ETV Bharat / state

ಲಿಂಗಾಯತರು ಒಟ್ಟಾದರೆ ಸರ್ಕಾರ ಬಿದ್ದು ಹೋಗುವ ಸಂದರ್ಭ ಬರಬಹುದು: ತೋಂಟದಾರ್ಯ ಶ್ರೀ - gadag matt

ಸಮಾಜದ ಎಲ್ಲಾ ಶಾಸಕರು ಪಕ್ಷಭೇದ ಮರೆತು ರಾಜೀನಾಮೆಗೆ ತಯಾರಾದರೆ ಮೀಸಲಾತಿ ಅನಿವಾರ್ಯವಾಗಿ ಕೊಡಲೇಬೇಕಾಗುತ್ತದೆ. ನಾಯಕತ್ವ ಬದಲಾವಣೆಗೆ ಸಾಕಷ್ಟು ಕಾರಣಗಳಿರುತ್ತವೆ. ಮುಂದೊಂದು ದಿನ ಮೀಸಲಾತಿ ವಿಷಯವೂ ಕೂಡ ನಾಯಕತ್ವ‌ ಬದಲಾವಣೆಗೆ ಕಾರಣವಾಗಬಹುದು ಎಂದು ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.

ತೋಂಟದಾರ್ಯ ಶ್ರೀ
ತೋಂಟದಾರ್ಯ ಶ್ರೀ
author img

By

Published : Feb 5, 2021, 6:38 PM IST

Updated : Feb 5, 2021, 7:09 PM IST

ಗದಗ: ಪಂಚಮಸಾಲಿ 2ಎ ಮೀಸಲಾತಿ ಹೋರಾಟ ಕುರಿತು ಗದಗನಲ್ಲಿ ಲಿಂಗಾಯತ ಸಮಾಜದ ತೋಂಟದಾರ್ಯ ಸಿದ್ದರಾಮ ಮಹಾಸ್ವಾಮೀಜಿ ಬೆಂಬಲ ಸೂಚಿಸಿದ್ದಾರೆ. ಮೀಸಲಾತಿ ವಿಷಯವೂ ಕೂಡ ನಾಯಕತ್ವ‌ ಬದಲಾವಣೆಗೆ ಕಾರಣವಾಗಬಹುದು. ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಕಲ್ಪಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದಿದ್ದಾರೆ.

ಲಿಂಗಾಯತರು ಒಟ್ಟಾದರೆ ಸರ್ಕಾರ ಬಿದ್ದು ಹೋಗುವ ಸಂದರ್ಭ ಬರಬಹುದು: ತೋಂಟದಾರ್ಯ ಶ್ರೀ

ಮೀಸಲಾತಿಗಾಗಿ ಹೋರಾಟ ಇಂದು ನಿನ್ನೆಯದಲ್ಲ, ಹಲವು ದಶಕಗಳ ಹೋರಾಟ ಇದಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಬಗ್ಗೆ ಮೀನಮೇಷ ಎಣಿಸಬಾರದು. ಕಾಲಹರಣ ಮಾಡದೇ ಬೇಗನೆ ತೀರ್ಮಾನ ತೆಗೆದುಕೊಳ್ಳಬೇಕು. ಇಲ್ಲವಾದರೆ ಸಮುದಾಯದವರು ರೊಚ್ಚಿಗೇಳುತ್ತಾರೆ. ಸಾರ್ವಜನಿಕ‌ ಆಸ್ತಿ - ಪಾಸ್ತಿಗಳು ಹಾನಿಯಾಗಬಹುದು, ಅಂತಹ ಘಟನೆಗಳಿಗೆ ಸರ್ಕಾರ ಹೊಣೆಯಾಗಬಾರದು ಎಂದಿದ್ದಾರೆ.

ಇನ್ನು ಮೀಸಲಾತಿ ಪಡೆಯುವುದು ಅವರ ಹಕ್ಕು, ಅದೇನು ಭಿಕ್ಷೆಯಲ್ಲ. ಇದು ಮುಂದಿನ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಲುಬಹುದು. ಸಮುದಾಯ ಒಟ್ಟಾಗಿ ಕೆಲಸ ಮಾಡಿದರೆ ಸರ್ಕಾರ ಬಿದ್ದು ಹೋಗುವ ಸಂದರ್ಭ ಬರಬಹುದು ಎಂದು ಆಕ್ರೋಶ ಹೊರಹಾಕಿದ್ದಾರೆ.

ಸಮಾಜದ ಎಲ್ಲ ಶಾಸಕರು ಪಕ್ಷಭೇದ ಮರೆತು ರಾಜೀನಾಮೆಗೆ ತಯಾರಾದರೆ ಮೀಸಲಾತಿ ಅನಿವಾರ್ಯವಾಗಿ ಕೊಡಲೇಬೇಕಾಗುತ್ತದೆ. ನಾಯಕತ್ವ ಬದಲಾವಣೆಗೆ ಸಾಕಷ್ಟು ಕಾರಣಗಳಿರುತ್ತವೆ. ಮುಂದೊಂದು ದಿನ ಮೀಸಲಾತಿ ವಿಷಯವೂ ಕೂಡ ನಾಯಕತ್ವ‌ ಬದಲಾವಣೆಗೆ ಕಾರಣವಾಗಬಹುದು ಎಂದು ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದರು.

ಇದನ್ನೂ ಓದಿ: ಪಂಚಮಸಾಲಿ ಮೀಸಲಾತಿ: ಯತ್ನಾಳ್ ಬೇಡಿಕೆಗೆ ಸಿಎಂ 'ಡೋಂಟ್​ ಕೇರ್'

Last Updated : Feb 5, 2021, 7:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.