ಗದಗ: ಕುಡಿದ ಮತ್ತಿನಲ್ಲಿ ಯುವಕನೋರ್ವನನ್ನ ಹತ್ಯೆಗೈದಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ವಿಜಯ ಇಂಡಸ್ಟ್ರಿ ಬಳಿ ನಡೆದಿದೆ.
ಸಂತೋಷ ಕರಾಟೆ (31) ಮೃತ ಯುವಕ. ನಾಗದೇವತೆ ಪ್ರತಿಷ್ಠಾನ ಹಿನ್ನೆಲೆ ಸ್ನೇಹಿತರೆಲ್ಲರೂ ಊಟದ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಮೋಜು-ಮಸ್ತಿಯಲ್ಲಿ ಮೊಳಗಿದ್ದ ಯುವಕರು ಯಾವುದೋ ಕಾರಣಕ್ಕೆ ಜಗಳಕ್ಕೆ ಇಳಿದ ಬಳಿಕ ಕೊಲೆ ನಡೆದಿದೆ ಎನ್ನಲಾಗುತ್ತಿದೆ.
ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಡಿವೈಎಸ್ಪಿ ವಿಜಯಕುಮಾರ್ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.