ETV Bharat / state

ಪ್ಲಾಸ್ಟಿಕ್ ಬಂದ್ ಮಾಡೋಕಂತು ಅಗಲ್ಲಾ ಅಂತ ಈ ರೈತ ಮಾಡಿದ ಐಡಿಯಾ ಏನ್​ ಗೊತ್ತಾ..? - gadaga farmer idea to ban plastic

ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಿ, ಪರಿಸರ ಉಳಿಸಿ ಅಂತ ಬರಿ ಭಾಷಣದಲ್ಲಿ ಹೇಳಿದ್ದು ಆಯಿತು. ಆದರೆ ಯಾರೊಬ್ಬರು ಅದನ್ನ ಕಾರ್ಯರೂಪಕ್ಕೆ ತರೋ ಪ್ರಯತ್ನ ಮಾತ್ರ ಮಾಡಿಲ್ಲ. ಆದರೆ, ಇಲ್ಲೊಬ್ಬ ರೈತ ಪರಿಸರಕ್ಕೆ ಮಾರಕವಾಗಿರೋ ಅದೇ ಪ್ಲಾಸ್ಟಿಕ್​​ನ್ನು ಬಳಕೆ ಮಾಡಿ, ಅದರಲ್ಲೇ ಹಸಿರು ಗಿಡಗಳು ಜನ್ಮ ತಾಳುವಂತೆ ಮಾಡಿದ್ದಾನೆ.

ರೈತ ವಿರೇಶ ಶಂಕರಪ್ಪ ನೇಗಲಿ
author img

By

Published : Oct 20, 2019, 8:45 PM IST

ಗದಗ: ಜಿಲ್ಲೆಯ ರೋಣ ತಾಲೂಕಿನ ಕೊಟುಮುಚಗಿ ಗ್ರಾಮದ ರೈತ ವಿರೇಶ ಶಂಕರಪ್ಪ ನೇಗಲಿ ಪ್ಲಾಸ್ಟಿಕ್​ ವಿರುದ್ಧ ಸಮರ ಸಾರಿದ್ದಾರೆ. ಇವರು ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್​​ ಚೀಲಗಳನ್ನು ಸಂಗ್ರಹಿಸಿ, ಅದರಿಂದ ತಮ್ಮ ಮನೆಯಲ್ಲಿ ಕೈತೋಟ ನಿರ್ಮಾಣ ಮಾಡಿದ್ದಾರೆ.

ಕಿರಾಣಿ ಅಂಗಡಿಗಳಲ್ಲಿ ಖಾಲಿಯಾದ ಪಾನ್ ಮಸಾಲ, ಗುಟ್ಕಾ ಮತ್ತಿತರ ವಸ್ತುಗಳ ಪ್ಲಾಸ್ಟಿಕ್ ಚೀಲ, ಪೊಟ್ಟಣ ಸೇರಿದಂತೆ ಜನರು ಬಳಸಿ ಎಸೆಯೋ ತಂಪು ಪಾನೀಯಗಳ ಬಾಟಲಿಗಳನ್ನು ಹುಡುಕಿ ತರೋ ಇವರು ಅವುಗಳನ್ನೇ ಮರುಬಳಕೆ ಮಾಡಿ ಪರಿಸರ ಸ್ನೇಹಿ ಅಸ್ತ್ರವನ್ನಾಗಿ ಬಳಸುತ್ತಿದ್ದಾರೆ. ವಿರೇಶ ಅವರು ಸ್ವಂತ ಆರು ಎಕರೆ ಜಮೀನು ಹೊಂದಿದ್ದು ಕೃಷಿ ಕಾಯಕದ ಬಿಡುವಿನ ವೇಳೆಯಲ್ಲಿ ಈ ವಿಶಿಷ್ಠ ಜಾಗೃತಿ ಮೂಡಿಸ್ತಿದಾರೆ.

