ಹಾಸನ: ಜಿಲ್ಲೆಯಲ್ಲಿ ಇಂದು ಹೊಸದಾಗಿ 140 ಕೋವಿಡ್ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 25,610ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯಾಧಿಕಾರಿ ಸತೀಶ್ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಅವರು, ಇಂದು ಬಿಡುಗಡೆಯಾದ 144 ಜನರು ಸೇರಿ ಈವರೆಗೂ 24,000 ಮಂದಿ ಗುಣಮುಖರಾಗಿದ್ದಾರೆ. 1179 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್ ಆಸ್ಪತ್ರೆ, ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 37 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. 434 ಮಂದಿ ಸಾವನ್ನಪ್ಪಿದ್ದಾರೆ ಎಂದರು.
ಇಂದು ಪತ್ತೆಯಾದ ತಾಲೂಕುವಾರು ಪ್ರಕರಣ: ಆಲೂರಿನಲ್ಲಿ 15, ಅರಕಲಗೂಡು-12, ಅರಸೀಕೆರೆ-1, ಬೇಲೂರು-5, ಚನ್ನರಾಯಪಟ್ಟಣ-10, ಹಾಸನ-72, ಹೊಳೆನರಸೀಪುರ-10, ಸಕಲೇಶಪುರ-15.