ಗದಗ: ಬ್ಲೇಡ್ನಿಂದ ಕುತ್ತಿಗೆ ಕೊಯ್ದುಕೊಂಡು ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗದಗದಲ್ಲಿ ನಡೆದಿದೆ.
ಓದಿ: ರಾಜ್ಯದಲ್ಲಿ 57,98,611 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ: ಒಂದೇ ದಿನಕ್ಕೆ ಶೇ. 90ರಷ್ಟು ಗುರಿ ಸಾಧನೆ
ರಾಜೀವ್ ಗಾಂಧಿ ನಗರದ ನಿವಾಸಿ ಚನ್ನಬಸಪ್ಪ ವೀರಪ್ಪ ತಳಕಲ್ (35) ಆತ್ಮಹತ್ಯೆಗೆ ಯತ್ನಿಸಿದಾತ. ಮೇಲ್ನೋಟಕ್ಕೆ ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆಗೆ ಮುಂದಾಗಿದ್ದಾರೆ ಎನ್ನಲಾಗಿದೆ. ಇನ್ನು ಗಂಭೀರವಾಗಿ ಗಾಯಗೊಂಡಿದ್ದ ಯುವಕನನ್ನು ಬದುಕಿಸಿದ್ದೇ ಒಂದು ರೋಚಕತೆ.
ಘಟನೆ ಹಿನ್ನೆಲೆ:
ಈ ಸಂಬಂಧ ವಿಷಯ ತಿಳಿದ ಜಿಮ್ಸ್ 108 ಅಂಬುಲೆನ್ಸ್ ಸಿಬ್ಬಂದಿ ಇಎಂಟಿ ಮಹೇಶ್ ಭಜಂತ್ರಿ ಮತ್ತು ಪೈಲೆಟ್ ಅಶೋಕ್ ನೀಲಗಾರ್ ಸ್ಥಳಕ್ಕೆ ಧಾವಿಸಿ ಕಾರ್ಯಪ್ರವೃತ್ತರಾದರು. 1ನೇ ಮಹಡಿಯಲ್ಲಿ ಚನ್ನಬಸಪ್ಪ ಬ್ಲೇಡ್ನಿಂದ ಕುತ್ತಿಗೆ ಭಾಗವನ್ನು ಶ್ವಾಸನಾಳ (ಟ್ರಾಕಿಯಾ)ದವರೆಗೆ ಕೊಯ್ದುಕೊಂಡಿದ್ದ. ತಕ್ಷಣ ಆತನನ್ನು ಮಹೇಶ್ ಭಜಂತ್ರಿ ಪರೀಕ್ಷಿಸಿದಾಗ ತೀವ್ರ ರಕ್ತಸ್ರಾವದಿಂದ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಬಳಲುತ್ತಿದ್ದ.
ತಕ್ಷಣವೇ ರೋಗಿಯ ಕುತ್ತಿಗೆ ಭಾಗವನ್ನು ಪೂರ್ಣವಾಗಿ ಡ್ರೆಸ್ಸಿಂಗ್ ಮಾಡಿ ರಕ್ತಸ್ರಾವವನ್ನು ಹತೋಟಿಗೆ ತರಲಾಯಿತು. ನಂತರ ಸ್ಥಳೀಯರು ಮತ್ತು ಪೈಲೆಟ್ ಅಶೋಕ್ ಅವರ ನೆರವಿನಿಂದ ರೋಗಿಯನ್ನು 1ನೇ ಮಹಡಿಯಿಂದ ಸ್ಪೈನ್ ಬೋರ್ಡ್ ಮುಖಾಂತರ ಆಂಬ್ಯುಲೆನ್ಸ್ ಒಳಗೆ ಸ್ಥಳಾಂತರಿಸಲಾಯಿತು. ನಂತರ ಇಎಂಟಿ ಮಹೇಶ್ ಅವರು ರೋಗಿಗೆ ಐವಿ ಫ್ಲೂಯಿಡ್, ಎನ್.ಎಸ್. ಆಕ್ಸಿಜನ್ ಮತ್ತು ಗಾಯದ ಆರೈಕೆ ಮಾಡುತ್ತಾ ರೋಗಿಯ ರಕ್ತದೊತ್ತಡವನ್ನು ಪರೀಕ್ಷಿಸುತ್ತಾ ಆರೈಕೆ ಮಾಡಿದರು.
ಇದರ ಪರಿಣಾಮವಾಗಿ ರೋಗಿಯ ರಕ್ತಸ್ರಾವವು ಕಡಿಮೆಯಾಯಿತು. ನಂತರ ರೋಗಿಯು ಸ್ವಲ್ಪ ಪ್ರಜ್ಞಾವಸ್ಥೆ ಸ್ಥಿತಿಗೆ ಬಂದ. ನಂತರ ರೋಗಿಯನ್ನು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಸದ್ಯ ವ್ಯಕ್ತಿ ಮಾತನಾಡಲಾಗದ ಸ್ಥಿತಿನಲ್ಲಿರುವುದರಿಂದ ಆತ್ಮಹತ್ಯೆಗೆ ನಿಖರವಾದ ಮಾಹಿತಿ ತಿಳಿದು ಬಂದಿಲ್ಲ. ಕುಟುಂಬದವರು ಹೇಳುವ ಪ್ರಕಾರ ಕೌಟುಂಬಿಕ ಕಲಹ ಎನ್ನಲಾಗುತ್ತಿದೆ. ಈ ಕುರಿತು ಗದಗನ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.