ETV Bharat / state

ಮೊದಲ ಹಂತದ ಲೋಕಸಮರ: 49 ನಾಮಪತ್ರ ತಿರಸ್ಕಾರ! - ನಾಮಪತ್ರ ತಿರಸ್ಕೃತ

ಮೊದಲ ಹಂತದ ಲೋಕಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆಯನ್ನು ರಾಜ್ಯ ಚುನಾವಣಾ ಆಯೋಗ ನಡೆಸಿದೆ. ಸಲ್ಲಿಕೆಯಾಗಿದ್ದ 335 ನಾಮಪತ್ರಗಳ ಪೈಕಿ 49 ಉಮೇದುವಾರಿಕೆಗಳು ತಿರಸ್ಕೃತಗೊಂಡಿವೆ.

ಚುನಾವಣಾ ಆಯೋಗ
author img

By

Published : Mar 28, 2019, 3:00 AM IST

ಬೆಂಗಳೂರು: ರಾಜ್ಯದಲ್ಲಿ ನಡೆಯಲಿರುವ ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ 335 ನಾಮಪತ್ರ ಸಲ್ಲಿಕೆಯಾಗಿದ್ದು ಅದರಲ್ಲಿ 49 ನಾಮಪತ್ರಗಳು ತಿರಸ್ಕೃತಗೊಂಡಿವೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.

ಮೊದಲ ಹಂತದ ಲೋಕಸಭಾ ಚುನಾವಣೆಗೆ ಸಲ್ಲಿಕೆಯಾಗಿದ್ದ ನಾಮಪತ್ರಗಳ ಪರಿಶೀಲನೆಯನ್ನು ರಾಜ್ಯ ಚುನಾವಣಾ ಆಯೋಗ ನಡೆಸಿದೆ. ಉಡುಪಿಯಲ್ಲಿ ಸಲ್ಲಿಕೆಯಾಗಿದ್ದ ಎಲ್ಲ 14 ಅಭ್ಯರ್ಥಿಗಳ ನಾಮಪತ್ರ, ಚಿತ್ರದುರ್ಗದಿಂದ ಸಲ್ಲಿಕೆಯಾಗಿದ್ದ 24 ಅಭ್ಯರ್ಥಿಗಳ ನಾಮಪತ್ರ ಹಾಗು ಚಿಕ್ಕಬಳ್ಳಾಪುರದಿಂದ ಸಲ್ಲಿಕೆಯಾಗಿದ್ದ ಎಲ್ಲ 25 ನಾಮಪತ್ರಗಳನ್ನು ಆಯೋಗ ಸಿಂಧುಗೊಳಿಸಿದೆ. ಹಾಸನದಲ್ಲಿ 14 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, 4 ನಾಮಪತ್ರ ತಿರಸ್ಕೃತಗೊಂಡಿವೆ. ದಕ್ಷಿಣ ಕನ್ನಡದಲ್ಲಿ ಕಣಕ್ಕಿಳಿದಿದ್ದ 13 ಅಭ್ಯರ್ಥಿಗಳಲ್ಲಿ‌3 ನಾಮಪತ್ರ ತಿರಸ್ಕೃತಗೊಂಡಿವೆ. ತುಮಕೂರಿನಿಂದ ಸಲ್ಲಿಕೆಯಾಗಿದ್ದ 23 ಅಭ್ಯರ್ಥಿಗಳಲ್ಲಿ 4, ಮಂಡ್ಯ 27ರಲ್ಲಿ 1, ಮೈಸೂರು 30 ರಲ್ಲಿ 5, ಚಾಮರಾಜನಗರ 13 ರಲ್ಲಿ 1, ಬೆಂಗಳೂರು ಗ್ರಾಮಾಂತರ 21 ರಲ್ಲಿ 3, ಬೆಂಗಳೂರು ಉತ್ತರ 40 ರಲ್ಲಿ 8, ಬೆಂಗಳೂರು ಕೇಂದ್ರ 32 ರಲ್ಲಿ 9, ಕೋಲಾರ 23 ರಲ್ಲಿ 3 ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.

ಉಡುಪಿ,ಚಿತ್ರದುರ್ಗ ಮತ್ತು ಚಿಕ್ಕಬಳ್ಳಾಪುರದಲ್ಲಿ ಒಂದೂ ನಾಮಪತ್ರ ತಿರಸ್ಕೃತಗೊಂಡಿಲ್ಲ. ಬೆಂಗಳೂರು ಉತ್ತರದಲ್ಲಿ ಅತಿ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿದ್ದು, ಹಾಸನದಲ್ಲಿ ಕಡಿಮೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಚುನಾವಣಾ ಆಯೋಗದ ಮೂಲಗಳ ಪ್ರಕಾರ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿಯ ಯಾವುದೇ ಅಭ್ಯರ್ಥಿಗಳ ನಾಮಪತ್ರ ತಿರಸ್ಕೃತಗೊಂಡಿಲ್ಲ ಎಂದು ತಿಳಿದು ಬಂದಿದೆ.

sample description
ETV Bharat Logo

Copyright © 2025 Ushodaya Enterprises Pvt. Ltd., All Rights Reserved.