ ಎಂದು ಹೇಳುತ್ತಿದ್ದೀರ ಎಂದು ಆರೋಪಿಸಿ ಹಲ್ಲೆ ಮಾಡಿದ್ದಾರೆ.

ಘಟನೆಯಲ್ಲಿ ಧರಣೇಶ್ ಕಣ್ಣಿಗೆ ಬಲವಾದ ಪೆಟ್ಟು ಬಿದ್ದಿದ್ದು, ಹಾಸನದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.