ETV Bharat / state

ಪುರಾತನ ಕೆರೆ ಹೂಳೆತ್ತುತ್ತಿರುವ ಗ್ರಾಮಸ್ಥರು.. ಸರ್ವೇ ಮಾಡದಿದ್ರೂ ಅಧಿಕಾರಿಗಳಿಂದ ಸುಳ್ಳು ಮಾಹಿತಿ - undefined

ಗದಗ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ 87 ಎಕರೆ ವಿಸ್ತಾರವಾದ ಹಿರೇಕೆರೆ ಸೇರಿ 3 ಕೆರೆಗಳಿವೆ. ಸ್ಥಳೀಯರು ತಮ್ಮ ಸ್ವಂತ ಹಣದಲ್ಲೇ ಕೆರೆ ಹೂಳೆತ್ತುವ ಕೆಲಸ ಮಾಡ್ತಿದ್ದಾರೆ. ಕೆರೆ ಸರ್ವೇ ಮಾಡಿ ಹದ್ದನ್ನು ಗುರುತಿಸಿ ಕೊಡಿ ಅಂತಾ ಸ್ಥಳೀಯರು ಮನವಿ ಮಾಡಿದ್ರೂ ಜಿಲ್ಲಾಡಳಿತ ಮಾತ್ರ ಸ್ಪಂದಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ‌ ಕಾರಣವಾಗಿದೆ.

ಪುರಾತನ ಕೆರೆ ಹೂಳೆತ್ತುತ್ತಿರುವ ಗ್ರಾಮಸ್ಥರು
author img

By

Published : Jul 17, 2019, 8:19 PM IST

ಗದಗ: ಪಟ್ಟಣದ ಪುರಾತನ ಕೆರೆ ಹೂಳು ತುಂಬಿಕೊಂಡು ಅಂತರ್ಜಲ ಬತ್ತಿಹೋಗುತ್ತಿತ್ತು. ಇದನ್ನು ಮನಗಂಡ ಸ್ಥಳೀಯರು ತಮ್ಮ ಸ್ವಂತ ಹಣದಲ್ಲೇ ಕೆರೆಯ ಹೂಳೆತ್ತುವ ಕೆಲಸ ಕೈಗೊಂಡಿದ್ದಾರೆ. ಕೆರೆಯನ್ನು ಸರ್ವೇ ಮಾಡಿ ಹದ್ದನ್ನು ಗುರುತಿಸಿ ಕೊಡಿ ಅಂತಾ ಸ್ಥಳೀಯರು ಮನವಿ ಮಾಡಿದ್ರೂ ಜಿಲ್ಲಾಡಳಿತ ಮಾತ್ರ ಸ್ಪಂದಿಸದೇ ಸಾರ್ವಜನಿಕರ ಆಕ್ರೋಶಕ್ಕೆ‌ ಕಾರಣವಾಗಿದೆ.

ಪುರಾತನ ಕೆರೆ ಹೂಳೆತ್ತುತ್ತಿರುವ ಗ್ರಾಮಸ್ಥರು

ಗದಗ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ 87 ಎಕರೆ ವಿಸ್ತಾರವಾದ ಹಿರೇಕೆರೆ ಸೇರಿ 3ಕೆರೆಗಳಿವೆ. ಒಂದು ಕಾಲಕ್ಕೆ ಈ ಕೆರೆಗಳು ಇಡೀ‌ ನರೇಗಲ್ ಪಟ್ಟಣದ ನೀರಿನ‌ ಮೂಲವಾಗಿದ್ದವು. ಆದರೆ, ಕಾಲಕ್ರಮೇಣ ಈ ಕೆರೆಗಳು ಬತ್ತಿಹೋಗಿ, ಹೂಳು ತುಂಬಿವೆ. ಗ್ರಾಮದ ನೆಲ-ಜಲ ಸಂರಕ್ಷಣಾ ಸಮಿತಿ ಸದಸ್ಯರು ತಮ್ಮ ಸ್ವಂತ ಹಣದಲ್ಲಿ ಹೂಳೆತ್ತುವ ಕಾರ್ಯ ಮಾಡಿದ್ದಾರೆ. ಈವರೆಗೂ ಸುಮಾರು 29 ಎಕರೆಯಷ್ಟು ಕೆರೆ ಪ್ರದೇಶದಲ್ಲಿ ಹೂಳನ್ನು ತೆಗೆಯಲಾಗಿದೆ. ಆದರೆ, ಇದರ ಜೊತೆಗಿರುವ ಇನ್ನೆರಡು ಕೆರೆಗಳ ಹೂಳೆತ್ತೋಕೆ ಅವುಗಳ ಪ್ರದೇಶ ಎಲ್ಲಿಂದ ಎಲ್ಲಿಯವರೆಗಿದೆ ಅನ್ನೋ ಸಮಸ್ಯೆ ಎದುರಾಗಿದೆ. ಹೀಗಾಗಿ ಸಮಿತಿಯ ಸದಸ್ಯರು ಗದಗ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರನ್ನು ಭೇಟಿ ಮಾಡಿ ಸರ್ವೇ ಕಾರ್ಯ ಮಾಡಿಸುವಂತೆ ಕಳೆದ 3 ತಿಂಗಳ ಹಿಂದೆಯೇ ಮನವಿ ಮಾಡಿದ್ದಾರೆ. ಆದರೆ, ಅಂದಿನಿಂದ ಈವರೆಗೂ ಜಿಲ್ಲಾ ಭೂಮಾಪನ ಇಲಾಖೆಯ ಯಾವೊಬ್ಬ ಅಧಿಕಾರಿಯೂ‌ ಇತ್ತ ಸುಳಿದಿಲ್ಲ.‌

