ETV Bharat / state

ಗದಗ: ನಿಡಗುಂದಿಯಲ್ಲಿ ಬಿಎಂಟಿಸಿ ನೌಕರ ಆತ್ಮಹತ್ಯೆ - ಬಿಎಂಟಿಸಿ ನೌಕರ ಆತ್ಮಹತ್ಯೆ

ಗದಗದ ನಿಡಗುಂದಿಯಲ್ಲಿ ಸಾರಿಗೆ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

Transport worker Committed suicide at Gadag
ನಿಡಗುಂದಿಯಲ್ಲಿ ಸಾರಿಗೆ ನೌಕರ ಆತ್ಮಹತ್ಯೆ
author img

By

Published : Apr 14, 2021, 7:46 PM IST

ಗದಗ: ಸಾರಿಗೆ ನೌಕರ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನಿಡಗುಂದ ಗ್ರಾಮದಲ್ಲಿ ನಡೆದಿದೆ.

ಟಿಪ್ಪು ಸುಲ್ತಾನ್ ಅಲ್ಲಾಸಾಬ್ ತಾಳಕೇರಿ (42) ಮೃತ ನೌಕರ. ಕಳೆದ 15 ವರ್ಷಗಳಿಂದ ಬಿಎಂಟಿಸಿಯಲ್ಲಿ ಚಾಲಕ ಕಂ. ನಿರ್ವಾಹಕನಾಗಿ ಕಾರ್ಯನಿರ್ವಹಿಸುತ್ತಿದ್ದ. ವಾರದ ಹಿಂದೆ ಸ್ವಗ್ರಾಮ ನಿಡಗುಂದಿಗೆ ಬಂದಿದ್ದ ಈತ ಇಂದು ಸಾವಿಗೆ ಶರಣಾಗಿದ್ದಾನೆ.

ಓದಿ : 12 ರೂಪಾಯಿ ಸಿಗರೇಟ್​​​​ ದುಡ್ಡು ಕೊಟ್ಟು ಜೋಡಿ ಕೊಲೆಗೆ ಸ್ಕೆಚ್​... ಹಣದಾಸೆಗೆ ಬಿದ್ದು ಡಬಲ್​​​ ಮರ್ಡರ್​​​!

ಕುಟುಂಬ ಹಾಗೂ ಮನೆ ನಿರ್ವಹಣೆಗಾಗಿ ಸುಮಾರು 8ರಿಂದ 10 ಲಕ್ಷ ರೂಪಾಯಿ ಸಾಲ ಮಾಡಿದ್ದ ಮೃತ ಅಲ್ಲಾಸಾಬ್, ಕಡಿಮೆ ಸಂಬಳದಿಂದ ಸಾಲ ತೀರಿಸಲು ಕಷ್ಟವಾಗುತ್ತಿದೆ. ಹಗಲು ರಾತ್ರಿ ಎನ್ನದೆ ಕಡಿಮೆ ಸಂಬಳಕ್ಕೆ ದೂರದ ಬಿಎಂಟಿಸಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ಮುಷ್ಕರದ ನಡುವೆ ಕೆಲಸಕ್ಕೆ ಹಾಜರಾಗುವಂತೆ ಫೋನ್ ಮಾಡುತ್ತಿದ್ದಾರೆ ಎಂದು ಹೇಳುತ್ತಿದ್ದ ಎಂದು ಮೃತನ ಕುಟುಂಬಸ್ಥರು ಹೇಳಿದ್ದಾರೆ. ಈ ಕುರಿತು ನರೇಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.