ಗದಗ: ಜಿಲ್ಲೆಯ ಮುಂಡರಗಿ ತಾಲೂಕಿನ ಮುಂಡವಾಡ ಗ್ರಾಮದಲ್ಲಿ ಮಳೆ-ಗಾಳಿಗೆ ಮಾವಿನ ಫಸಲು ನೆಲಕಚ್ಚಿದ್ದು, ರೈತ ಸಂಕಷ್ಟಕ್ಕೆ ಸಿಲುಕಿದ್ದಾನೆ.
ಮುಂಡವಾಡ ಗ್ರಾಮದ ರೈತ ರಮೇಶ ಕಳಕರೆಡ್ಡಿ ಎಂಬುವರ ಹೊಲದಲ್ಲಿ ನಿನ್ನೆ ರಾತ್ರಿ ಗಾಳಿ, ಆಲಿಕಲ್ಲು ಮಳೆಗೆ ಸುಮಾರು 2 ಟನ್ಗೂ ಅಧಿಕ ಮಾವು ನೆಲಕ್ಕುರುಳಿದೆ.
ಸಾಲ ಮಾಡಿ ಸುಮಾರು ಆರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮಾವಿನ ಬೆಳೆ ನಾಶವಾಗಿದೆ ಎಂದು ರೈತ ಅಳಲು ತೋಡಿಕೊಂಡಿದ್ದಾನೆ.