ETV Bharat / state

ತೋಳ ಹತ್ಯೆ ಮಾಡಿ ಬೈಕ್​ಗೆ ಕಟ್ಟಿ ಎಳೆದೊಯ್ದು ಗ್ರಾಮಸ್ಥರ ಅಮಾನವೀಯ ವರ್ತನೆ - Gadag latest news

ಜಮೀನಿನಲ್ಲಿ ತೋಳವೊಂದು ವ್ಯಕ್ತಿಯ ಮೇಲೆ ದಾಳಿ ಮಾಡಿದೆ. ಇದರಿಂದ ಬೆಚ್ಚಿದ ಜನರು ತೋಳವನ್ನು ಕೊಂದು ಅಮಾನುಷವಾಗಿ ಬೈಕ್​ಗೆ ಕಟ್ಟಿ ಎಳೆದುಕೊಂಡು ಹೋಗಿ ಬಿಸಾಡಿ ಬಂದಿದ್ದಾರೆ.

villagers-brutally-killed-wolf-in-gadag
ತೋಳ ಹತ್ಯೆ ಮಾಡಿ ಬೈಕ್​ಗೆ ಕಟ್ಟಿ ಎಳೆದೊಯ್ದು ಗ್ರಾಮಸ್ಥರ ಅಮಾನವೀಯ ವರ್ತನೆ
author img

By

Published : Oct 17, 2021, 1:31 PM IST

Updated : Oct 20, 2021, 3:41 PM IST

ಗದಗ: ತೋಳ ಹತ್ಯೆ ಮಾಡಿ ಬೈಕ್​ಗೆ ಕಟ್ಟಿ ಎಳೆದೊಯ್ದಿರುವ ಅಮಾನುಷ ಘಟನೆ ಶಿರಹಟ್ಟಿ ತಾಲೂಕಿನ ಸೋಗಿಹಾಳ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ತೋಳದಿಂದ ದಾಳಿಗೊಳಗಾದ ವ್ಯಕ್ತಿ
ತೋಳದಿಂದ ದಾಳಿಗೊಳಗಾದ ವ್ಯಕ್ತಿ

ಶಿವರಾಜ್ ಕುಮಾರ್ ಎಂಬಾತನ ಮೇಲೆ ತೋಳ ದಾಳಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ತೋಳದ ಮೇಲೆ ದಾಳಿ ಮಾಡಿ ದೊಣ್ಣೆ ಮತ್ತು ಕಲ್ಲುಗಳಿಂದ ಹತ್ಯೆ ಮಾಡಿದ್ದಾರೆ. ಬಳಿಕ ಅದನ್ನು ಬೈಕ್​ಗೆ ಕಟ್ಟಿ ಎಳೆದೊಯ್ದು, ಕಪ್ಪತ್ತಗುಡ್ಡದ ಅಂಚಿನಲ್ಲಿ ಬಿಸಾಕಿ ಬಂದಿದ್ದಾರೆ. ಗಾಯಾಳು ಶಿವರಾಜ್ ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ತೋಳ ಹತ್ಯೆ ಮಾಡಿ ಬೈಕ್​ಗೆ ಕಟ್ಟಿ ಎಳೆದೊಯ್ದು ಗ್ರಾಮಸ್ಥರ ಅಮಾನವೀಯ ವರ್ತನೆ

ನಿನ್ನೆ ಸಂಜೆಯ ವೇಳೆಗೆ ಹೊಲದಲ್ಲಿ ಆತನ ಮೇಲೆ ತೋಳ ಮಾಡಿ ಸಿಕ್ಕಸಿಕ್ಕಲ್ಲಿ ಕಚ್ಚಿದೆ. ಅದೃಷ್ಟವಶಾತ್ ಅದೇ ಸಮಯದಲ್ಲಿ ಅಕ್ಕಪಕ್ಕದ ರೈತರು ಅದರಿಂದ ಆತನನ್ನು ಬಚಾವ್ ಮಾಡಿದ್ದಾರೆ. ತೋಳ ಕೊಂದವರ ಪತ್ತೆಗಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಶೋಧ ನಡೆಸುತ್ತಿದ್ದಾರೆ.

Last Updated : Oct 20, 2021, 3:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.