ಹಾವೇರಿ: ಜಿಲ್ಲೆಯಲ್ಲಿ ಇಂದು 137 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4050ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಡಳಿತ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

154 ಜನ ಗುಣಮುಖರಾಗಿ, ಮನೆಗೆ ಮರಳಿದ್ದಾರೆ. ಬ್ಯಾಡಗಿ ತಾಲೂಕು 11, ಹಾನಗಲ್ ತಾಲೂಕು 25, ಹಾವೇರಿ ತಾಲೂಕು 45, ಹಿರೇಕೆರೂರು ತಾಲೂಕು 18, ರಾಣೆಬೆನ್ನೂರು ತಾಲೂಕು 21, ಸವಣೂರು ತಾಲೂಕು 04, ಶಿಗ್ಗಾವಿ ತಾಲೂಕು 11 ಹಾಗೂ ಇತರ ಜಿಲ್ಲೆಯ ಇಬ್ಬರಿಗೆ ಕೊರೊನಾ ದೃಢಪಟ್ಟಿದೆ ಎಂದು ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ 891 ಹೋಂ ಐಸೋಲೇಷನ್, 406 ಸೋಂಕಿತರಿಗೆ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಸ್.ಬಿ. ಶೆಟ್ಟೆಣ್ಣನವರ್ ತಿಳಿಸಿದರು.