ಗದಗ: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಈಗ ರಾಜ್ಯ ಸರ್ಕಾರ ಕೆಲವು ಜಿಲ್ಲೆಗಳನ್ನು ಸೀಲ್ಡೌನ್ ಮಾಡಲು ಮುಂದಾಗಿದೆ.
ಗದಗ ಜಿಲ್ಲೆಯನ್ನು ಕೂಡ ಸೀಲ್ಡೌನ್ಗೆ ಒಳಪಡಿಸುವ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಜಿಲ್ಲೆಯಲ್ಲಿ 80 ವರ್ಷದ ವೃದ್ಧೆ ಸೋಂಕಿನಿಂದ ಸಾವನ್ನಪ್ಪಿದ್ದರು. ಆದರೆ, ಎಲ್ಲೂ ಹೋಗದಿರುವ ಅಜ್ಜಿಗೆ ಸೋಂಕು ಹೇಗೆ ತಗುಲಿತು ಎಂಬ ಪ್ರಶ್ನೆ ಜಿಲ್ಲೆಯ ಜನರನ್ನು ಕಾಡತೊಡಗಿದೆ. ಈ ಹಿನ್ನೆಲೆಯಲ್ಲಿ ಕಚ್ಚೆಚ್ಚರವಹಿಸಲಾಗಿದೆ.
ಜೊತೆಗೆ ಅಜ್ಜಿ ಸಂಪರ್ಕದಲ್ಲಿದ್ದವರ ವರದಿಯೂ ನೆಗೆಟಿವ್ ಬಂದಿದ್ದು, ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದನ್ನು ಪತ್ತೆ ಹಚ್ಚಲು ಜಿಲ್ಲಾಡಳಿತ ಸಾಕಷ್ಟು ಶ್ರಮಿಸುತ್ತಿದೆ. ಜೊತೆಗೆ ಈ ವೈರಸ್ ಸಮುದಾಯಕ್ಕೆ ಹರಡಬಾರದು ಎಂಬ ದೃಷ್ಟಿಯಿಂದ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಹೈಅಲರ್ಟ್ ಘೋಷಿಸಿದೆ.
ಏಕಾಏಕಿ ಸೀಲ್ಡೌನ್ ಜಾರಿಯಾದರೆ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ ಎಂಬ ದೃಷ್ಟಿಯಿಂದಲೂ ಹಂತ ಹಂತವಾಗಿ ಮಾರುಕಟ್ಟೆ ಹಾಗೂ ರಸ್ತೆಗಳನ್ನ ಬಂದ್ ಮಾಡಲಾಗುತ್ತಿದೆ. ಗದಗ ಸೀಲ್ಡೌನ್ ಆಗುತ್ತೊ, ಇಲ್ಲವೋ ಎಂಬುದು ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿರ್ಧಾರದ ಮೇಲಿದೆ.