ಹಾಸನ: ಜಿಲ್ಲೆಯಲ್ಲಿ ಇಂದು 104 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 1,842ಕ್ಕೆ ಏರಿದೆ. ಅಲ್ಲದೆ, ಐವರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 50ಕ್ಕೆ ಏರಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.
ಇಂದು 33 ಮಂದಿ ಗುಣಮುಖರಾಗಿದ್ದು, ಈವರೆಗೂ 880 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 912 ಸಕ್ರಿಯ ಪ್ರಕರಣಗಳಿವೆ. ಹೊಸದಾಗಿ ಪತ್ತೆಯಾದ 104 ಪ್ರಕರಣಗಳಲ್ಲಿ ಆಲೂರು-5, ಸಕಲೇಶಪುರ-2, ಬೇಲೂರು, ಹೊಳೆನರಸೀಪುರಲ್ಲಿ - 1, ಹಾಸನ 50, ಅರಸೀಕೆರೆ-16, ಚನ್ನರಾಯಪಟ್ಟಣ -8, ಅರಕಲಗೂಡು ತಾಲೂಕಿನಲ್ಲಿ 11 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ವಿವರಿಸಿದರು.
ಕೋವಿಡ್-19 ಉಲ್ಬಣವಾಗುತ್ತಿರುವ ಹಿನ್ನೆಲೆಯಲ್ಲಿ ಉಸಿರಾಟದಲ್ಲಿ ತೊಂದರೆ, ಶೀತ, ನೆಗಡಿ, ಕೆಮ್ಮು ಕಾಣಿಸಿಕೊಂಡರೆ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕೆಂದು ಡಾ. ಸತೀಶ್ ಮನವಿ ಮಾಡಿದರು.