ETV Bharat / state

ಗದಗ: ಗೂಂಡಾ ಕಾಯ್ದೆಯಡಿ ಬಂಧಿಸಲು ಹೋದ ಪೊಲೀಸರಿಗೇ ಜೀವ ಬೆದರಿಕೆ ಹಾಕಿದ ಕಿರಾತಕರು - ETV Bharat kannada News

ಗಡಿಪಾರು ಆಗಿದ್ದ ಆರೋಪಿ - ಗೂಂಡಾ ಕಾಯ್ದೆಯಡಿ ಬಂಧಿಸಲು ಹೋದಾಗ ಪೊಲೀಸರಿಗೆ ಬೆದರಿಕೆ - ಗದಗ ಎಸ್​ಪಿ ಮಾಹಿತಿ

Accused Abdul Razak Aadura
ಆರೋಪಿ ಅಬ್ದುಲ್‌ ರಜಾಕ್​ ಆಡೂರ
author img

By

Published : Feb 2, 2023, 10:55 AM IST

Updated : Feb 2, 2023, 12:32 PM IST

ಗೂಂಡಾ ಕಾಯ್ದೆಯಡಿ ಬಂಧಿಸಲು ಹೋದ ಆರೋಪಿ ಪರಾರಿ

ಗದಗ : ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಗೂಂಡಾ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲು ತೆರಳಿದ್ದ ವೇಳೆ ಪೊಲೀಸರಿಗೆ ಹಲ್ಲೆಯೇ ಮಾಡಿ ಜೀವ ಬೆದರಿಕೆ ಹಾಕಿರುವ ಘಟನೆ ಜಿಲ್ಲೆಯ ಲಕ್ಷ್ಮೇಶ್ವರ ನಗರದಲ್ಲಿ ನಡೆದಿದೆ. ಈ ಘಟನೆ ಕುರಿತು ಮಾತನಾಡಿದ ಗದಗ ಜಿಲ್ಲೆಯ ಪೊಲೀಸ್​ ವರಿಷ್ಠಾಧಿಕಾರಿ(ಎಸ್​ಪಿ) ಬಿ ಎಸ್​ ನೇಮಗೌಡ ಅವರು, ಈ ಹಿಂದೆ ಹಲವಾರು ಪ್ರಕರಣದಲ್ಲಿ ಸಿಲುಕಿ ಜಿಲ್ಲೆಯಿಂದ ಗಡಿಪಾರು ಆಗಿದ್ದ ಆರೋಪಿ ಅಬ್ದುಲ್‌ ರಜಾಕ್​ ಆಡೂರ ಮರಳಿ ಮನೆಗೆ ಬಂಧಿಸಲು ನಮ್ಮ ತಂಡ ಆಗಮಿಸಿತ್ತು. ಆತನ ಮೇಲೆ ದೂರು ದಾಖಲು ಆಗಿದ್ದರಿಂದ ಗೂಂಡಾ ಕಾಯ್ದೆಯಡಿ ಆತನನ್ನು ಬಂಧಿಸುವಂತೆ ಜಿಲ್ಲಾಧಿಕಾರಿಗಳು ಜ.31 ರಂದು ಆದೇಶ ನೀಡಿದ್ದರು. ಇವರ ಆದೇಶದ ಮೇರೆಗೆ ಆತನನ್ನು ಬಂಧಿಸಲು ಎಸ್‌ಐ ಡಿ. ಪ್ರಕಾಶ್‌ ನೇತೃತ್ವದಲ್ಲಿನ ತಂಡ ಲಕ್ಷ್ಮೇಶ್ವರಕ್ಕೆ ತೆರಳಿತ್ತು.

ಈ ವೇಳೆ ತನ್ನನ್ನು ಬಂಧಿಸಲಿದ್ದಾರೆ ಎಂಬ ಸುದ್ದಿ ಗೊತ್ತಾಗುತ್ತಿದ್ದಂತೆ ಆರೋಪಿ ಸೇರಿದಂತೆ ಅವನ ಬೆಂಬಲಿಗರು ಪೊಲೀಸರ ಮೇಲೆ ಹಲ್ಲೆ ಮಾಡಿ, ಜೀವ ಬೆದರಿಕೆ ಹಾಕಿದ್ದು ಹಾಗೂ ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ ಪಡಿಸಿ ಪರಾರಿಯಾಗಿದ್ಧಾರೆ. ಈ ಘಟನೆ ಸೋಮವಾರ ರಾತ್ರಿ ಪಟ್ಟಣದ ಹೊಸ ಬಸ್‌ ನಿಲ್ದಾಣದ ಎದುರಿಗೆ ನಡೆದಿದೆ. ಈ ಬಗ್ಗೆ ಯಾರ ಉಆರು ಹಲ್ಲೆ ನಡೆಸಿದರು ಮತ್ತು ಆರೋಪಿ ಪರಾರಿಯಾಗಲು ಸಹಾಯ ಮಾಡಿದವರ ಮೇಲೆ ಮತ್ತೊಂದು ಪ್ರಕರಣ ದಾಖಲಿಸಿ ಕೊಂಡು ತನಿಖೆ ಶುರು ಮಾಡಿದ್ದೇವೆ ಎಂದು ಎಸ್ಪಿ ಬಿ ಎಸ್​ ನೇಮಗೌಡ ಅವರು ಹೇಳಿದರು.

