ETV Bharat / state

ಸರ್ಕಾರದ ಬೊಕ್ಕಸ ಬರಿದಾಗಿದೆ, ಸ್ವಲ್ಪ ಟೈಮ್​ ಕೊಡ್ರಿ: ನೆರೆ ಸಂತ್ರಸ್ತರಿಗೆ ಸಚಿವ ಪಾಟೀಲ್​ ಮನವಿ - Minister CC patil in gadaga

ರೋಣ ತಾಲೂಕಿನ ಹೊಳೆ ಆಲೂರ ಗ್ರಾಮಕ್ಕೆ ಸಚಿವ ಸಿ ಸಿ ಪಾಟೀಲ್ ಭೇಟಿ ನೀಡಿದ್ದರು. ಜನರ ಸಮಸ್ಯೆ ಆಲಿಸಿದರು. ಬಳಿಕ ಮಾತನಾಡಿದ ಅವರು, ಸರ್ಕಾರದ ಬಳಿ ಸದ್ಯಕ್ಕೆ ಹಣವಿಲ್ಲ, ಬೊಕ್ಕಸ ಖಾಲಿಯಾಗಿದೆ. ಸರ್ಕಾರ ನಿಮ್ಮೊಂದಿಗಿದ್ದು, ಸ್ವಲ್ಪ ಟೈಮ್​ ಕೊಡ್ರಿ, ಎಲ್ಲ ಸರಿ ಮಾಡುತ್ತೇವೆ ಎಂದು ಸಚಿವರೇ ನೆರೆ ಸಂತ್ರಸ್ತರಿಗೆ ಮನವಿ ಮಾಡಿದ್ದಾರೆ.

ಹೊಳೆ ಆಲೂರ ಗ್ರಾಮಕ್ಕೆ ಭೇಟಿ ನೀಡಿದ ಸಿಸಿ ಪಾಟೀಲ್​​
author img

By

Published : Oct 25, 2019, 1:03 PM IST

ಗದಗ: ಸರ್ಕಾರದಿಂದ ನೆರೆ ಪರಿಹಾರಕ್ಕಾಗಿ ಎಷ್ಟು ಹಣ ಖರ್ಚಾಗೈತಿ ಅನ್ನೋದು ನಿಮ್ಗ ಗೊತ್ತದ. ನಮ್ಗೂ ಎಂಎಲ್​ಎ ಫಂಡ್​ ಕೂಡ ಬರ್ತಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ ಸಿ ಪಾಟೀಲ್​ ಅವರೇ ಜನರೆದುರು ಸರ್ಕಾರದ ಬೊಕ್ಕಸ ಖಾಲಿ ಆಗಿರುವ ಸುಳಿವು ನೀಡಿದ್ದಾರೆ.

ರೋಣ ತಾಲೂಕಿನ ಹೊಳೆ ಆಲೂರು ಗ್ರಾಮಕ್ಕೆ ಭೇಟಿ ನೀಡಿದ್ದ ಅವರು, ನೆರೆ ಸಂತ್ರಸ್ತರ ಸಮಸ್ಯೆಗಳನ್ನು ಆಲಿಸಿದ್ರು. ಸ್ಥಳೀಯರೊಂದಿಗೆ ಮಾತನಾಡಿ, ರಸ್ತೆ ರಿಪೇರಿಗೆ ಒಂದು ಹಿಡಿ‌ ಮಣ್ಣು ಹಾಕಿಸಲಿಕ್ಕೂ ನಮ್ಮಲ್ಲಿ ಹಣ ಇಲ್ಲ. ಎಲ್ಲವೂ ಪ್ರವಾಹದ ಪರಿಸ್ಥಿತಿ ಸುಧಾರಿಸಲು ಖರ್ಚಾಗುತ್ತಿದೆ ಎಂದು ತಮ್ಮ ಅಳಲನ್ನೇ ತೋಡಿಕೊಂಡಿದ್ದಾರೆ.

ಹೊಳೆ ಆಲೂರು ಗ್ರಾಮಕ್ಕೆ ಭೇಟಿ ನೀಡಿದ್ದ ಸಚಿವ ಸಿ ಸಿ ಪಾಟೀಲ್​​

ಗಣಿ ಮತ್ತು‌ ಭೂ ವಿಜ್ಞಾನ ಹಾಗೂ ಅರಣ್ಯ ಈ ಎರಡೂ ಖಾತೆಗಳನ್ನು ಹೊಂದಿರುವ ಸಚಿವ ಸಿ ಸಿ ಪಾಟೀಲ್, ಪ್ರವಾಹಕ್ಕೀಡಾಗಿರೋ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮಕ್ಕೆ ಭೇಟಿ ನೀಡಿದಾಗ ಸರ್ಕಾರದ ಬಳಿ ಸದ್ಯಕ್ಕೆ ಹಣ ಇಲ್ಲ ಅನ್ನು ಸಂಗತಿಯನ್ನು ತೆರೆದಿಟ್ಟಿದ್ದಾರೆ.

