ಹಾಸನ: ಕೋವಿಡ್-19 ಸಂತ್ರಸ್ತರಿಗೆ ನೆರವಾಗಲು ಶ್ರವಣಬೆಳಗೊಳ ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸರ್ಕಾರಕ್ಕೆ 10 ಲಕ್ಷ ರೂ.ಗಳ ಡಿಡಿಯನ್ನು ಜಿಲ್ಲಾಧಿಕಾರಿ ಆರ್.ಗಿರೀಶ್ ರವರಿಗೆ ಹಸ್ತಾಂತರಿಸಿದರು.
ಹಣವನ್ನು ಕೊರೊನಾ ವಿರುದ್ಧದ ಹೋರಾಟದಲ್ಲಿ ಸದ್ಬಳಕೆ ಮಾಡಿಕೊಳ್ಳುವಂತೆ ಶ್ರೀಗಳು ತಿಳಿಸಿದ್ದಾರೆ.
ಹಾಸನ ಜೈನ ಸಮಾಜದ ಅಧ್ಯಕ್ಷ ಅಜಿತ್ ಕುಮಾರ್ ಜೈನ್ ಹಾಗೂ ಪದಾಧಿಕಾರಿಗಳು ಮಠದ ವತಿಯಿಂದ ನೀಡಿದ 10 ಲಕ್ಷದ ಚೆಕ್ ಅನ್ನು ಜಿಲ್ಲಾಧಿರಾರಿಗಳಿಗೆ ನೀಡಿದರು.
ಕೊರೊನಾ ಪರಿಹಾರ ನಿಧಿಗೆ 10 ಲಕ್ಷ ದೇಣಿಗೆ ನೀಡಿದ ಶ್ರವಣಬೆಳಗೊಳದ ಜೈನ ಮಠ - CM relief fund
ಈ ಹಿಂದೆ ಪ್ರವಾಹ ಪೀಡಿತ ಸಂತ್ರಸ್ಥರಿಗೆ 2 ಲಾರಿಗಳಲ್ಲಿ ಮಠದಿಂದ ದಿನಸಿ ಪದಾರ್ಥಗಳನ್ನ ನೀಡಿದ್ದು, ಇದೀಗ ಕೊರೊನಾದಿಂದ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಮಠದ ವತಿಯಿಂದ 10 ಲಕ್ಷ ರೂ. ನೀಡಿದೆ.

ಕೊರೊನಾ ವಿರುದ್ಧ ಹೋರಾಡಲು 10 ಲಕ್ಷ ದೇಣಿಗೆ ನೀಡಿದ ಜೈನ ಮಠ