ಗಡಿಪಾರು ಅವಧಿ ಮುಗಿದಿದ್ದರಿಂದ ಆರೋಪಿ ಅಬ್ದುಲ್‌ ಕಳೆದ ಕೆಲವು ದಿನಗಳಿಂದ ಪಟ್ಟಣದಲ್ಲಿರುವ ತಮ್ಮ ಮನೆಯಲ್ಲಿಯೇ ವಾಸವಾಗಿದ್ದ. ಈ ಮುನ್ನ ಅವನ ಮೇಲೆ 12ಕ್ಕೂ ಅಧಿಕ ಪ್ರಕರಣ ಇರುವ ಹಿನ್ನೆಲೆಯಲ್ಲಿ ಪೊಲೀಸರ ವರದಿ ಮೇರೆಗೆ ಗದಗ ಜಿಲ್ಲಾಧಿಕಾರಿಗಳು ಗೂಂಡಾ ಕಾಯ್ದೆಯಡಿ ಆತನನ್ನು ಬಂಧಿಸುವಂತೆ ಆದೇಶ ಹೊರಡಿಸಿದ್ದರು.

ಅವರ ಸೂಚನೆ ಮೇರೆಗೆ ಪೊಲೀಸರು ಬಂಧಿಸಿಲು ತೆರಳಿದ್ದಾಗ ಈ ಘಟನೆ ನಡೆದಿದೆ. ಅಬ್ದುಲ್‌ ಹಾಗೂ ಅವನ ಬೆಂಬಲಿಗರು ಕೆಲಕಾಲ ಪೊಲೀಸರೊಂದಿಗೆ ವಾಗ್ವಾದ, ತಳ್ಳಾಟ- ನೂಕಾಟ ಸಹ ನಡೆಸಿದ್ದಾರೆ. ಅಲ್ಲದೆ ಆತನ ಸಹಚರರು ಬಂಧಿಸಲು ಬಂದ ಪೊಲೀಸರರಿಗೆಯೇ ಚಾಕು ತೋರಿಸಿ ಅಲ್ಲಿಂದ ಆರೋಪಿ ಪರಾರಿಯಾಗಲು ಸಹಾಯ ಮಾಡಿದ್ದಾರೆ.

ಪರಾರಿಯಾಗಿರುವ ಅರೋಪಿ ಅಬ್ದುಲ್​ ಪತ್ತೆ ಹಚ್ಚಿ ಬಂಧನ ಮಾಡಲು ವಿಶೇಷ ತಂಡಗಳನ್ನು ರಚಿಸಿದ್ದೇವೆ ಎಂದು ಎಸ್ಪಿ ಅವರು ತಿಳಿಸದರು. ಇನ್ನೂ ಘಟನೆಗೆ ಸಂಬಂಧಿಸಿದಂತೆ ಪುರಸಭೆ ಸದಸ್ಯ ಫಿರ್ದೊಷ್‌ ಆಡೂರ, ಇಸ್ಮಾಯಿಲ್‌ ಆಡೂರ, ಮೊಹಮ್ಮದ್‌ ಆಡೂರ, ನೌಶಾದ ಆಡೂರ, ಅತ್ತಾರಸಾಬ ಆಡೂರ, ನಿಜಾಮುದ್ದೀನ್‌ ಚಂಗಾಪೂರಿ, ಸುಲೇಮಾನ್‌ ಆಡೂರ ಹಾಗೂ ಬೆಂಬಲಿಗರು ಸೇರಿದಂತೆ 10ಕ್ಕೂ ಹೆಚ್ಚು ಜನರ ಮೇಲೆ ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದು, ತನಿಖೆ ಮುಂದುವರೆದಿದೆ.

ಇಸದನ್ನೂ ಓದಿ :ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಮಾಡಿದ ಆರೋಪ : ಪಿಡಿಒ ಅಮಾನತು

Last Updated : Feb 2, 2023, 12:32 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.