ಯಾವಾಗ ಸ್ಥಳೀಯರು ಕೆರೆ ಹೂಳೆತ್ತುವ ಕಾಮಗಾರಿ ಆರಂಭ ಮಾಡಿದ್ರೋ, ಅಂದಿನಿಂದ ಸುತ್ತಮುತ್ತಲಿನ ರೈತರು ತಮ್ಮದೇ ಹಣದಲ್ಲಿ ಟ್ರ್ಯಾಕ್ಟರ್​ಗಳ ಮೂಲಕ ಹೂಳು ಮಣ್ಣನ್ನು ತೆಗೆದುಕೊಂಡು ಹೋಗಿದ್ದಾರೆ‌.‌ ಈ ಕಾರ್ಯದಿಂದ ಸರ್ಕಾರಕ್ಕೆ ಅಂದಾಜು ಮೂರು ಕೋಟಿಗೂ ಹೆಚ್ಚು ಹಣವನ್ನು ಜನರು ಉಳಿಸಿದ್ದಾರೆ. ಜನರ ಈ‌ ಕಾರ್ಯಕ್ಕೆ ನರೇಗಲ್​ನ ಅನ್ನದಾನೀಶ್ವರ ಸ್ವಾಮಿಗಳು ಸಹ ಕೈಜೋಡಿಸಿ ಸುಮಾರು 1 ಲಕ್ಷ ಹಣವನ್ನು ಕೆಲಸಕ್ಕಾಗಿ ನೀಡಿದ್ದಾರೆ.

ಆದರೆ, ಈಗ ಇರುವ 87 ಎಕರೆ ಪ್ರದೇಶದಲ್ಲಿ 29 ಎಕರೆ ಮಾತ್ರ ಹೂಳು ತೆಗೆಯಲಾಗಿದ್ದು, ಉಳಿದ ಕಾಮಗಾರಿಗೆ ಕೆರೆ ಸರ್ವೇ ಮಾಡೋದು ಅವಶ್ಯಕವಾಗಿದೆ. ಆದರೆ, ಗದಗ ಜಿಲ್ಲಾಡಳಿತ ಮಾತ್ರ ಇದಕ್ಕೆ‌ ಸಹಕರಿಸುತ್ತಿಲ್ಲ ಅನ್ನೋದು ಸಾರ್ವಜನಿಕರ ಆರೋಪ.‌

ಈ ಕುರಿತು ಜಿಲ್ಲಾ ಭೂಮಾಪನ ಇಲಾಖೆಯ ಉಪನಿರ್ದೇಶಕ ರವಿಕುಮಾರ್ ಅವರನ್ನು ಕೇಳಿದ್ರೆ, ಈಗಾಗ್ಲೇ ಸರ್ವೇ ಕಾರ್ಯ ಮುಗಿದಿದ್ದು, ವರದಿಗಾಗಿ ಕಾಯ್ತಿದ್ದೇವೆ. ನರೇಗಲ್ ಪಟ್ಟಣದ ಸರ್ವೇ ಕಾರ್ಯ ರೋಣ ವಿಭಾಗಕ್ಕೆ ಬರೋದ್ರಿಂದ ಅಲ್ಲಿನ ಅಧಿಕಾರಿಗಳು ಬಂದು ಸರ್ವೇ ಮಾಡಿದ್ದಾರೆ. ಆದರೆ, ಹೂಳೆತ್ತುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರೋ ನೆಲಜಲ ಸಂರಕ್ಷಣಾ ಸಮಿತಿಗೆ ಮಾತ್ರ ಸರ್ವೇ ಕಾರ್ಯದ ಕುರಿತು ಸ್ವಲ್ಪವೂ ಮಾಹಿತಿ ಇಲ್ಲ ಎಂದಿದ್ದಾರೆ.