ರೈತ ವಿರೇಶ ಶಂಕರಪ್ಪ ನೇಗಲಿ

ಇನ್ನು ಕೊಟುಮುಚಗಿ ಗ್ರಾಮ ಹಾಗೂ ಪಕ್ಕದ ನರೇಗಲ್ ಪಟ್ಟಣದಲ್ಲಿ ಇರುವ ಎಲ್ಲಾ ಕಿರಾಣಿ ಅಂಗಡಿ, ತಂಪು ಪಾನೀಯ ಮಾಲೀಕರಿಗೆ‌ ಮನವಿ ಮಾಡಿಕೊಳ್ಳುವ ರೈತ, ಅವರ ಅಂಗಡಿಗಳ ಮುಂದೆ ‌ಒಂದೊಂದು ಖಾಲಿ ಚೀಲ ಇಟ್ಟು ಬಂದಿರುತ್ತಾರೆ. ಅಂಗಡಿ ಮಾಲೀಕರಿಗೆ ನಿಮ್ಮಲ್ಲಿರುವ ಖಾಲಿ ಬಾಟಲಿಗಳಾಗಲಿ ಅಥವಾ ಪ್ಲಾಸ್ಟಿಕ್ ಚೀಲಗಳನ್ನಾಗಲಿ ಎಲ್ಲೆಂದರಲ್ಲಿ ಎಸೆಯದೇ ಈ ಡಬ್ಬದಲ್ಲಿ ಹಾಕಿರಿ ಎಂದು ಮನವಿ ಮಾಡಿ ಬರುತ್ತಾರೆ. ಆ ಪ್ರಕಾರ ಮಾಲೀಕರು ಬಳಕೆಯಾದ ಪ್ಲಾಸ್ಟಿಕ್ ವಸ್ತುಗಳನ್ನು ಅದರಲ್ಲಿ ಸಂಗ್ರಹಿಸಿ ಇಟ್ಟಿರುತ್ತಾರೆ.

ತದನಂತರದ ಆ ಎಲ್ಲ ಚೀಲಗಳನ್ನು ಸಂಗ್ರಹಿಸಿ ತಮ್ಮ ಮನೆಗೆ ತಂದು, ಚೀಲಗಳಲ್ಲಿ ಮಣ್ಣಿನ ಜೊತೆಗೆ ಸಾವಯವ ಗೊಬ್ಬರವನ್ನ ಹಾಕುವ ಮೂಲಕ ಹಲವು ತರಹದ ಕಾಯಿಪಲ್ಯ ಗಿಡಗಳನ್ನು ಬೆಳೆಯುತ್ತಿದ್ದಾರೆ.

ಇ‌ನ್ನು ಅದೇ ಪ್ಲಾಸ್ಟಿಕ್ ಬಾಟಲಿಗಳ ಮೂಲಕ ಸಸಿಗಳಿಗೆ ಹನಿ ನೀರಾವರಿ ಪದ್ಧತಿಯನ್ನೂ ಸಹ ಅಳವಡಿಸಿಕೊಂಡಿದ್ದಾರೆ. ಈ ರೀತಿ ಪ್ಲಾಸ್ಟಿಕ್ ಚೀಲದಲ್ಲಿ‌ ಬೆಳೆದು ನಿಂತಿರುವ ಸಸಿಗಳನ್ನು ಮದುವೆ‌ ಹಾಗೂ ಇನ್ನಿತರೆ ಸಮಾರಂಭಗಳಲ್ಲಿ ಅತಿಥಿಗಳಿಗೆ ಉಡುಗೊರೆಯಾಗಿ ನೀಡುವ ಮೂಲಕ ರೈತ ವಿರೇಶ ಪರಿಸರ ಕುರಿತು ವಿಶಿಷ್ಟವಾಗಿ ಜಾಗೃತಿ ಮೂಡಿಸುತ್ತಿದ್ದಾರೆ.

