ETV Bharat / state

ಮನೆ ಬಿಟ್ಟು ಹೋದ ತಂದೆ, ಮೃತನಾದ ಸಾಕು ತಂದೆ: ಮನನೊಂದು ಯುವತಿ ಆತ್ಮಹತ್ಯೆ..!

ಮೃತಳ ತಂದೆ ಮನೆ ಬಿಟ್ಟು ಹೋಗಿದ್ದರು. ಇತ್ತೀಚೆಗೆ ಸಾಕು ತಂದೆಯೂ ಸಾವನ್ನಪ್ಪಿದ್ದ ಹಿನ್ನೆಲೆ, ದೀಪಾ ತುಂಬಾ ನೊಂದಿದ್ದಳು ಎಂಬ ಮಾಹಿತಿ ತಿಳಿದು ಬಂದಿದೆ. ಹಾಗಾಗಿ ತಾನು ಕೆಲಸ ಮಾಡುತಿದ್ದ ಪತಂಜಲಿ ಮಾರಾಟ ಮಳಿಗೆಯಲ್ಲಿ ಇಂದು ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.

young woman committed suicide
ಮನನೊಂದು ಯುವತಿ ಆತ್ಮಹತ್ಯೆ
author img

By

Published : Jun 14, 2020, 10:43 PM IST

ಗದಗ: ಯುವತಿಯೊಬ್ಬ ನೇಣಿಗೆ ಶರಣಾಗಿರುವ ಘಟನೆ ಮುಂಡರಗಿಯಲ್ಲಿ ನಡೆದಿದೆ. ಪಟ್ಟಣದ ಹೇಮಂತಗೌಡ ಪಾಟೀಲ್ ಅವರ ಬಿಲ್ಡಿಂಗ್​​​ನಲ್ಲಿರುವ, ಪತಂಜಲಿ‌ ಮಾರಾಟ ಮಳಿಗೆಯಲ್ಲಿ ಈ ದುರ್ಘಟನೆ ನಡೆದಿದೆ.

ಮೃತಳನ್ನು ದೀಪಾ ಕಾಗನೂರಮಠ ಎಂದು ಗುರುತಿಸಲಾಗಿದ್ದು, ಕಳೆದ 10 ವರ್ಷಗಳ ಹಿಂದೆ ಮೃತಳ ತಂದೆ ಮನೆ ಬಿಟ್ಟು ಹೋಗಿದ್ದರು. ಇತ್ತೀಚೆಗೆ ಸಾಕು ತಂದೆಯೂ ಸಾವನ್ನಪ್ಪಿದ್ದ ಹಿನ್ನೆಲೆ, ದೀಪಾ ತುಂಬಾ ನೊಂದಿದ್ದಳು ಎಂಬ ಮಾಹಿತಿ ತಿಳಿದು ಬಂದಿದೆ. ಹಾಗಾಗಿ ತಾನು ಕೆಲಸ ಮಾಡುತಿದ್ದ ಪತಂಜಲಿ ಮಾರಾಟ ಮಳಿಗೆಯಲ್ಲಿ ಇಂದು ನೇಣಿಗೆ ಶರಣಾಗಿದ್ದಾಳೆ ಎನ್ನಲಾಗಿದೆ.

ಈ ಕುರಿತು ಡೆತ್ ನೋಟ್​​​​​ನಲ್ಲಿ ಯುವತಿ ಈ ವಿಚಾರ ಬರೆದಿಟ್ಟಿದ್ದಾಳೆ ಎಂದು ಪೊಲೀಸರಿಂದ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸ್ಥಳಕ್ಕೆ ಮುಂಡರಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.