Intro:

ಆಂಕರ್-ಅದು ಆ ಪಟ್ಟಣದ ಪುರಾತನ ಕೆರೆ. ಹೂಳು ತುಂಬಿ ಹಾಳಾಗಿದ್ದ ಕೆರೆಯಿಂದ ಅತರ್ಜಲವೇ ಬತ್ತಿತ್ತು. ಇದನ್ನು ಮನಗಂಡ ಅಲ್ಲಿನ ಕೆಲ ಸ್ಥಳೀಯರು ತಮ್ಮ ಸ್ವಂತ ಹಣದಲ್ಲೇ ಆ ಕೆರೆಯ ಹೂಳೆತ್ತಿ ಸೌಂದರ್ಯೀಕರಣ ಕೆಲಸ ಕೈಗೊಂಡಿದ್ದಾರೆ. ಆದ್ರೆ ಆ ಕೆರೆಯನ್ನು ಸರ್ವೇ ಮಾಡಿ ಹದ್ದನ್ನು ಗುರುತಿಸಿಕೊಡಿ ಅಂತ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ರೂ ಸಹ ಜಿಲ್ಲಾಡಳಿತ ಮಾತ್ರ ಇವರ ಮನವಿಗೆ ಸ್ಪಂದಿಸಿಲ್ಲ. ಇದೀಗ ಸಾರ್ವಜನಿಕರ ಆಕ್ರೋಶಕ್ಕೆ‌ ಕಾರಣವಾಗಿದೆ.

ಗದಗ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ. ಇಲ್ಲಿ ೮೭ ಎಕರೆ ವಿಸ್ತಾರವಾದ ಹಿರೇಕೆರೆ ಸೇರಿದಂತೆ ೩ ಕೆರೆಗಳಿವೆ. ಒಂದು ಕಾಲಕ್ಕೆ ಇಡೀ‌ ನರೇಗಲ್ ಪಟ್ಟಣದ ಅಂತರ್ಜಲ ಹಾಗೂ ನೀರಿನ‌ ಮೂಲವಾಗದ್ವು ಈ ಕೆರೆಗಳು. ಆದ್ರೆ ಕಾಲಕ್ರಮೇಣ ಈ ಕೆರೆಗಳು ಬತ್ತಿಹೋಗಿ, ಹೂಳು ತುಂಬಿಕೊಂಡಿತ್ತು. ಇದನ್ನು ಮನಗಂಡ ಆ ಗ್ರಾಮದ ನೆಲ ಜಲ ಸಂರಕ್ಷಣಾ ಸಮಿತಿ ಸದಸ್ಯರು ತಮ್ಮ ಸ್ವಂತ ಹಣದಲ್ಲಿ ಹೂಳೆತ್ತೋ ಕಾರ್ಯ ಮಾಡಿದ್ದಾರೆ. ಇದುವರೆಗೂ ಸುಮಾರು ೨೯ ಎಕರೆಯಷ್ಟು ಕೆರೆ ಪ್ರದೇಶದಲ್ಲಿ ಹೂಳನ್ನು ತೆಗೆಯಲಾಗಿದೆ. ಆದ್ರೆ ಇದರ ಜೊತೆಗಿರೋ ಇನ್ನೆರಡು ಕೆರೆಗಳ ಹೂಳೆತ್ತೋಕೆ, ಅವುಗಳ ಪ್ರದೇಶ ಎಲ್ಲೀವರೆಗಿದೆ ಎನ್ನೋ ಸಮಸ್ಯೆ ಎದುರಾಗಿದೆ. ಹೀಗಾಗಿ ಸಮಿತಿಯ ಸದಸ್ಯರು ಗದಗ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವ್ರನ್ನು ಭೇಟಿ ಮಾಡಿ ಸರ್ವೇ ಕಾರ್ಯ ಮಾಡಿಸುವಂತೆ ಕಳೆದ ೩ ತಿಂಗಳ ಹಿಂದೆಯೇ ಮನವಿ ಮಾಡಿದ್ದಾರೆ. ಆದ್ರೆ ಅಂದಿನಿಂದ ಇಂದಿನವರೆಗೂ ಜಿಲ್ಲಾ ಭೂಮಾಪನ ಇಲಾಖೆಯ ಯಾವೊಬ್ಬ ಅಧಿಕಾರಿಯೂ‌ ಇತ್ತ ಸುಳಿದಿಲ್ಲ.‌ ಇದೀಗ ಕೆರೆ ಹೂಳೆತ್ತೋ ಕಾರ್ಯಕ್ಕೆ ಅಡ್ಡಿಯಾಗಿದೆ.

