ETV Bharat / state

ಹುಟ್ಟುತ್ತಲೇ ತಾಯಿ ಸಾವು, ತಂದೆಗೆ ಪಾರ್ಶ್ವವಾಯು: ಇಂಗ್ಲಿಷ್​ ಮೀಡಿಯಂನಲ್ಲಿ ಶೇ.90 ಅಂಕ ಗಳಿಸಿದ ಛಲಗಾತಿ - SSLC Exam result

ಹುಟ್ಟುತಲೇ ತಾಯಿ ಸಾವು, ಬೆಳೆಯುತ್ತಾ ತಂದೆಗೆ ಪಾರ್ಶ್ವವಾಯು,​ ಪ್ರತಿದಿನ ಊದುಕಡ್ಡಿ(ಅಗರಬತ್ತಿ) ಫ್ಯಾಕ್ಟರಿಯಲ್ಲಿ ₹ 50-100 ದುಡಿಯುತ್ತಿದ್ದ ವಿದ್ಯಾರ್ಥಿನಿ ಓಂಕಾರಿ ಕಲಾಲ್, ಸಾಧನೆಗೆ ಬಡತನ ಅಡ್ಡಿ ಅಲ್ಲ ಎಂಬುದನ್ನು ಉತ್ತಮ ಅಂಕ ಗಳಿಸುವ ಮೂಲಕ ತೋರಿಸಿದ್ದಾಳೆ.

SSLC Exam result
ತಂದೆ ಮತ್ತು ಮಗಳು
author img

By

Published : Aug 11, 2020, 3:09 PM IST

Updated : Aug 11, 2020, 3:31 PM IST

ಗದಗ: ಕಿತ್ತು ತಿನ್ನುವ ಬಡತನದ ನಡುವೆಯೂ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಇಂಗ್ಲಿಷ್​ ಮಾಧ್ಯಮದಲ್ಲಿ ಶೇ.90.80 ಅಂಕ ಗಳಿಸಿ ವಿದ್ಯಾರ್ಥಿನಿ ಓಂಕಾರಿ ಕಲಾಲ್ ಗಮನಾರ್ಹ ಸಾಧನೆ ಮಾಡಿದ್ದಾಳೆ.

ಹುಟ್ಟುತ್ತಲೇ ತಾಯಿ ಸಾವನ್ನಪ್ಪಿದ್ದರು. ಬೆಳೆಯುತ್ತಾ ತಂದೆ ಪಾರ್ಶ್ವವಾಯುಗೆ ಒಳಗಾದರು. ಊದುಕಡ್ಡಿ(ಅಗರಬತ್ತಿ) ಫ್ಯಾಕ್ಟರಿಯಲ್ಲಿ ಪ್ರತಿದಿನ ₹ 50-100 ದುಡಿಯುತ್ತಾ ಬದುಕಿನ ಬಂಡೆ ಎಳೆಯುತ್ತಿದ್ದ ಓಂಕಾರಿ ಕಲಾಲ್, ಸಾಧನೆಗೆ ಬಡತನ ಅಡ್ಡಿ ಅಲ್ಲ ಎಂಬುದನ್ನು ಸಾಬೀತು ಮಾಡಿದ್ದಾಳೆ.

SSLC Exam result
ಮನೆಯೊಳಗಿನ ಚಿತ್ರಣ

ಮುಂದೆ ಐಎಎಸ್​ ಮಾಡುವ ಕನಸು ಕಂಡಿರುವ ಓಂಕಾರಿ, ಜೀವನ ಅದಕ್ಕೆ ಸಹಕರಿಸಬೇಕಲ್ಲವೇ ಎಂದು ಬೇಸರ ವ್ಯಕ್ತಪಡಿಸುತ್ತಾಳೆ. ಯಾರಾದರೂ ದಾನಿಗಳು ನನ್ನ ಓದಿಗೆ ನೆರವಾದರೆ ಅಂದುಕೊಂಡಿರುವ ಗುರಿಯನ್ನು ಮುಟ್ಟುವೆ ಎಂದು ಭರವಸೆಯ ಮಾತುಗಳನ್ನಾಡಿದ್ದಾಳೆ. ಈ ಛಲಗಾತಿ 'ಈಟಿವಿ ಭಾರತ'ದೊಂದಿಗೆ ಮಾತನಾಡಿದ್ದಾಳೆ.

ಕಡುಬಡತನದಲ್ಲೂ ಸಾಧನೆಗೈದ ವಿದ್ಯಾರ್ಥಿನಿ ಓಂಕಾರಿ 'ಈಟಿವಿ ಭಾರತ'ದೊಂದಿಗೆ ಮಾತು

Last Updated : Aug 11, 2020, 3:31 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.