Intro:ಸರಕಾರದ ಬೊಕ್ಕಸ ಖಾಲಿ ಖಾಲಿ.....ನೆರೆ ಸಂತ್ರಸ್ಥರ ಮುಂದೆಯೇ ಸರಕಾರದಲ್ಲಿ ಹಣವಿಲ್ಲ ಅಂತ ಹೇಳಿಕೊಂಡ ಸಚಿವ ಸಿ ಸಿ ಪಾಟೀಲ್.......ರಸ್ತೆ ರಿಪೇರಿಗೆ ಒಂದು ಹಿಡಿ‌ ಮಣ್ಣು ಹಾಕಿಸಲಿಕ್ಕೂ ನಮ್ಮಲ್ಲಿ ಹಣವಿಲ್ಲ......ಎಂಎಲ್ ಎ ಫಂಡ್ ಸಹ ಬರ್ತಾ ಇಲ್ಲ ಅಂತ ಅಳಲು ತೋಡಿಕೊಂಡ ಸಚಿವ

ಆಂಕರ್-ಸದ್ಯದ ಬಿಜೆಪಿ ಸರಕಾರದ ಖಜಾನೆಯಲ್ಲಿ ಒಂದು ನಯಾ‌ಪೈಸೆ ದುಡ್ಡಿಲ್ಲ ಅಂತ ಸ್ವತಃ ಸಚಿವರೇ ಸರ್ಕಾರದ ಖಜಾನೆ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಹೌದು, ಗಣಿ ಮತ್ತು‌ ಭೂ ವಿಜ್ಞಾನ ಹಾಗೂ ಅರಣ್ಯ ಖಾತೆ ಸೇರಿದಂತೆ ಎರಡೂ ಖಾತೆಗಳನ್ನು ಒಳಗೊಂಡಿರೋ ಸಚಿವ ಸಿ ಸಿ ಪಾಟೀಲ್, ಪ್ರವಾಹ ಸಂತ್ರಸ್ತರ ಮುಂದೆ ಈ ಸಂಗತಿಯನ್ನು ತೆರೆದಿಟ್ಟಿದ್ದಾರೆ. ಪ್ರವಾಹಕ್ಕೀಡಾಗಿರೋ ಗದಗ ಜಿಲ್ಲೆಯ ರೋಣ ತಾಲೂಕಿನ ಹೊಳೆ ಆಲೂರ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತರೆದುರು ಸಿ ಸಿ ಪಾಟೀಲ್ ಈ ಸಂಗತಿ ಹೇಳಿಕೊಂಡಿದ್ದು, ಸರಕಾರದಲ್ಲಿ ಹಣವಿಲ್ಲ ಮಾರಾಯ್ರೆ, ರಸ್ತೆ ರಿಪೇರಿಗೆ ಒಂದು ಹಿಡಿ ಮಣ್ಣು ಹಾಕಿಸಬೇಕಂದ್ರೂ ದುಡ್ಡಿಲ್ಲ, ನಮಗೆ ಬರೋ ಎಂಎಲ್ ಎ ಫಂಡ್ ಕೂಡಾ ಬರ್ತಿಲ್ಲ. ಎಲ್ಲ ಅನುದಾನವನ್ನೂ ಪ್ರವಾಹದ ಪರಿಹಾರಕ್ಕೆ ಬಳಸಲಾಗ್ತಿದೆ. ಎಲ್ಲಾ ದುಡ್ಡನ್ನು ಪ್ರವಾಹ ಪೀಡಿತ ಪ್ರದೇಶಗಳಿಗೆ ಖರ್ಚು ಮಾಡ್ತಿರೋ ವಿಚಾರ ನಿಮ್ಗೆಲ್ಲಾ ಗೊತ್ತಿದೆ ಅಂತ ನೆರೆ ಸಂತ್ರಸ್ತರ ಮುಂದೆ ಸರ್ಕಾರದ ಅಸಹಾಯಕತೆಯನ್ನು ತೆರೆದಿಟ್ರು.
Body:GConclusion:G
ETV Bharat Logo

Copyright © 2025 Ushodaya Enterprises Pvt. Ltd., All Rights Reserved.