ಯಾವಾಗ ಸ್ಥಳೀಯರು ಕೆರೆ ಹೂಳೆತ್ತೋ ಕಾಮಗಾರಿ ಆರಂಭ ಮಾಡಿದ್ರೋ, ಅಂದಿನಿಂದ ಸುತ್ತಮುತ್ತಲಿನ ರೈತರು ತಮ್ಮದೇ ಹಣದಲ್ಲಿ ಟ್ರ್ಯಾಕ್ಟರ್ ಗಳ ಮೂಲಕ ಹೂಳು ಮಣ್ಣನ್ನು ತೆಗೆದುಕೊಂಡು ಹೋಗಿದ್ದಾರೆ‌.‌ ಈ ಕಾರ್ಯದಿಂದ ಸರ್ಕಾರಕ್ಕೆ ಅಂದಾಜು ಮೂರು ಕೋಟಿಗೂ ಹೆಚ್ಚು ಹಣವನ್ನು ಜನ್ರು ಉಳಿಸಿದ್ದಾರೆ. ಜನರ ಈ‌ ಕಾರ್ಯಕ್ಕೆ ನರೇಗಲ್ ನ ಅನ್ನದಾನೀಶ್ವರ ಸ್ವಾಮಿಗಳು ಸಹ ಕೈಜೋಡಿಸಿ ಸುಮಾರು ೧ ಲಕ್ಷ ಹಣವನ್ನು ಕೆಲಸಕ್ಕಾಗಿ ನೀಡಿದ್ದಾರೆ. ಆದ್ರೆ ಈಗ ಇರುವ ೮೭ ಎಕರೆ ಪ್ರದೇಶದಲ್ಲಿ ೨೯ ಎಕರೆ ಮಾತ್ರ ಹೂಳು ತೆಗೆಯಲಾಗಿದ್ದು, ಉಳಿದ ಕಾಮಗಾರಿಗೆ ಕೆರೆ ಸರ್ವೇ ಮಾಡೋದು ಅವಶ್ಯಕವಾಗಿದೆ. ಆದ್ರೆ ಗದಗ ಜಿಲ್ಲಾಡಳಿತ ಮಾತ್ರ ಇದಕ್ಕೆ‌ ಸಹಕರಿಸ್ತಿಲ್ಲ ಎನ್ನೋದು ಜನ್ರ ಆರೋಪ.‌ ಇದೇ ವಿಚಾರವನ್ನು ಜಿಲ್ಲಾ ಭೂಮಾಪನ ಇಲಾಖೆಯ ಉಪನಿರ್ದೇಶಕ ರವಿಕುಮಾರ್ ಅವ್ರನ್ನು ಕೇಳಿದ್ರೆ, ಈಗಾಗ್ಲೇ ಸರ್ವೇ ಕಾರ್ಯ ಮುಗಿದಿದ್ದು, ವರದಿಗಾಗಿ ಕಾಯ್ತಿದ್ದೇವೆ ಅಂತಾರೆ.

ಬೈಟ್-ರವಿಕುಮಾರ್, ಉಪನಿರ್ದೇಶಕರು, ಭೂಮಾಪನ ಇಲಾಖೆ, ಗದಗ.

ನರೇಗಲ್ ಪಟ್ಟಣದ ಸರ್ವೇ ಕಾರ್ಯ ರೋಣ ವಿಭಾಗಕ್ಕೆ ಬರೋದ್ರಿಂದ ಅಲ್ಲಿನ ಅಧಿಕಾರಿಗಳು ಬಂದು ಸರ್ವೇ ಮಾಡಿದ್ದಾರೆ ಎನ್ನೋದು ರವಿಕುಮಾರ್ ಅವರ ಮಾತು. ಆದ್ರೆ ಹೂಳೆತ್ತೋ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರೋ ನೆಲಜಲ ಸಂರಕ್ಷಣಾ ಸಮಿತಿಗೆ ಮಾತ್ರ ಸರ್ವೇ ಕಾರ್ಯದ ಕಿಂಚಿತ್ ಮಾಹಿತಿಯೂ ಇಲ್ಲ. ಇದನ್ನೆಲ್ಲಾ ನೋಡ್ತಿದ್ರೆ, ಅಧಿಕಾರಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳೋಕೆ ಸುಳ್ಳು ಹೇಳ್ತಿದ್ದಾರೇನೋ ಎನ್ನೋ ಅನುಮಾನ ಕಾಡ್ತಿದೆ. ಒಟ್ನಲ್ಲಿ ಕೂಡ್ಲೇ ಹಿರೇಕೆರೆಯ ಸರ್ವೇ ಕಾರ್ಯ ಆರಂಭವಾಗಬೇಕಿದೆ.Body:ಗದಗConclusion:ಗದಗ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.