Intro:ಆ್ಯಂಕರ್- ಪ್ಲಾಸ್ಟಿಕ್‌ ಬಳಕೆ ಕಡಿಮೆ ಮಾಡಿ ಪರಿಸರ ಉಳಿಸಿ ಅಂತ ಬರಿ ಭಾಷಣದಲ್ಲಿ ಹೇಳಿದ್ದು ಆಯಿತು. ಆದರೆ ಯಾರೊಬ್ಬರು ಅದನ್ನ ಕಾರ್ಯರೂಪಕ್ಕೆ ತರೋ ಪ್ರಯತ್ನ ಮಾಡಲ್ಲ. ಆದರೆ ಇಲ್ಲೊಬ್ಬ ರೈತ ಪರಿಸರಕ್ಕೆ ಮಾರಕವಾಗಿರೋ ಅದೇ ಪ್ಲಾಸ್ಟಿಕ್ ಅನ್ನು ಬಳಕೆ ಮಾಡಿ ಅದರಲ್ಲೇ ಹಸಿರು ಗಿಡಗಳು ಜನ್ಮ ತಾಳುವಂತೆ ಮಾಡ್ತಿದಾರೆ.

ಹೌದು ಹೀಗೆ ಪ್ರತಿ ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್‌ ಚೀಲಗಳನ್ನು ಸಂಗ್ರಹಿಸಿ ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿರೋ ಈ ವ್ಯಕ್ತಿ ಗದಗ ಜಿಲ್ಲೆ ರೋಣ ತಾಲೂಕಿನ ಕೊಟುಮುಚಗಿ ಗ್ರಾಮದ ಸಾವಯವ ರೈತ ವಿರೇಶ ಶಂಕರಪ್ಪ ನೇಗಲಿ.‌ ಹೀಗೆ ನಿರೂಪ ಯುಕ್ತ ಪ್ಲಾಸ್ಟಿಕ್‌ ಚೀಲಗಳನ್ನು ಕಲೆ ಹಾಕಿ ಅದರಿಂದಲೇ ಶೂನ್ಯ ಬಂಡವಾಳದ ಮೂಲಕ ತಮ್ಮ ಮನೆಯಲ್ಲಿ ಸುಂದರ‌ ಕೈತೋಟ ನಿರ್ಮಾಣ ಮಾಡುತ್ತಿದ್ದಾರೆ.ಈ ಮೂಲಕ‌ ಪರಿಸರಕ್ಕೆ ಮಾರಕವಾಗಿ ಇರೋ ಪ್ಲಾಸ್ಟಿಕ್ ವಿರುದ್ಧ ಇಲ್ಲಿನ ರೈತ ಸದ್ದಿಲ್ಲದೆ ಸಮರ ಸಾರಿದ್ದಾರೆ. ಕಿರಾಣಿ ಅಂಗಡಿಗಳಲ್ಲಿನ ಖಾಲಿಯಾದ ಪಾನ್ ಮಸಾಲ, ಗುಟ್ಕಾ ಮತ್ತಿತರ ವಸ್ತುಗಳ ಪ್ಲಾಸ್ಟಿಕ್ ಚೀಲ ಪೊಟ್ಟಣ ಸೇರಿದಂತೆ ಜನರು ಬಳಸಿ ಎಸೆಯೋ ತಂಪು ಪಾನೀಯಗಳ ಬಾಟಲಿಗಳನ್ನು ಹುಡುಕಿ ತರೋ ಇವರು ಅವುಗಳನ್ನೇ ಮರುಬಳಕೆ ಮಾಡಿ ಪರಿಸರ ಸ್ನೇಹಿ ಅಸ್ತ್ರ ವನ್ನಾಗಿ ಬಳಸುತ್ತಿದ್ದಾರೆ. ವಿರೇಶ ಅವರು ಸ್ವಂತ ಆರು ಎಕರೆ ಜಮೀನು ಹೊಂದಿದ್ದು ಕೃಷಿ ಕಾಯಕದ ಬಿಡುವಿನ ವೇಳೆಯಲ್ಲಿ ಈ ವಿಶಿಷ್ಠ ಜಾಗೃತಿ ಮೂಡಿಸ್ತಿದಾರೆ. ಪ್ಲಾಸ್ಟಿಕ್ ಚೀಲಗಳನ್ನು ಎಲ್ಲೆಂದರಲ್ಲಿ ಬೀಸಾಕಿದರೆ ಅವುಗಳು ಭೂಮಿಯಲ್ಲಿ ಬೆಗನೇ ಕೊಳೆಯೋದಿಲ್ಲ.ಅಲ್ಲದೇ ಪ್ಲಾಸ್ಟಿಕ್ ಬಾಟಲಿಗಳನ್ನು ಉಪಯೋಗಿಸಿದ‌ ನಂತರ ಎಲ್ಲೆಂದರಲ್ಲಿ ಎಸೆಯುತ್ತೇವೆ.ಇದರಿಂದ ಪರಿಸರ ಹಾಳಾಗುತ್ತದೆ ಅಂತಾರೆ ರೈತ ವಿರೇಶ ನೆಗಲಿ..

