ಗದಗ : ನೀವು ಇಷ್ಟು ದಿನಗಳ ಕಾಲ ಎಲ್ಲಿಯೂ ನೋಡಿರದಂತಹ ಲಗ್ನ ಪತ್ರಿಕೆಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಹೌದು, ಲಗ್ನ ಪತ್ರಿಕೆಯಲ್ಲಿ ಮತದಾರನನ್ನು ಮಧುಮಗನನ್ನಾಗಿ ಪ್ರಜಾಪ್ರಭುತ್ವವನ್ನ ವಧುವನ್ನಾಗಿ ಮುದ್ರಿಸಲಾಗಿದೆ. ಇನ್ನು ಮತ ಚಲಾಯಿಸುವ ಮೂಲಕ ಇವರಿಗೆ ಆಶೀರ್ವದಿಸಬೇಕು ಅಂತಾ ಕೋರಿರುವ ಆಯೋಗ, ಮದುವೆಗೆ ಬಂದವರಿಗೆ ಹೆಂಡ, ಹಣ, ಉಡುಗೊರೆ ಸೇರಿದಂತೆ ಯಾವುದನ್ನು ನೀಡಲಾಗುವುದಿಲ್ಲ ಅನ್ನೋದನ್ನು ತಿಳಿಸಿದೆ. ವಿಶೇಷ ಅಂದ್ರೆ ಶೇ. ನೂರರಷ್ಟು ಮತದಾನ ಆಗಲೇಬೇಕು ಅನ್ನೋ ದೃಷ್ಠಿಯಿಂದ ಪ್ರಕಟಗೊಂಡಿರುವ ಈ ಲಗ್ನ ಪತ್ರಿಕೆ ಇದೀಗ ಗಮನ ಸೆಳೆಯುತ್ತಿದೆ. ಭಾರತೀಯ ಚುನಾವಣಾ ಆಯೋಗ ನಿಶ್ಚಯಿಸಿದಂತೆ ಈ ಲಗ್ನ ಪತ್ರಿಕೆಯನ್ನು ಮುದ್ರಿಸಲಾಗಿದೆ.