ಗದಗ : ಸಿಎಂ ಬಿ ಎಸ್ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಬದಲಾವಣೆ ಮಾಡೋಕೆ ಸಾಧ್ಯವಿಲ್ಲ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
ಕೋವಿಡ್ ಸಮಯದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ರಾಜಕಾರಣದ ಮೂಲಕ ಹಿಂದುತ್ವಕ್ಕೆ ಬಲ ತುಂಬಬೇಕು ಎಂಬ ನನ್ನ ಪ್ರಯತ್ನಗಳು ಫಲಿಸಿಲ್ಲ. ಇವತ್ತಿನ ರಾಜಕಾರಣದಲ್ಲಿ ಭ್ರಷ್ಟರು, ದುಷ್ಟರು ಮತ್ತು ಲೂಟಿ ಕೋರರಿದ್ದಾರೆಯೇ ವಿನಃ, ನಮ್ಮಂತ ಪ್ರಾಮಾಣಿಕರು, ಹಿಂದೂವಾದಿಗಳು ಬೇಡವಾಗಿದ್ದಾರೆ.
ರಾಜಕಾರಣ ಸಂಪೂರ್ಣ ಕುಲಗೆಟ್ಟು ಹೋಗಿದೆ. ಹಾಗಾಗಿ ನಾನು ರಾಜಕಾರಣವನ್ನು ಅಪೇಕ್ಷಿಸುತ್ತಿಲ್ಲ. ಇಂಡೋ-ಚೀನಾ ಮಧ್ಯೆ ಯುದ್ಧ ನಡೆದ್ರೂ, ಭಾರತ ಸನ್ನದ್ಧವಾಗಿದೆ. ಚೀನಾಕ್ಕೆ ಬೆದರಿ ಓಡಿ ಹೋಗಲು, ನೆಹರು, ಸೋನಿಯಾ ಹಾಗೂ ರಾಹುಲ್ ಸರ್ಕಾರವಲ್ಲ. 56 ಇಂಚಿನ ನರೇಂದ್ರ ಮೋದಿ ಅವರ ಸರ್ಕಾರ, ಚೀನಾ ಕಾಲು ಕೆದರಿ ಬಂದರೆ ತಕ್ಕ ಪಾಠ ಕಲಿಸುತ್ತದೆ ಎಂದರು.