ಬೈಟ್-೦೧: ವಿರೇಶ ನೇಗಲಿ.ರೈತ

ಇನ್ನು ಕೊಟುಮುಚಗಿ ಗ್ರಾಮ ಹಾಗೂ ಪಕ್ಕದ ನರೇಗಲ್ ಪಟ್ಟಣದಲ್ಲಿ ಇರುವ ಎಲ್ಲಾ ಕಿರಾಣಿ ಅಂಗಡಿ ಹಾಗೂ ತಂಪು ಪಾನೀಯ ಮಾಲಿಕರಿಗೆ‌ ಮನವಿ ಮಾಡಿಕೊಳ್ಳುವ ರೈತ ಅವರ ಅಂಗಡಿಗಳ ಮುಂದೆ ‌ಒಂದೊಂದು ಖಾಲಿ ಚೀಲ ಇಟ್ಟು ಬಂದಿರುತ್ತಾರೆ. ಅಂಗಡಿ ಮಾಲಿಕರಿಗೆ ನಿಮ್ಮಲ್ಲಿರುವ ಖಾಲಿ ಬಾಟಲಿಗಳಾಗಲಿ ಅಥವಾ ಪ್ಲಾಸ್ಟಿಕ್ ಖಾಲಿ ಚೀಲಗಳನ್ನಾಗಲಿ ಎಲ್ಲೆಂದರಲ್ಲಿ ಎಸೆಯದೇ ಈ ಡಬ್ಬದಲ್ಲಿ ಹಾಕಿರಿ ಎಂದು ಮನವಿ ಮಾಡಿ ಬಂದಿರುತ್ತಾರೆ. ಆ ಪ್ರಕಾರ ಮಾಲಿಕರು ಬಳಕೆಯಾದ ಪ್ಲಾಸ್ಟಿಕ್ ವಸ್ತುಗಳನ್ನು ಅದರಲ್ಲಿ ಸಂಗ್ರಹಿಸಿ ಇಟ್ಟಿರುತ್ತಾರೆ. ತದನಂತರದ ಬೆಳಿಗ್ಗೆಯೇ ಆ ಎಲ್ಲ ಚೀಲಗಳನ್ನು ಕಲೆಕ್ಟ ಮಾಡಿಕೊಂಡು ತಮ್ಮ ಮನೆಗೆ ತಂದು ಈ ಸಸಿಗಳು ಬೆಳೆಯುವಂತೆ ಸಿದ್ಧಪಡಿಸಿಕೊಳ್ಳುತ್ತಾರೆ. ಚೀಲಗಳಲ್ಲಿ ಮಣ್ಣಿನ ಜೊತೆಗೆ ಸಾವಯವ ಗೊಬ್ಬರವನ್ನೂ ಸಹ ಹಾಕುವ ಮೂಲಕ ಹಲವು ತರಹದ ಕಾಯಿಪಲ್ಯ ಗಿಡಗಳನ್ನು ಬೆಳೆಯುತ್ತಿದ್ದಾರೆ.ಇ‌ನ್ನು ಅದೇ ಪ್ಲಾಸ್ಟಿಕ್ ಬಾಟಲಿಗಳ ಮೂಲಕ ಸಸಿಗಳಿಗೆ ಹನಿ ನೀರು ಮೂಲಕ ಹನಿ ನೀರಾವರಿ ಪದ್ಧತಿಯನ್ನೂ ಸಹ ಅಳವಡಿಸಿಕೊಂಡಿದ್ದಾರೆ. ಈ ರೀತಿ ಪ್ಲಾಸ್ಟಿಕ್ ಚೀಲದಲ್ಲಿ‌ ಬೆಳೆದು ನಿಂತಿರುವ ಸಸಿ ಗಳನ್ನು ಮದುವೆ‌ ಹಾಗೂ ಇನ್ನಿತರೆ ಸಮಾರಂಭ ಗಳಲ್ಲಿ ಬಂದಿರುವ ಅತಿಥಿಗಳಿಗೆ ಉಡುಗೊರೆಯಾಗಿ ನೀಡುವ ಮೂಲಕ ರೈತ ವಿರೇಶ ಪರಿಸರ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ಈ ಜಾಗೃತಿಗೆ ಕಿರಾಣಿ ಅಂಗಡಿಗಳ ವ್ಯಾಪಾರಸ್ಥರು ಸಹ ಸಹಕಾರ ನೀಡುತ್ತಿದ್ದು ವಿರೇಶ ಅವರ ಕಾರ್ಯ ಪರಿಸರಕ್ಕಷ್ಟೇ ಅಲ್ಲದೇ ನಮ್ಮ ಅಂಗಡಿಗಳ ಮುಂದೆ ಸ್ವಚ್ಛತಾ‌ ಅಭಿಯಾನವನ್ನು ಸಹ‌ ಸಾದರ ಪಡಿಸುತ್ತಿದೆ‌ ಅಂತಾರೆ.

