ETV Bharat / state

ಬರೀ 6 ರೂಪಾಯಿಗೆ 40 ಕಿ.ಮೀ. ಮೈಲೇಜ್​​​... ವಿದ್ಯಾರ್ಥಿಯಿಂದ ವಿನೂತನ ಆವಿಷ್ಕಾರ! - ಬ್ಯಾಟರಿ ಚಾಲಿತ ಸೈಕಲ್ ಆವಿಷ್ಕಾರ

ಗದಗದ ಒಕ್ಕಲಗೇರಿ ನಿವಾಸಿ ಹಬೀಬ್ ಎಂಬಾತ ಯಾರ ಸಹಾಯವನ್ನೂ ಪಡೆಯದೆ ಸ್ವತಃ ಬ್ಯಾಟರಿ ಚಾಲಿತ ಸೈಕಲ್​ ಆವಿಷ್ಕರಿಸಿದ್ದಾನೆ. ಗುಜರಿಗೆ ಸೇರಿದ್ದ ಹಳೆಯ ಸೈಕಲ್​ ಬಳಸಿ ಈ ಎಲೆಕ್ಟ್ರಿಕ್ ಸೈಕಲ್​ ತಯಾರಿಸಿದ್ದಾನೆ.

student-invented-a-bicycle-that-gives-40-km-mileage-for-only-6-rupees
ವಿದ್ಯಾರ್ಥಿ ತಯಾರಿಸಿದ ವಿನೂತನ ಸೈಕಲ್​​
author img

By

Published : Mar 11, 2021, 8:48 PM IST

Updated : Mar 12, 2021, 9:14 AM IST

ಗದಗ: ಪೆಟ್ರೋಲ್, ಡೀಸೆಲ್​​​​ ಬೆಲೆ ಗಗನಕ್ಕೇರುತ್ತಿದ್ದಂತೆ ಜನತೆ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಆದರೆ ಗದಗ​ದ ಓರ್ವ ಯುವಕ ತಾನೇ ಎಲೆಕ್ಟ್ರಿಕ್ ಸೈಕಲ್ ತಯಾರಿಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾನೆ.

ಗದಗ್​​ನ ಒಕ್ಕಲಗೇರಿ ನಿವಾಸಿ ಹಬೀಬ್ ಎಂಬಾತ ಯಾರ ಸಹಾಯವನ್ನೂ ಪಡೆಯದೆ ಸ್ವತಃ ಬ್ಯಾಟರಿ ಚಾಲಿತ ಸೈಕಲ್​ ಆವಿಷ್ಕರಿಸಿದ್ದಾನೆ. ಗುಜರಿಗೆ ಸೇರಿದ್ದ ಹಳೆಯ ಸೈಕಲ್​ ಬಳಸಿ ಈ ಎಲೆಕ್ಟ್ರಿಕ್ ಸೈಕಲ್​ ತಯಾರಿಸಿದ್ದಾನೆ.

ವಿದ್ಯಾರ್ಥಿ ತಯಾರಿಸಿರುವ ವಿನೂತನ ಸೈಕಲ್​​

16 ವರ್ಷದ ಹಬೀಬ್​​ ಮೊದಲ ವರ್ಷದ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದಾನೆ. ಇದೀಗ ಈತ ತಯಾರಿಸಿರುವ ಸೈಕಲ್ ಕೇವಲ 6 ರೂಪಾಯಿಗೆ 30ರಿಂದ 40 ಕಿ.ಮೀಟರ್​​​ನಷ್ಟು ಮೈಲೇಜ್ ನೀಡುತ್ತಿದೆ. ಸೈಕಲ್​​​ಗೆ 12 ವೋಲ್ಟ್​​​ನ ಎರಡು ಬ್ಯಾಟರಿ, 24 ವೋಲ್ಟ್​​ ಗೇರ್ಡ್​​​​​ ಮೋಟಾರ್​ ಅಳವಡಿಸಿದ್ದು, ಬ್ಯಾಟರಿ ಸಂಪರ್ಕ ಕಲ್ಪಿಸಿ ಚಾರ್ಜ್​ ಮಾಡಿದರೆ ಸೈಕಲ್ ಎಲೆಕ್ಟ್ರಿಕ್ ಸೈಕಲ್ ಆಗಿ ಬದಲಾಗುತ್ತದೆ.

ಇದರ ಇನ್ನೊಂದು ಅನುಕೂಲವೆಂದರೆ ದಾರಿಯಲ್ಲಿ ಬ್ಯಾಟರಿಯಲ್ಲಿನ ಚಾರ್ಜ್ ಮುಗಿದರೂ ಪೆಡಲ್​ ಮೂಲಕ ತುಳಿದುಕೊಂಡು ಬರಬಹುದಾಗಿದೆ. ಈ ಎಲೆಕ್ಟ್ರಿಕ್ ಸೈಕಲ್ ಕೇವಲ 9 ಸಾವಿರ ರೂಪಾಯಿಯಲ್ಲಿ ತಯಾರಾಗಿದೆ. ಈ ವಿದ್ಯಾರ್ಥಿಯ ಸಾಧನೆ ಕಂಡು ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಲಾಕ್​​ಡೌನ್​​​​​​ ವೇಳೆ ಎಲೆಕ್ಟ್ರಿಕ್ ಬೈಕ್ ತಯಾರಿಸಿದ 10ನೇ ತರಗತಿ ವಿದ್ಯಾರ್ಥಿ.. ಖರ್ಚಾಗಿದೆಷ್ಟು ಗೊತ್ತಾ..?

Last Updated : Mar 12, 2021, 9:14 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.