ಬೈಟ್-೦೨: ಮಲ್ಲಪ್ಪ. ಕಿರಾಣಿ ಅಂಗಡಿ ಮಾಲಿಕರು

ಅದೇನೇ ಇರಲಿ ಪ್ಲಾಸ್ಟಿಕ್ ಅನ್ನೊ ವಸ್ತು ಭೂಮಿ ಮೇಲೆ ಬೇಗ ಕರಗೋದಿಲ್ಲ ಅದು ಪರಿಸರಕ್ಕೆ ಹಾನಿಕರ ಅಂತ ಗೊತ್ತಿದ್ರು ತಿಳುವಳಿಕೆ ಇದ್ದ ಜನರು ಪ್ಲಾಸ್ಟಿಕ್‌ ನ್ನು ಎಲ್ಲೆಂದರಲ್ಲಿ ಎಸೆದು ನೈಸರ್ಗಿಕ ಸರ್ವನಾಶ ಕ್ಕೆ ಮುಂದಾಗ್ತಾರೆ. ಆದರೆ ಈ ಬಡಪಾಯಿ ರೈತ ಮಾತ್ರ ಅದೇ ಪ್ಲಾಸ್ಟಿಕ್‌ ಅನ್ನು ತನ್ನ ಅಸ್ತ್ರವಾಗಿಸಿಕೊಂಡು ಪ್ಲಾಸ್ಟಿಕ್ ವಿರುದ್ಧ ಸಮರ‌ ಸಾರೋ‌ ಮೂಲಕ ಪರಿಸರ ಪ್ರೇಮಿಗಳಿಂದ ಸೈ‌ ಎನಿಸಿಕೊಂಡಿದಾನೆ...Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.